ನಂದಿನಿ ಮೈಸೂರು
*ಬ್ರಿಗೇಡ್ ಗ್ರೂಪ್ ಮತ್ತು ಎಕಾರ್ ಜೊತೆಯಾಗಿ ಹೋಟೆಲ್ ಐಬಿಸ್ ಸ್ಟೆಲ್ಸ್ ಮೈಸೂರು ಆರಂಭ*
ಬ್ರಿಗೇಡ್ ಗ್ರೂಪ್ ಮತ್ತು ಎಕಾರ್ಗಳ ನಡುವಿನ ನಾಲ್ಕನೇ ಹೋಟೆಲ್ ಯೋಜನೆ ಇದಾಗಿದೆ. ಇದು ಮೈಸೂರಿನಲ್ಲಿ ಬ್ರಿಗೇಡ್ ಗ್ರೂಪ್ನ 27ನೇ ಆಸ್ತಿಯಾಗಿದೆ.
ಮೈಸೂರು, ಆಗಸ್ಟ್ 17, 2024 :- ಭಾರತದ ಖ್ಯಾತ ಪ್ರಾಪರ್ಟಿ ಡೆವಲಪರ್ಗಳಲ್ಲಿ ಒಬ್ಬರಾಗಿರುವ ಬ್ರಿಗೇಡ್ ಗ್ರೂಪ್ ಮತ್ತು ಜಾಗತಿಕ ಆತಿಥ್ಯ ಕ್ಷೇತ್ರದ ಕಂಪನಿಯಾದ ಎಕಾರ್ ಮೈಸೂರಿನ ಕೆಆರ್ಎಸ್ ರಸ್ತೆಯಲ್ಲಿ ಐಬಿಸ್ ಸ್ಟೆಲ್ಸ್ ಹೋಟೆಲ್ ಆರಂಭಿಸಿರುವುದನ್ನು ಪ್ರಕಟಿಸಿವೆ. ಬ್ರಿಗೇಡ್ ಗ್ರೂಪ್ ಮತ್ತು ಎಕಾರ್ ಒಂದಾಗಿ ಮೈಸೂರಿನಲ್ಲಿ ಗ್ರಾಯಂಡ್ ಮರ್ಕ್ಯೂರ್ ಹೋಟೆಲ್ ಆರಂಭಿಸಿದ ನಂತರ ಇದು ಎರಡನೇ ಹೋಟೆಲ್ ಆಗಿರುತ್ತದೆ. ಅಲ್ಲದೆ, ಬ್ರಿಗೇಡ್ ಗ್ರೂಪ್ ಮತ್ತು ಎಕಾರ್ ನಡುವೆ ಇದು ನಾಲ್ಕನೇ ಹೋಟೆಲ್ ಯೋಜನೆಯಾಗಿದೆ.
ಸಮಕಾಲೀನ ವಿನ್ಯಾಸ ಮತ್ತು ಸಾಂಸ್ಕೃತಿಕ ಸೂಕ್ಷಮತೆಗಳ ಸಂಯೋಜನೆಯೊದಿಗೆ ಐಬಿಎಸ್ ಸ್ಟೆಲ್ಸ್ ಮೈಸೂರು ಆತಿಥ್ಯವನ್ನು ಪುನರ್ ವ್ಯಾಖ್ಯಾನಿಸುವ ಆಶಯ ಹೊಂದಿದೆ. ರಂಗನತಿಟ್ಟು ಪಕ್ಷಿಧಾಮದಲ್ಲಿನ ಪಕ್ಷಿಗಳಿಂದ ಸ್ಫೂರ್ತಿ ಹೊಂದಿರುವ ಹೋಟೆಲ್ನ ಒಳಾಂಗಣ ಪ್ರದೇಶವು ಅತಿಥಿಗಳನ್ನು ಸ್ವಾಗತಿಸುವ ವಾತಾವರಣವನ್ನು ಸೃಷ್ಟಿಸುತ್ತದೆ. ಉತ್ತಮ ರೀತಿಯಲ್ಲಿ ವಿನ್ಯಾಸಗೊಳಿಸಲಾದ 130 ರೂಮ್ಗಳೊಂದಿಗೆ ಮೈಸೂರಿನ ಐಬಿಸ್ ಸ್ಟೆಲ್ ವೈವಿಧ್ಯಪೂರ್ಣ ಅಗತ್ಯಗಳನ್ನು ಪೂರೈಸುತ್ತದೆ ಅಲ್ಲದೆ, ಪ್ರಯಾಣಿಕರಿಗೆ ಅನುಕೂಲಕರ ವಾಸ್ತವ್ಯದ ಸ್ಥಳಾವಕಾಶವನ್ನು ಸಾದರಪಡಿಸುತ್ತದೆ. ಹೋಟೆಲ್ನಲ್ಲಿ ಇರುವ 30 ಸ್ಯೂಟ್ಗಳು ಕಿಚನೆಟ್, ಖಾಸಗಿ ಬಾಲ್ಕನಿಗಳು, ವಿಸ್ತಾರವಾದ ಸ್ಥಳಾವಕಾಶ ಇರುವ ವಾಸ್ತವ್ಯ ಪ್ರದೇಶಗಳು ಮತ್ತು ಕುಟುಂಬಸ್ನೇಹಿ ರೂಮ್ಗಳನ್ನು ಹೊಂದಿರುತ್ತದೆ. ಹೋಟೆಲ್ನಲ್ಲಿ ಸಮರ್ಪಿತ ಮಕ್ಕಳ ಆಟದ ಪ್ರದೇಶವೂ ಇರುತ್ತದೆ.
