ನಿರಾಶ್ರಿತರಿಗೆ ಹೊದಿಕೆ ನೀಡುವ ಮೂಲಕ ಹೊದಿಕೆ ವಿತರಣಾ ಅಭಿಯಾನ’ಕ್ಕೆ ಚಾಲನೆ

ಮೈಸೂರು:20 ಡಿಸೆಂಬರ್ 2021

ನಂದಿನಿ

ಕೆ ಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ವತಿಯಿಂದ ಬೀದಿಬದಿಯಲ್ಲಿ ಜೀವನಸಾಗಿಸಿ ರಾತ್ರಿಹೊತ್ತು ರಸ್ತೆಯಲ್ಲಿ ಮಲಗುವ ನಿರ್ಗತಿಕರು, ಬೀದಿಬದಿವ್ಯಾಪಾರಸ್ಥರು ಹಾಗೂ ಬಡವರ್ಗದವರಿಗೆ ಮತ್ತು ಆಡಿ ಜನಾಂಗದವರಿಗೆ ಚಳಿಗಾಲ ಹಾಗೂ ವಿಪರೀತ ತಂಡೀಗಾಳಿ ವಾತಾವರಣದ ಪರಿಣಾಮ ಆರೋಗ್ಯ ಸಮಸ್ಯೆ ಬರದಂತೆ “ಹೊದಿಕೆ ವಿತರಣಾ ಅಭಿಯಾನ’ಕ್ಕೆ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸರವರು ನಿರಾಶ್ರಿತರಿಗೆ ಹೊದಿಕೆ ನೀಡುವ ಮೂಲಕ ಚಾಲನೆ ನೀಡಿದರು,

ಇದೇ ಸಂಧರ್ಭದಲ್ಲಿ ಹೊದಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ರಾಜ್ಯ ಸರ್ಕಾರ ಬೀದಿಬದಿವ್ಯಾಪರಸ್ಥರು ನಿರಾಶ್ರಿತರಿಗೆ ಹಲವಾರು ಯೋಜನೆಗಳನ್ನು ನೀಡಿದೆ ಅದನ್ನು ಉಪಯೋಗ ಮಾಡಿಕೊಳ್ಳಲು ಮುಂದಾಗಬೇಕು ಎಂದರು,

ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಮಾತನಾಡಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಬೀದಿಬದಿ ವ್ಯಾಪರಸ್ಥರಿಗೆ ಅಶಕ್ತರಿಗೆ ನಿರಾಶ್ರಿತರ ನೆರವಿಗೆ ತಂದರು ಸಹ ಸಮರ್ಪಕವಾಗಿ ತಲಪುತ್ತಿಲ್ಲ ಇತ್ತ ಸಂಬಂಧಪಟ್ಟ ಅಧಿಕಾರಿಗಳು ಪಲನಾಭಾವಿಗಳಿಗೆ ತಲುಪುವವರೆಗೂ ಶ್ರಮಿಸಬೇಕು, ನಗರಮಟ್ಟದಲ್ಲಿ ನಿರ್ಮಿತಿ ಕೇಂದ್ರಗಳು ಕೇವಲ ಬಂದಿಖಾನೆ ಎಂಬ ಕಲ್ಪನೆ ನಿರಾಶ್ರಿತರಲ್ಲಿ ಬರಬಾರದು ಅದೊಂದು ಮನಃಪರಿವರ್ತನ ಕೇಂದ್ರವಾಗಿ ಕಾಣುವ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ, ಇಂದಿನ ಆರ್ಥಿಕ ಪರಿಸ್ಥಿತಿ ಕುಗ್ಗಿರುವ ಸಂಧರ್ಭದಲ್ಲಿ ನಿರಾಶ್ರಿತರು ದೇವಸ್ಥಾನಗಳ ಅನ್ನದಾಸೋಹದ ಮೇಲೆ ಅವಲಂಭಿತರಾಗಿದ್ದರು ಆದರೆ ಅದಕ್ಕೂ ಕೊರೊನಾ ನಿಯಮಾನುಸಾರ ಸ್ಥಗಿತವಾಗಿದೆ ಹಾಗಾಗಿ ಸರ್ಕಾರವೇ ಗಂಜೀಕೇಂದ್ರಗಳ ನಿರ್ಮಾಣ ಹೆಚ್ಚಿಸಬೇಕಿದೆ ಮಾನವೀಯತೆ ಸೇವಮನೋಭಾವದ ಮೂಲಕ ಶ್ರಮಿಸುವ ಸಂಘಸಂಸ್ಥೆಗಳನ್ನ ನಗರಪಾಲಿಕೆ ಪಟ್ಟಿ ಮಾಡಿ ಸ್ವಯಂ ಸೇವಕರ ತಂಡಗಳನ್ನು ವಲಯಮಟ್ಟದಲ್ಲಿ ರಚಿಸಿ ಕಷ್ಟದಲ್ಲಿರುವ ನಿರಾಶ್ರಿತರಿಗೆ ಬಡವರಿಗೆ ಸ್ಥಳಕ್ಕೆ ಹೋಗಿ ಸವಲತ್ತು ಸಹಕಾರ ಕೊಡಿಸುವಂತೆ ನಗರಪಾಲಿಕೆ ಯೋಜನೆ ರೂಪಿಸಬೇಕು ಎಂದರು,

ನಂತರ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್ ಆರ್ ಮಹಾದೇವಸ್ವಾಮಿ ಮಾತನಾಡಿ ನಮ್ಮ ಮೈಸೂರಲ್ಲಿ ನಿರಾಶ್ರಿತರು ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋಕು ಆಗುವುದಿಲ್ಲ ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳಮುಖ್ಯ, ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೆ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ ಎಂದರು

ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ,ಬಿಜೆಪಿ ರಾಜ್ಯ ವಕ್ತಾರ ಎಂ ಜೆ ಮಹೇಶ್ ,ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ,ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಲ್ ಆರ್ ಮಹಾದೇವಸ್ವಾಮಿ ,
ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಕೆ ಶಂಕರ್ ,ಉಮೇಶ್
ಮುಡಾ ಸದಸ್ಯರಾದ ಲಕ್ಷ್ಮೀದೇವಿ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ನಿಗಮ ಮಂಡಳಿ ರಾಜ್ಯ ನಿರ್ದೇಶಕಿ ರೇಣುಕರಾಜ , ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ,ಕೆ ಆರ್ ಎಸ್ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಜಯ್ ಕುಮಾರ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್ ,ಅಪೂರ್ವ ಸುರೇಶ್ ,ಕೆಎಂಪಿಕೆ ಟ್ರಸ್ಟ್ ನ ಅಧ್ಯಕ್ಷರಾದ ವಿಕ್ರಂ ಅಯ್ಯಂಗಾರ್ ,ಅಜಯ್ ಶಾಸ್ತ್ರಿ ,ಎಸ್ ಎನ್ ರಾಜೇಶ್, ಮಹೇಂದ್ರ ಶೈವ ,ರಾಕೇಶ್ ಕುಂಚಿಟಿಗ ,ಸುಚೀಂದ್ರ ,ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *