ರೋಡ್ ರಾಬರಿಗೆ ಬಂದವರಿಂದ ಗ್ಯಾಂಗ್ ರೇಪ್, ಪೋಲಿಸರಿಗೆ ಸುಳಿವು ಕೊಟ್ಟಿತ್ತು “ಆ ನೆಟ್ ವರ್ಕ್ “

 

ಮೈಸೂರು:28 ಆಗಸ್ಟ್ 2021

ಕ್ರೈಂ ರಿಪೋರ್ಟ್:ನ@ದಿನಿ

                 ಒಬ್ಬ ಕಾರ್ಪೆಂಟರ್,ಮತ್ತೊಬ್ಬ ವೈರಿಂಗ್ ಕೆಲಸ ಮಾಡುತ್ತಿದ್ದ,ಇನ್ನೊಬ್ಬ ಡ್ರೈವರ್ ಆಗಿದ್ದ. ಒಬ್ಬ 17 ವರ್ಷದ ಅಪ್ರಾಪ್ತ.ರೋಡ್ ರಾಬರಿ ಮಾಡುತ್ತಿದ್ದ ಆ 6 ಮಂದಿ ಅಂದು ಯುವತಿ ಮೇಲೆ ಅತ್ಯಾಚಾರ ಮಾಡಿದ್ರು .ಅಲ್ಲಿ ಬೀದಿ ದೀಪ ಇಲ್ಲ,ಸಿಸಿಟಿವಿ ಕ್ಯಾಮರ ಇಲ್ಲ,ಅಲ್ಲಿ ಯಾವುದೇ ಸುಳಿವು ಸಿಗಲ್ಲ ನಾವು ಪೋಲಿಸರಿಗೆ ಸಿಕ್ಕಲ್ಲ ಅಂತ ಎಸ್ಕೇಪ್ ಆಗಿದ್ರು,ಅತ್ಯಾಚಾರಿಗಳೂ ಚಾಪೆ ಕೆಳಗೆ ನುಗಿದ್ರೇ ಪೋಲಿಸರು ರಂಗೋಲಿ ಕೆಳಗೆ ನುಗ್ಗಿ ಕಾಮಾಂಧರ ಹೆಡಿಮುರಿ ಕಟ್ಟಿದ್ದಾರೆ.

   (ಅತ್ಯಾಚಾರಿಗಳ ಹೆಡಿಮುರಿ ಕಟ್ಟಿದ ಖಾಕಿ ಟೀಂ)

          ಹೌದು,ಆಗಸ್ಟ್ 24 ರಂದು ಮೈಸೂರಿನ ಲಲಿತಾದ್ರೀಪುರದ ನಿರ್ಜನ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿಬಿಟ್ಟಿತ್ತು.
ಅದೊಂದು ನೆಟ್ ವರ್ಕ್ ,ಬಸ್ ಟಿಕೇಟ್ ಅತ್ಯಾಚಾರಿಗಳ ಸುಳಿವು ನೀಡಿತ್ತು. ಪ್ರತಾಪ್ ರೆಡ್ಡಿ,ಆಯುಕ್ತರು,ಐಜಿ,ಡಿಸಿಪಿ,ಇನ್ಸ್‌ಪೆಕ್ಟರ್, ಸಿಡಿಆರ್ 7 ತಂಡ ಘಟನೆ ನಡೆದು 86 ಗಂಟೆ ಬಳಿಕ ಅತ್ಯಾಚಾರಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

                ಅತ್ಯಾಚಾರ ಕೇಸ್ ನಲ್ಲಿ ಆರು ಮಂದಿ ಆರೋಪಿಗಳಿದ್ದದು,ಒಬ್ಬ ತಲೆ ಮರೆಸಿಕೊಂಡಿದ್ದಾನೆ. ತಮಿಳುನಾಡಿ ನಲ್ಲಿ ಬಂಧಿಸಲಾಗಿದೆ.
ಪ್ರಕರಣದಲ್ಲಿ ನಮಗೆ ಸೂಕ್ತ ಮಾಹಿತಿ ಸಿಕ್ಕಿರಲಿಲ್ಲ.ತಾಂತ್ರಿಕತೆ ಬಳಸಿಕೊಂಡು ಆರೋಪಿಗಳ ಪತ್ತೆ ಆಗಿದೆ.ಬಂಧಿತರಲ್ಲಿ ಕೆಲವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ.ಇನ್ನೂ ಹೆಚ್ಚಿನ ವಿಚಾರಣೆ ನಡೆಸಬೇಕು. ಟೆಕ್ನಿಕಲ್,ಸೈಂಟಿಫಕ್ ಸಾಕ್ಷ್ಯ,
ಮೊಬೈಲ್ ನೆಟ್ ವರ್ಕ್ ಟ್ರೇಸ್
ಮೂಲಕ ಪ್ರಕರಣವನ್ನು ಭೇದಿಸಲಾಗಿದೆ.

