ಮೈಸೂರು:27 ಮಾರ್ಚ್ 2022
ನಂದಿನಿ ಮೈಸೂರು
ಸದಾ ಒತ್ತಡದಲ್ಲೇ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರ ಆರೋಗ್ಯ ದೃಷ್ಟಿಯಿಂದ ಸರ್ಕಾರಿ ನೌಕರರು ಹಾಗೂ ಕುಟುಂಬದವರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು 500 ಕ್ಕೂ ಹೆಚ್ಚು ಮಂದಿ ಶಿಬಿರವನ್ನು ಸದುಪಯೋಗಪಡಿಸಿಕೊಂಡಿದ್ದಾರೆ ಎಂದು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘ
ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು ತಿಳಿಸಿದರು.
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಮೈಸೂರು ಡಿಎಚ್ ಓ ಪ್ರಸಾದ್ ಚಾಲನೆ ನೀಡಿದರು.ಸುಮಾರು ಖಾಸಗಿ ಆಸ್ಪತ್ರೆಗಳಿಂದ
ಚರ್ಮ ರೋಗ,ಕ್ಯಾನ್ಸರ್ ರೋಗ,ಹೃದ್ರೂಗ ಸೇರಿದಂತೆ ಅನೇಕ ತಪಾಸಣೆ ಮಾಡಲಾಯಿತು.50 ಕ್ಕೂ ಹೆಚ್ಚು ಡಾಕ್ಟರ್ ಹಾಗೂ ನರ್ಸ್ ಗಳು ನೌಕರರಿಗೆ ಆಥೋಪೆಡಿಕ್,ಫಿಜಿಸಿಯನ್,ಕಾರ್ಡಿಯಲಾಜಿಸ್ಟ್,ಚರ್ಮರೋಗ,ಮಕ್ಕಳ ತಜ್ಞರು, ದಂತ ಚಿಕಿತ್ಸೆ, ಕ್ಯಾನ್ಸರ್ ,ನೇತ್ರ ತಪಾಸಣೆ ಮಾಡಿದರು.ತಪಾಸಣೆ ನಂತರ ಅಗತ್ಯವಾದ ಔಷಧಿಗಳನ್ನು ಉಚಿತವಾಗಿ ನೀಡಿದ್ದೇವೆ.
ಪ್ರತಿ ಮೂರು ತಿಂಗಳಿಗೊಮ್ಮೆ ಸಂಘದಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜಿಸುತ್ತೇವೆ.ಅದಲ್ಲದೇ ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸಿದ್ದೇವೆ ಎಂದರು.
ಶಿಬಿರದಲ್ಲಿ ಪ್ರಧಾನ ಕಾರ್ಯದರ್ಶಿ ರೇವಣ್ಣ, ಅಕ್ಕಮ್ಮ,ಶೋಭಾ ರಾಣಿ,
ಮಂಜುನಾಥ್,ಶ್ರೀನಿವಾಸ್,ಅರ್ಕೇಶ್,ಲಲಿತಾ ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.