ಉದ್ಘಾಟನಾ ಸಂದರ್ಭದಲ್ಲಿ ಬ್ರಿಗೇಡ್ ಗ್ರೂಪ್ನ ಕಾರ್ಯನಿರ್ವಾಹಕ ಚರ್ಮನ್ ಎಂ.ಆರ್. ಜೈಶಂಕರ್ ಅವರು ಮಾತನಾಡಿ, “ಕರ್ನಾಟಕದಲ್ಲಿ ಮೈಸೂರು ಪ್ರಮುಖ ವಿರಾಮದ ತಾಣವಾಗಿದೆ. ಪ್ರವಾಸಿಗಳಿಗೆ ಜನಪ್ರಿಯ ಪ್ರವಾಸಿ ತಾಣ ಇದಾಗಿದ್ದು, ಪಶ್ಚಿಮ ಘಟ್ಟಗಳಿಗೆ ಹೋಗುವ ಪ್ರವಾಸಿಗರಿಗೆ ವಿರಾಮದ ತಾಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕೋವಿಡ್-19 ನಂತರ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಐಬಿಎಸ್ ಸ್ಟೆಲ್ಸ್ ಮೈಸೂರು ಸಮಕಾಲೀನ ವಿನ್ಯಾಸ ಮತ್ತು ಮೈಸೂರಿನ ಸಾಂಪ್ರದಾಯಿಕ ಸ್ವಾದಗಳ ಮಿಶ್ರಣವಾಗಿದೆ. ಅತಿಥಿಗಳಿಗೆ ಆತಿಥ್ಯಾನುಭವವನ್ನು ಪುನರ್ವ್ಯಾಖ್ಯಾನಿಸುವುದು ನಮ್ಮ ಗುರಿಯಾಗಿದೆ. ಮೈಸೂರಿನಲ್ಲಿ ಬ್ರಿಗೇಡ್ ಗ್ರೂಪ್ನ 27ನೇ ಯೋಜನೆ ಇದಾಗಿದೆಯಲ್ಲದೆ, ಜಾಗತಿಕ ಆತಿಥ್ಯ ಬ್ರಾಂಡ್ಗಳೊದಿಗೆ ಪಾಲುದಾರಿಕೆಯಲ್ಲಿ ಭಾರತದಲ್ಲಿನ 9ನೇ ಹೋಟೆಲ್ ಇದಾಗಿದೆ’’ ಎಂದರು.