ಬಂಡಿಪಾಳ್ಯ ಎಪಿಎಂಸಿಗೆ ಪ್ರಕರಣದಲ್ಲಿ ಇದ್ದ ಒಬ್ಬ ಡ್ರೈವರ್ ಜೊತೆ ತರಕಾರಿ ತಗೆದುಕೊಳ್ಳಲು ಬರ್ತಾ ಇದ್ರು.ರಾಬರಿ ಮಾಡೋಕೆ ಬಂದು ರೇಪ್ ಮಾಡಿರೋ ಸಾಧ್ಯತೆ ಇದೆ.ಎಲ್ಲಾ ಆರೋಪಿಗಳು ಓದಿಲ್ಲಾ.. ಒಬ್ಬ 8ನೇ ಕ್ಲಾಸ್ ಓದಿದ್ದಾನೆ.ಮತ್ತೊಬ್ಬ 7ನೇ ಕ್ಲಾಸ್ ಓದಿದ್ದಾನೆ ಅಷ್ಟೆ..ಸಂತ್ರಸ್ತೆ ಯಾವುದೇ ಮಾಹಿತಿ ನೀಡಿಲ್ಲ.ಅತ್ಯಾಚಾರವಾದ
ಯುವತಿಯ ಸ್ನೇಹಿತನಿಂದ ಒಂದಷ್ಟು ಮಾಹಿತಿ ಸಿಕ್ಕಿತ್ತು. ಐದು ಮಂದಿ ಬಗ್ಗೆ ಹೆಚ್ಚು ಮಾಹಿತಿ ನೀಡಲು ಸಾಧ್ಯವಿಲ್ಲ. ನಮ್ಮ ಪೊಲೀಸ್ ಟೀಮ್ , ಎಫ್ಎಸ್ ಎಲ್ .ಟೀಮ್ ಇನ್ನು ವರ್ಕ್ ಮಾಡ್ತಿದ್ದಾರೆ.ಆರೋಪಿಗಳ ವಿರುದ್ಧ ತಮಿಳುನಾಡಿನಲ್ಲಿ ಸಣ್ಣ ಪುಟ್ಟ ಕೇಸ್ ಗಳಿವೆ.
ಅರೆಸ್ಟ್ ಮೊದಲ ಹಂತ ಯಾವಾಗ ಆರೋಪಿಗಳಿಗೆ ಶಿಕ್ಷೆಯಾಗುತ್ತೆ ಆಗ ನಮಗೆ ಖುಷಿಯಾಗುತ್ತದೆ. ಪ್ರಕರಣ ಭೇದಿಸಿದ ಪೋಲೀಸರ ತಂಡಕ್ಕೆ ೫ ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

                    ಒಟ್ಟಾರೆ ಹೇಳೋದಾದರೇ
ಗ್ಯಾಂಗ್ ರೇಪ್ ಪ್ರಕರಣ ಪೋಲಿಸರನ್ನ ನಿದ್ದೇಗೆಡಿಸುವಂತೆ ಮಾಡಿತ್ತು.ಅದೊಂದು ನೆಟ್ ವರ್ಕ್ ಅತ್ಯಾಚಾರಿಗಳ ಸಿಗ್ನಲ್ ನೀಡಿತ್ತು.ಅದೇ ಪೋಲಿಸರಿಗೆ ಆರೋಪಿಗಳ ಬಂಧಿಸೋಕೆ ಸಹಾಯ ಮಾಡಿತ್ತು.ಅದೇನೇ ಆಗಲೀ ಮಹಿಳೆಗೆ ಅನ್ಯಾಯವಾದ ನಂತರ ಮಹಿಳೆಯರನ್ನ ಗೌರವಿಸಿ,ರಕ್ಷಣೆ ನೀಡುತ್ತೇವೆ ಎಂದು ಹೇಳೋದಲ್ಲ ಮಹಿಳೆಯ ಮೇಲೆ ದೌರ್ಜನ್ಯ,ಅನ್ಯಾಯ ವಾಗದ ರೀತಿ ಸರ್ಕಾರ ನೋಡಿಕೊಳ್ಳಬೇಕಿದೆ.

 

Leave a Reply

Your email address will not be published. Required fields are marked *