ವ್ಯಾನಿಟಿ ಬ್ಯಾಗಿನಲ್ಲಿದ್ದ ಚಿನ್ನ ಎಗರಿಸಿದ್ದವ ಅಂದರ್

ಹುಣಸೂರು:25 ಮೇ 2022

ನಂದಿನಿ ಮೈಸೂರು

ಹುಣಸೂರು ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಕೆ. ಆರ್.ನಗರ ಕಡೆಗೆ ಹೋಗುವ ಬಸ್ ಹತ್ತುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗಿನಲ್ಲಿದ್ದ 20 ಗ್ರಾಂ ಚಿನ್ನದ ನಕ್ಲೆಸ್ ಮತ್ತು 800 ರೂ ಹಣವನ್ನು ಎಗರಿಸುವಲ್ಲಿ ತನ್ನ ಕೈಚಳಕ ತೋರಿದ್ದ ಮೊಹಮ್ಮದ್ ಅಲಿ ಎಂಬ ಆರೋಪಿಯೊಬ್ಬನನ್ನು ಈ ದಿನ ದಿನಾಂಕ:25/05/2022 ರಂದು ಬಂಧಿಸಿರುವ ಹುಣಸೂರು ಪಟ್ಟಣ ಠಾಣೆಯ ಪೊಲೀಸರು ಆರೋಪಿಯಿಂದ ಸುಮಾರು 68 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಜೊತೆಗೆ ಬಿಳಿಕೆರೆ, ಪಿರಿಯಾಪಟ್ಟಣ ಮತ್ತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗಳ ತಲಾ ಒಂದೊಂದು ಪ್ರಕರಣ ಪತ್ತೆಯಾಗಿರುತ್ತವೆ.
ಹುಣಸೂರು ಉಪ-ವಿಭಾಗದ DYSP ಶ್ರೀ ರವಿಪ್ರಸಾದ್ ಸಾಹೇಬರ ಮಾರ್ಗದರ್ಶನದಲ್ಲಿ ಹುಣಸೂರು ಪಟ್ಟಣ ಪೊಲೀಸ್ ಠಾಣೆಯ P.I ಶ್ರೀ ಶ್ರೀನಿವಾಸ್.ಎಲ್, ನೇತೃತ್ವದಲ್ಲಿದ್ದ ಅಪರಾಧ ಪತ್ತೆ ವಿಭಾಗದ ಪಿ.ಎಸ್.ಐ ಶ್ರೀ ಲೋಕೇಶ್, ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಪ್ರಸಾದ್, ಅಪರಾಧ ಪತ್ತೆದಳದ ಸಿಬ್ಬಂದಿಯವರಾದ ಇರ್ಫಾನ್, ಭರತೇಶ್, ವೆಂಕಟೇಶ್ ಪ್ರಸಾದ್ ಮತ್ತು ಜೀಪ್ ಚಾಲಕ ಸಿದ್ದರಾಜು ರವರುಗಳ ತಂಡ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದು, ಈ ಪತ್ತೆಕಾರ್ಯವನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್. ಚೇತನ್ IPS ಸಾಹೇಬರು, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವಕುಮಾರ್ ಸಾಹೇಬರು ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *