ಹೋಟೆಲ್‌ನಲ್ಲಿ ತಿಂಡಿ ಆರ್ಡರ್‌ ಮಾಡಿದ್ದ ವಿದ್ಯಾರ್ಥಿಗೆ ಹೃದಯಾಘಾತ ಘಟನೆಯ ಕೊನೆ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

38 Views

ಮೈಸೂರು: 7 ಫೆಬ್ರವರಿ 2022

ನಂದಿನಿ ಮೈಸೂರು

ಹೋಟೆಲ್‌ನಲ್ಲಿ ತಿಂಡಿ ಆರ್ಡರ್‌ ಮಾಡಿದ್ದ ವಿದ್ಯಾರ್ಥಿಯೊಬ್ಬ ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಇಪ್ಪತ್ತೈದು ವರ್ಷದ ನಿತೀಶ್‌ ಕುಮಾರ್‌ ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ. ನಂಜಾಪುರ ಗ್ರಾಮದವರಾದ ನಿತೀಶ್‌ ಕುಮಾರ್‌, ಸ್ನೇಹಿತನ ಜೊತೆ ಹೋಟೆಲ್‌ನಲ್ಲಿ ತಿಂಡಿ ತಿನ್ನಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಿತೀಶ್​ ಕುಮಾರ್​ ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದರು. ಹುಣಸೂರು ಪಟ್ಟಣದಲ್ಲಿ ಸ್ನೇಹಿತನ ಜೊತೆ ತಿಂಡಿ ತಿನ್ನಲು ಹೋಟೆಲ್​​ಗೆ ಹೋಗಿದ್ದರು. ಟೇಬಲ್​ ಮೇಲೆ ಕುಳಿತುಕೊಂಡು ತಿಂಡಿಗೆ ಆರ್ಡರ್​ ಮಾಡಿದ್ದರು. ಈ ವೇಳೆ ನಿತೀಶ್‌ ಕುಮಾರ್‌ ದಿಢೀರ್‌ ಅಂತ ಅಲ್ಲೇ ಕುಸಿದುಬಿದ್ದಿದ್ದಾರೆ.
ಕೂಡಲೇ ನಿತೀಶ್‌ ಕುಮಾರ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ ದಾರಿ ಮಧ್ಯೆಯೇ ಕೊನೆಯಿಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published.