ಕರ್ನಾಟಕ ರಾಜ್ಯದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪದಾಧಿಕಾರಿಗಳ ಪ್ರತಿಷ್ಠಾಪನಾ ಸಮಾರಂಭ

ನಂದಿನಿ ಮೈಸೂರು

ಮೈಸೂರಿನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪದಾಧಿಕಾರಿಗಳ ಪ್ರತಿಷ್ಠಾಪನಾ ಸಮಾರಂಭವನ್ನು 2024 ರಂದು ನಡೆಸಲಾಯಿತು.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸನ ಹಿಂದಿನ ರಾಷ್ಟ್ರೀಯ ಅಧ್ಯಕ್ಷರಾದ ಡಾ ಸಂತೋಷ್ ಸೋನ್ಸ್ ಅವರು ಡಾ ಎಸ್‌ಎನ್ ಮೋತಿ ಅವರನ್ನು ಅಧ್ಯಕ್ಷರಾಗಿ ಕಾರ್ಯದರ್ಶಿಯಾಗಿ ಡಾ ಶಶಿಕಿರಣ್ ಮತ್ತು ಕೋಶಾಧಿಕಾರಿಯಾಗಿ ಡಾ ಶ್ರೀಯಾನ್ ಅಶ್ವಿಜ್ ಅವರನ್ನು ಪ್ರತಿಷ್ಠಾಪಿಸಿದರು.
ಈ ವರ್ಷದ ಕರ್ನಾಟಕದ ಅಧ್ಯಕ್ಷರಾಗಿ ಡಾ.ಎಸ್.ಎನ್.ಮೋತಿ ಮತ್ತು ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದವರೇ ಆದ ಡಾ.ಬಸವರಾಜ್ ಇವರ ಜಂಟಿ ನಾಯಕತ್ವದೊಂದಿಗೆ ಮಹತ್ವಪೂರ್ಣವಾದ ಬದಲಾವಣೆಗಳನು ನೋಡುವ ಆಶಯವನು ವ್ಯಕ್ತ ಪಡಿಸಿದರು.
ಮಕ್ಕಳ ಸಂಘಗಳು ಕೇವಲ ಮಕ್ಕಳ ವೈದ್ಯರ ಶೈಕ್ಷಣಿಕ ಸಂಸ್ಥೆಗಳಾಗಿರದೆ, ಮಕ್ಕಳು ಮತ್ತು ನವಜಾತ ಶಿಶುಗಳ ಸಮುದಾಯ ಮಟ್ಟದ ಆರೋಗ್ಯ ರಕ್ಷಣೆಯಲ್ಲಿ ಭಾಾಗವಹಿಸುತತ್ತಿವೆ ಎಂದು ಅವರು ಶ್ಲಾಘಿಸಿದರು.

ಡಾ. ಪ್ರಶಾಂತ್ ಎಂಆರ್, ಡಾ ಶಂಕರ್ ಪ್ರಸಾದ್, ಮತ್ತು ಡಾ ತೃಪ್ತಿ, IAP ಮೈಸೂರು ಜಿಲ್ಲಾ 2024 ನ,ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಚಿ ಆಗಿ ಇಂದು ಇದೇ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. ಹದಿಹರೆಯದ ಆರೋಗ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷೆ ಡಾ.ಗೀತಾ ಪಾಟೀಲ್ ಅವರು ಹದಿಹರೆಯದವರ ಆರೋಗ್ಯದ ಬಗ್ಗೆ ಗಮನಹರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಅವರು ಮೈಸೂರು ಅಡೋಲೆಸೆಂಟ್ ಹೆಲ್ತ್ ಅಕಾಡೆಮಿಯ ಪದಾಧಿಕಾರಿಗಳಾದ ಡಾ.ಯು.ಜಿ.ಶೆಣೈ, ಡಾ.ಮಾನಿನಿ ಮುದಗಲ್ ಮತ್ತು ಡಾ.ಕನ್ಯಾ ಎಂ.ಎಸ್. ಅವರ ಪದಗ್ರಹಣವನ್ನು ನೆರವೇರಿಸಿದರು,

Leave a Reply

Your email address will not be published. Required fields are marked *