ನಂದಿನಿ ಮೈಸೂರು
ಡಿ.ಪಾಲ್ ಕಾಲೇಜಿನಲ್ಲಿ ಎರಡು ದಿನಗಳ ಹಿಂದಿ ಅಂತರಾಷ್ಟೀಯ ವಿಚಾರಗೋಷ್ಠಿ
ಡಿ.ಪಾಲ್ ಕಾಲೇಜು, ಕೇಂದ್ರೀಯ ಹಿಂದಿ ಸಂಸ್ಥಾನ,ಆಗ್ರಾ, ಭಾರತ ಸರ್ಕಾರ, ಮತ್ತು ಪುಷ್ಪಾ ಹಿಂದಿ ವಿದ್ಯಾಲಯ, ಜೀವ್ ಸರ್ಕಾರೇತರ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ‘ಆಧುನಿಕ ಕಾಲಘಟ್ಟದ ಸಾಹಿತ್ಯ ಹಿಂದಿ ಕನ್ನಡ ವಿಶೇಷ ಸಂದರ್ಭ’ (ಹಿಂದಿ ಕನ್ನಡ ತೌಲನಿಕ ಅಧ್ಯಯನ) ಎಂಬ ವಿಷಯದ ಕುರಿತು ಎರಡು ದಿನಗಳ ಅಂತರಾಷ್ಟ್ರೀಯ ವಿಚಾರಗೋಷ್ಠಿ ಏರ್ಪಡಿಸಲಾಗಿತ್ತು.
ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಪಂಜಾಬಿನ ಮಾಜಿ ಮಂತ್ರಿಗಳಾದ ಪ್ರೊ.ಲಕ್ಷ್ಮೀ ಕಾಂತ ಚಾವ್ಲ, ಕೇಂದ್ರಿಯ ಹಿಂದಿ ಸಂಸ್ಥಾನದ ನಿರ್ದೇಶಕ ಸುನಿಲ್ ಬಾಬುರಾವ್ ಕುಲಕರ್ಣಿ, ಕರ್ನಾಟಕದ ಮಾಜಿ ಡಿ.ಜಿ.ಪಿ ಗಳಾದ ಡಾ ಅಜಯ್ ಕುಮಾರ್ , ಐ.ಜಿ.ಪಿ ವಿಪುಲ್ ಕುಮಾರ್, ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಪ್ರಧಾನ ಗುರುದತ್, ನಿರಂಜನವಾನಳ್ಳಿ, ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ೪ ವಿವಿಧ ಗೋಷ್ಠಿಗಳು ನಡೆಯಲಿದ್ದು ಇಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಸಂಶೋಧಕರು, ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡನೆ ಮಾಡಲಿದ್ದಾರೆ.
ಹಿಂದಿ ಕನ್ನಡ ಭಾಷೆಗಳ ನಡುವೆ ನೂರಾರು ವರ್ಷಗಳಿಂದಲೂ ಕೊಡು ಕೊಳುವ ಪ್ರಕ್ರಿಯೆ ನಡೆದಿದ್ದು ಈ ಭಾಷೆಗಳ ನಡುವೆ ಪರಸ್ಪರ ಸಂಬಂಧವಿದೆ, ಸಾಹಿತ್ಯದ ವಿಷಯದಲ್ಲೂ ಒಂದಕ್ಕೊಂದು ಪ್ರೇರೇಪಿಸಲ್ಪಟ್ಟಿವೆ, ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹಿಂದಿ ಸಾಹಿತ್ಯದಲ್ಲಿ ಪ್ರಚುರಪಡಿಸುವ ನಿಟ್ಟಿನಲ್ಲಿ ಈ ವಿಚಾರಗೋಷ್ಠಿಯು ನಡೆಯುತ್ತಿದ್ದು ದೇಶದ ವಿವಿಧ ರಾಜ್ಯಗಳ ಪ್ರಸಿದ್ದ ಸಾಹಿತಿಗಳು ತಮ್ಮ ಪ್ರತಿಕ್ರಿಯೆಯಲ್ಲಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.