ಮೈಸೂರು:7 ಫೆಬ್ರವರಿ 2022
ನಂದಿನಿ ಮೈಸೂರು
ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಬರುವ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಪ್ರವೇಶ ಇರುವುದಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನಿಲ್ಲಿಸುವುದು ಪಾಕಿಸ್ತಾನದ ಸಂಸ್ಕ್ರತಿ. ಈ ನಿಟ್ಟಿನಲ್ಲಿ ಕುಂದಾಪುರದ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ ಎಂದರು.
ಹೆಣ್ಣು ಮಕ್ಕಳ ಮುಗ್ದತೆಯನ್ನು ಕೆಲವು ರಾಜಕಾರಣಿಗಳು ದುರುಪಯೋಗ ಮಾಡಿ ಕೊಳ್ಳುತ್ತಿದ್ದಾರೆ. ಕಾಲೇಜಿನ ಗೇಟ್ ತನಕ ಹಿಜಾಬ್ ಧರಿಸಿ ಬನ್ನಿ, ಇದಕ್ಕೆ ನಮ್ಮ ತಕರಾರಿಲ್ಲ. ಆದರೆ ತರಗತಿಗೆ ಬರುವಾಗ ಕಾಲೇಜು ಸಮವಸ್ತ್ರದಲ್ಲೆ ಬರಬೇಕು ಎಂದು ತಾಕೀತು ಮಾಡಿದರು.
ಇದೆಲ್ಲದರ ನಡುವೆ ಹೈಕೋರ್ಟ್ ಆದೇಶ ನಿರೀಕ್ಷಿಸುತ್ತಿದ್ದೇವೆ. ಕೋರ್ಟ್ ತೀರ್ಪಿನ ಆಧಾರದ ಮೇಲೆ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ನಾಗೇಶ್ ತಿಳಿಸಿದರು.
ನಿಮ್ಮ ಮಸೀದಿಗಳಲ್ಲಿ ನಿಮಗೆ ಪ್ರವೇಶವಿಲ್ಲ. ಇದರ ವಿರುದ್ಧ ಹೋರಾಟ ಮಾಡಿ. ನಿಮ್ಮ ಹಕ್ಕುಗಳಿಗೆ ಅಲ್ಲಿ ಧ್ವನಿ ಎತ್ತಿರಿ. ಶಿಕ್ಷಣ ವ್ಯವಸ್ಥೆ ಒಳಗೆ ಈ ಹೋರಾಟ ಮಾಡಬೇಡಿ. ಕೋಲಾರದಲ್ಲಿ ನಮಾಜ್ ಕೂಡ ಮಾಡಿದ್ದಾರೆ. ಇಂತಹದ್ದಕ್ಕೆಲ್ಲಾ ಅವಕಾಶವಿಲ್ಲ ಎಂದು ನಾಗೇಶ್ ಎಚ್ಚರಿಕೆ ನೀಡಿದರು.