ಎಕರ್ಸ್ ಪ್ರೀಮಿಯಂ, ಮಿಡ್ಸ್ಕೇಲ್ ಮತ್ತು ಏಷ್ಯಾದಲ್ಲಿನ ಎಕಾನಮಿ ಡಿವಿಜನ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಗಾರ್ಥ್ ಸಿಮನ್ಸ್ ಅವರು ಮಾತನಾಡಿ, “ನಮ್ಮ ದೃಷ್ಟಿಕೋನವನ್ನು ಜೀವಂತವಾಗಿಸುವಲ್ಲಿ ಬ್ರಿಗೇಡ್ ಗ್ರೂಪ್ ಜೊತೆಗಿನ ಪಾಲುದಾರಿಕೆ ಪ್ರಮುಖ ಪಾತ್ರವಹಿಸಿದೆ. ಅವರ ಅಚಲ ಬೆಂಬಲ ಮತ್ತು ಬದ್ಧತೆಗೆ ನಾವು ಕೃತಜ್ಞರಾಗಿದ್ದೇವೆ. ನಾವು ಒಂದಾಗಿ ಆಧುನಿಕ ಪ್ರವಾಸಿಗಳ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ, ಮೈಸೂರಿನ ಸಮೃದ್ಧ ಪರಂಪರೆಗೆ ಗೌರವವನ್ನು ಸಲ್ಲಿಸುವ ಸ್ಥಳವನ್ನು ಸೃಷ್ಟಿಸಿದ್ದೇವೆ. ಮೈಸೂರಿನ ಐಬಿಎಸ್ ಸ್ಟೆಲ್ಸ್ ವೈಭವವಾಗಿ ಆರಂಭವಾದ ನಂತರ ಅತಿಥಿಗಳು ಅಧಿಕೃತವಾಗಿ ಮನೆಯಿಂದ ದೂರವಿರುವ ಮನೆಯ ಅನುಭವವನ್ನು ನವೀನ ಮತ್ತು ಸ್ವಾಗತಿಸುವಂತಹ ವಾತಾವರಣದಲ್ಲಿ ನಿರೀಕ್ಷಿಸಬಹುದಾಗಿದೆ’’ ಎಂದರು.
ಐಬಿಎಸ್ ಸ್ಟೆಲ್ಸ್ ಮೈಸೂರು ವಾತಾವರಣ ಮತ್ತು ಭೋಜನಗಳಲ್ಲಿ ಆಯ್ದ ಆತಿಥ್ಯ ಅನುಭವವನ್ನು ಸಾದರಪಡಿಸುತ್ತದೆ ಅಲ್ಲದೆ, ಇಲ್ಲಿನ `ದಿ ವರಾಂಡ’ ಸಾಂಪ್ರದಾಯಿಕ ಮತ್ತು ಸಮಕಾಲೀನ ಪಾಕಶೈಲಿಗಳ ಮಿಶ್ರಣವನ್ನು ಸಾದರಪಡಿಸುತ್ತದೆ. ವೈವಿಧ್ಯಪೂರ್ಣ ಅಭಿರುಚಿಗಳನ್ನು ಪೂರೈಸುವ ಭೋಜನಾನುಭವವನ್ನು ಸೃಷ್ಟಿಸುತ್ತದೆ. ಹೆಚ್ಚು ಆರಾಮದಾಯಕ ಅನುಭವಕ್ಕಾಗಿ ಲಾಬಿ ಪ್ರದೇಶದಲ್ಲಿರುವ ಫ್ಲೆಮಿಂಗೊ ಬಾರ್ ಪ್ರಶಾಂತ ವಾತಾವರಣದಲ್ಲಿ ತಾಜಾತನದ ಪೇಯವನ್ನು ಆನಂದಿಸುವ ತಾಣವನ್ನು ಪೂರೈಸುತ್ತದೆ. ಕಟ್ಟಡದ ಮೇಲ್ಭಾಗದಲ್ಲಿರುವ ರೂಫ್ಟಾಪ್ ರೆಸ್ಟೋರೆಂಟ್ ಕೆಎ 16 ಬೆರಗುಗೊಳಿಸುವ ನೋಟಗಳನ್ನು ಸಾದರಪಡಿಸುವುದಲ್ಲದೆ, ಪ್ರತ್ಯೇಕ ಆಹಾರ ಪದಾರ್ಥಗಳನ್ನು ನೀಡಲಿದೆ. ಮೀಟಿಂಗ್ ರೂಮ್ಗಳು ಮತ್ತು ಹೆಚ್ಚಿನ ಸ್ಥಳಾವಕಾಶ ಇರುವ ಬ್ಯಾಂಕ್ವೆಟ್ ಹಾಲ್ ಇಲ್ಲಿದ್ದು, ವೈವಿಧ್ಯಪೂರ್ಣ ಕಾರ್ಯಕ್ರಮಗಳಿಗೆ ಸೂಕ್ತವಾಗಿವೆ. ನೈಸರ್ಗಿಕ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳ ಆತಿಥ್ಯ ವಹಿಸಲು ಇಚ್ಛಿಸುವವರಿಗೆ ಹೋಟೆಲ್ ಹೊರಾಂಗಣ ಕ್ಯಾಟರಿಂಗ್ ಸೇವೆಗಳನ್ನು ಸಾದರಪಡಿಸುತ್ತದೆ. ಹೋಟೆಲ್ನಲ್ಲಿ ಸೌಲಭ್ಯಗಳ ಶ್ರೇಣಿಯನ್ನು ಸಾದರಪಡಿಸಲಾಗುತ್ತಿದ್ದು ಇವುಗಳಲ್ಲಿ ಸ್ವಿಮ್ಮಿಂಗ್ಪೂಲ್ ಮತ್ತು 24/7 ಫಿಟ್ನೆಸ್ ಸೆಂಟರ್ಗಳು ಸೇರಿವೆ. ಇವು ಅತಿಥಿಗಳಿಗೆ ಅನುಕೂಲಕರ ವಾಸ್ತವ್ಯವನ್ನು ಸಾದರಪಡಿಸುತ್ತವೆ. ಅತಿಥಿಗಳು ಎಕಾರ್ ಲೈವ್ ಲಿಮಿಟ್ಲೆಸ್ ಲೈಫ್ಸ್ಟೆಲ್ ಲಾಯಲ್ಟಿ ಪ್ರೋಗ್ರಾಮ್ನಿಂದ ಪ್ರತ್ಯೇಕ ಲಾಭಗಳನ್ನು ಪಡೆದುಕೊಳ್ಳಬಹುದು. ಇದು ಹೆಚ್ಚುವರಿ ಅನುಭವಗಳು, ವಿಶೇಷ ಕೊಡುಗೆಗಳನ್ನು ಸಾದರಪಡಿಸುತ್ತದೆ ಅಲ್ಲದೆ, ಈ ಮೂಲಕ ಪೋಷಕರು ಎಲ್ಲಾ ವಾಸ್ತವ್ಯಗಳು, ಭೋಜನ, ಸ್ಪಾ ಚಿಕಿತ್ಸೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಪಾಯಿಂಟ್ಗಳನ್ನು ಗಳಿಸಬಹುದು.
ಬ್ರಿಗೇಡ್ ಗ್ರೂಪ್ ಕುರಿತು :- 1986ರಲ್ಲಿ ಸ್ಥಾಪಿಸಲಾದ ಬ್ರಿಗೇಡ್ ಎಂಟರ್ಪ್ರೆಸಸ್ ಲಿಮಿಟೆಡ್ ಭಾರತದ ಮುಂಚೂಣಿಯ ಪ್ರಾಪರ್ಟಿ ಡೆವಲಪರ್ಗಳಲ್ಲಿ ಒಂದಾಗಿದೆ. ತಮ್ಮ ಎಲ್ಲಾ ಪಾಲುದಾರರಿಗೆ ಸಕಾರಾತ್ಮಕ ಅನುಭವಗಳನ್ನು ನಿರ್ಮಿಸುವಲ್ಲಿ ಮತ್ತು ಗ್ರಾಹಕರ ನಂಬಿಕೆಯನ್ನು ಗೆಲ್ಲುವಲ್ಲಿ ಮೂರರಿಂದ ನಾಲ್ಕು ದಶಕಗಳ ಪರಿಣತಿ ಪಡೆದಿದೆ. ಅನೇಕ ಹೆಗ್ಗುರುತಾದಂತಹ ಕಟ್ಟಡಗಳನ್ನು ಬ್ರಿಗೇಡ್ ಅಭಿವೃದ್ಧಿಪಡಿಸಿದ್ದು, ಬೆಂಗಳೂರು, ಚೆನ್ನೆ, ಹೈದ್ರಾಬಾದ್, ಮೈಸೂರು, ಕೊಚ್ಚಿ, ಗಿಫ್ಟ್ ಸಿಟಿ – ಗುಜರಾತ್, ತಿರುವನಂತಪುರ, ಮಂಗಳೂರು ಮತ್ತು ಚಿಕ್ಕಮಗಳೂರುಗಳಲ್ಲಿ ವಸತಿ, ಕಚೇರಿ, ರಿಟೇಲ್ ಮತ್ತು ಹೋಟೆಲ್ಗಳ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಂಡು ಅಲ್ಲಿನ ನೋಟಗಳಲ್ಲಿ ಪರಿವರ್ತನೆ ತಂದಿದೆ.