ಹಿನಕಲ್ ಶ್ರೀ ನನ್ನೇಶ್ವರ ಸ್ವಾಮಿ ದೇವರ ಕಲ್ಯಾಣಿ ಕೊಳದಲ್ಲಿ 8ನೇ ವರ್ಷದ ಲಕ್ಷ ದೀಪೋತ್ಸವ

ನಂದಿನಿ ಮೈಸೂರು

ಶ್ರೀ ನನ್ನೇಶ್ವರ ಸ್ವಾಮಿ ದೇವರ ಕಲ್ಯಾಣಿ ಕೊಳದಲ್ಲಿ ಹಿನಕಲ್ ಗ್ರಾಮದ ಅಭಿವೃದ್ಧಿ ಸಮಿತಿ ವತಿಯಿಂದ 8 ನೇ ವರ್ಷದ ಕಲ್ಯಾಣಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಹಿನಕಲ್ ಗ್ರಾಮದ
ಕಲ್ಯಾಣಿ ಕೊಳದ ಸುತ್ತಾ ಮಣ್ಣಿನ ಹಣತೆ ಸಾಲು ಸಾಲಾಗಿ ಜೋಡಿಸಲಾಗಿತ್ತು.ಮೆಟ್ಟಿಲಿನಲ್ಲಿ ಚಿತ್ತಾಕರ್ಷಕ ರಂಗೋಲಿ,
ವಿಶೇಷ ಹೂವಿನ ಅಲಂಕಾರ ಎಲ್ಲರ ಕಣ್ಮನೆ ಸೆಳೆಯಿತು.

ಗ್ರಾಮದಲ್ಲಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ಹಿರಿಯರು, ಮಹಿಳೆಯರು,ಯುವಕರು ಮಕ್ಕಳು ಸೇರಿದಂತೆ ಗಣ್ಯತಿ ಗಣ್ಯರು ಲಕ್ಷ ದೀಪ ಬೆಳಗಿಸಿ ಸಂಭ್ರಮಿಸಿದರು.

ಇದೇ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ ಎಚ್ ಸಿ ರಾಜು,
ಗೌರವಾಧ್ಯಕ್ಷರಾದ ಲೋಹಿತ್ ವಿ ಅರಸ್,
ಕಾರ್ಯಾಧ್ಯಕ್ಷರಾದ ಎಸ್ ಹೊನ್ನಪ್ಪ ಮತ್ತು ಕೆಂಪ ನಾಯಕ, ಪ್ರಧಾನ ಕಾರ್ಯದರ್ಶಿಯಾದ ಪಾಪಣ್ಣ ಖಜಾಂಚಿಯಾದ ಗಣೇಶ್ ಪತ್ರಿಕಾ ಕಾರ್ಯದರ್ಶಿ ರೇವಣ್. ಎಂ ಸಮಿತಿಯ ಇತರೆ ಪದಾಧಿಕಾರಿಗಳಾದ ಕೆ ಜಿ ನಾಗರಾಜ್ ಶ್ರೀನಿವಾಸ್, ಪ್ರಕಾಶ್, ಜಯ ವೆಂಕಟೇಶ್ ಸ್ವಾಮಿ ಸಿ, ಸ್ನೇಹ,
ಮಂಜುನಾಥ ಮಾದೇವ, ಬಸವರಾಜು, ಪ್ರಕಾಶ್ ಎಂ, ಮಹೇಶ್,ಜೆಡಿಎಸ್ ಮುಖಂಡರಾದ ಜಗದೀಶ್ ಸೇರಿದಂತೆ ಗ್ರಾಮದ ಜನರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *