ನಂದಿನಿ ಮೈಸೂರು
ಮೈಸೂರು ತಾಲೂಕು ಹುಯಿಲಾಳು ಗ್ರಾಮದ ಮೂರು ಅಂಗನವಾಡಿ ಕೇಂದ್ರಗಳು ಸೇರಿ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಮೂರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರಗಳನ್ನು ಹಾಗೂ ಹಿರಿಯ ನಾಗರಿಕರಿಗೆ ಅಭಿನಂದನ ಕಾರ್ಯಕ್ರಮ ವನ್ನು ಶ್ರೀ ಮನೆ ಮಂಚಮ್ಮ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಟ್ರಸ್ಟ್ ಅಧ್ಯಕ್ಷರಾದ ಹುಯಿಲಾಳು ರಾಮಸ್ವಾಮಿ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಅಂಗಡಿ ಕೃಷ್ಣಪ್ಪ ಜುಂಜಯ್ಯನ ಜವರೇಗೌಡ ತೊಂಡಳ್ಳಿ ಶಿವಣ್ಣ ಬುಲಯ್ಯನ ಸಿದ್ದೇಗೌಡ ಬೋಳೇಗೌಡರ ಧರ್ಮಪತ್ನಿ ರಾಮಮ್ಮ ಹುಯಿಲಾಳು ಮಂಜುನಾಥ್ ಪ್ರಸಾದ್ ಅಂಗನವಾಡಿ ಕಾರ್ಯ ಕರ್ತೆಯರಾದ ರೋಹಿಣಿ ರೇಣುಕಾ ಅಂಬಿಕಾ ಸಹಾಯಕಿಯರು ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು.