ಮೈಸೂರು:24 ಅಕ್ಟೋಬರ್ 2021
ನ@ದಿನಿ
ಜೆಡಿಎಸ್ ಪಕ್ಷವನ್ನ ಜೆಡಿಎಫ್ ಅಂತೀರಲ್ಲ.
ನಮ್ಮದು ಫ್ಯಾಮಿಲಿ ಪಾರ್ಟಿ ಅಂತೀರ,
ನಿಮ್ಮ ಒಬ್ಬ ಮಗ ರಾಜಕೀಯದಲ್ಲಿದ್ದು, ಅಕಾಲಿಕ ಮರಣ ಹೊಂದಿದರು. ಆಗ ವೈದ್ಯ ವೃತ್ತಿಯಲ್ಲಿದ್ದ ಮತ್ತೊಬ್ಬ ಮಗನನ್ನು ವರಣಾದಲ್ಲಿ ನಿಲ್ಲಿಸಿದರಲ್ಲ.ನಿಮ್ಮದು ಯಾವ ಪಾರ್ಟಿ ? ನಿಮ್ಮದು ಪ್ಯಾಮಿಲಿ ಪಾರ್ಟಿ ಅಲ್ವಾ..? ಅಲ್ಲಿ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರು ಇರಲಿಲ್ಲವಾ..?. ಎಲ್ಲರ ಮನೆ ದೋಸೆನೂ ತೂತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರವರಿಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ಮೈಸೂರಿನಲ್ಲಿ ಮಾದ್ಯಮ ಸಂವಾದದಲ್ಲಿ ಮಾತನಾಡಿದ ಅವರು ಜಿ.ಟಿ.ದೇವೇಗೌಡರನ್ನು ಉಳಿಸಿಕೊಳ್ಳುವ ಪ್ರಶ್ನೆ ಬಂದಾಗ ಏನ್ ಹೇಳಬೇಕು ಆ ವೇಳೆ ಉತ್ತರ ಕೊಡುತ್ತೇನೆಂದು ಎಚ್ ಡಿಕೆ ಮಾರ್ಮಿಕವಾಗಿ ನುಡಿಯುವ ಮೂಲಕ ಜಿಟಿಡಿ ವಿಚಾರದಲ್ಲಿ ತಮ್ಮ ತಟಸ್ಥ ನಿಲುವು ತಿಳಿಸಿದರು.
ಒಮ್ಮೊಮ್ಮೆ ಮಕ್ಕಳ ಮಾತನ್ನು ಕೂಡ ಕೇಳಬೇಕಾಗುತ್ತದೆ. ನನ್ನ ಮಗ, ಜಿಟಿಡಿ ಮಗ, ಮಹದೇವು ಮಗ ಸಮಕಾಲೀನರು ಸ್ನೇಹಿತರಾಗಿದ್ದಾರೆ. ಅವರು ಏನೇನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಅವರ ಮಕ್ಕಳು ಏನ್ ಮಾತಾಡಿದ್ದಾರೆ ಅದು ಅವರಿಗೆ ಗೊತ್ತು. ಈ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದರು.
ಅಸಮಧಾನಿತರನ್ನ ಆದಷ್ಟು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಜೆಡಿಎಸ್ ಸಂಘಟನಾ ಕಾರ್ಯಾಗಾರದ ಮುನ್ನ ನಾನೇ ಎಸ್.ಆರ್.ಶ್ರೀನಿವಾಸ್‌ಗೆ ಕಾಲ್ ಮಾಡಿ ಆಹ್ವಾನ ಮಾಡಿದೆ.ಮದ್ಯಾಹ್ನದ ಬಳಿಕ ಬಂದು ದೇವೇಗೌಡರ ಜೊತೆ ಫೋಟೋ ತೆಗೆಸಿಕೊಂಡು ನಾನು ಜೆಡಿಎಸ್‌ನಲ್ಲೇ ಇದ್ದೇನೆ ಅಂತ ಕಾರ್ಯಕರ್ತರಿಗೆ ಹೇಳಿದ್ದಾರೆ.ಆದರೆ, ಸಂಪರ್ಕ ಮಾತ್ರ ಕಾಂಗ್ರೆಸ್ ನಾಯಕರ ಜೊತೆ ಬೆಳೆಸಿಕೊಂಡಿದ್ದಾರೆ. ಪಕ್ಷ ಬಿಟ್ಟು ಹೋಗುವವರನ್ನ ಹಿಡಿದುಕೊಳ್ಳಲು ಸಾಧ್ಯವಿಲ್ಲ.
ಉಳಿದುಕೊಳ್ಳುತ್ತೇನೆ ಅನ್ನೋರನ್ನ ಹೋಗು ಅಂದರೆ ನನಗೆ ಹುಚ್ಚು ಹಿಡಿದಿದೆ ಅನ್ನುತ್ತಾರೆ. ಹೋಗೋರನ್ನ ಹಿಡಿದುಕೊಳ್ಳಲೂ ಆಗುತ್ತಾ ಎಂದರು.
ಗುಬ್ಬಿ ಶಾಸಕರು ಕುಮಾರಸ್ವಾಮಿ ಈಗ ಇಮೇಜ್ ಹಾಳಾಗಿದೆ ಅನ್ನುತ್ತಾರೆ. ಇಮೇಜ್ ಇಲ್ಲದವನಿಂದ ಏನ್ ಅನುಕೂಲ ಇಮೇಜ್ ಇರೋರ್ ಹತ್ತಿರ ಹೋಗುತ್ತಾರೆ ಬಿಡಿ.ಪಕ್ಷ ಬಿಟ್ಟು ಹೋಗುತ್ತೇನೆ ಅನ್ನೋರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಆಡಳಿತ ಮರೆತೇ ಬಿಟ್ಟ ಸರ್ಕಾರ:
ಎಲ್ಲಾ ಪಕ್ಷದಲ್ಲೂ ಉಪಚುನಾವಣೆಯಲ್ಲಿ ಪೈಪೋಟಿ ನಡೆಸುತ್ತಿವೆ.
ರಾಜ್ಯದ ಹಲವಾರು ಪ್ರದೇಶದಲ್ಲಿ ದೊಡ್ಡ ಮಟ್ಟದ ಅಕಾಲಿಕ ಮಳೆ ಆಗುತ್ತಿದೆ.
ಈಗ ವಿಧಾನ ಸೌದದ ಕಚೇರಿಗಳು ಬೀಗ ಹಾಕಿವೆ.
ಮಂತ್ರಿಗಳು ಒಂದೊಂದು ಬೂತ್ ನಲ್ಲಿ ಕುಳಿತಿದ್ದಾರೆ.
ವಿರೋಧ ಪಕ್ಷಕೂ ನಾವೇನು ಕಡಿಮೆ ಇಲ್ಲ ಅಂತ ಬೂತ್ ನಲ್ಲಿ ಬೀಡುಬಿಟ್ಟಿದ್ದಾರೆ.
ನಾವು ಕೂಡ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ.
ಆದರೆ ಸರ್ಕಾರ ಜನರ ಸಮಸ್ಯೆ ಮರೆತಿದ್ದಾರೆ. ಇಂದಿನ ಸಂಕಷ್ಟ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕಿಂತ ಚುನಾವಣೆ ಗೆಲಲ್ಲುವುದೇ ಬಿಜೆಪಿಗೆ ಮುಖ್ಯವಾಗಿದೆ ಎಂದರು.
ಜಾತ್ಯಾತೀತ ಜನತದಾಳ ಮುಗಿದು ಹೋಗಿದೆ ಎಂದು ಹೇಳುತ್ತಾರೆ.
2004 ರಲ್ಲಿ ಸಿದ್ದರಾಮಯ್ಯ ನಮ್ಮ ಜೊತೆ ಇದ್ದರೂ ಅಹಿಂದ ಸೃಷ್ಠಿಸಿ ಅವರೇ ಪಕ್ಷ ಬಿಡುವ ಪರಿಸ್ಥಿತಿ ತಂದುಕೊಂಡರು.ಅದಾದ ಮೇಲೆ ಹೆಚ್ವಿನ ಜವಾಬ್ದಾರಿ ನನ್ನ ಮೇಲೆ ಬಂತು.
ನಂತರ ಬಿಜೆಪಿ ಜೊತೆ ಸರ್ಕಾರ ಮಾಡಿದ ನಂತರ
ಅನುಕಂಪ ಪಡೆದುಕೊಂಡ ಬಿಜೆಪಿ ಮೇಲುಗೈ ಸಾಧಿಸಿತು.ಕಾಂಗ್ರೆಸ್ ನವರು ನಮ್ಮ ಮೇಲೆ ಅಪಪ್ರಚಾರ ಮಾಡಿದರು. ಅದರ ಫಲವಾಗಿ ಬಿಜೆಪಿ ಹೆಚ್ವಿನ ಸ್ಥಾನ ಗಳಿಸಿತು. ಇದರೆಲ್ಲದ ಫಲವಾಗಿ ಜೆಡಿಎಸ್ ಅನ್ನು ನೆಲಕಚ್ವಿಸಿದರು ಎಂದರು.
ಕಾಂಗ್ರೆಸ್ ಜತೆಗಿನ ಹೊಂದಾಣಿಕೆಯಿಂದಾಗಿ ಜೆಡಿಎಸ್
ಪಕ್ಷಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿರುವುದು ನಿಜ.
ನಮಗೆ ಶಕ್ತಿ ಇದ್ದ ಕ್ಷೇತ್ರಗಳಲ್ಲೇ ಸೋಲಬೇಕಾಯಿತು.
ಉಪಚುನಾವಣೆ ಗಳಲ್ಲಿ ಸೋಲು ಅನುಭವಿಸಿದ್ದೇವೆ.
ಈಗ ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಬೇಕಿದೆ. ನಮಗೆ ಮುಂದಿನ ವಿಧಾನ ಸಭಾ ಚುನಾವಣೆ ಗುರಿಯಾಗಿಟ್ಟುಕೊಂಡು ಪಕ್ಷ ಸಂಘಟನೆ ಮಾಡಿದ್ದೇವೆ.
ನಾವು 126 ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿ ಸಂಘಟನೆ ಮಾಡುವ ಜವಾಬ್ದಾರಿ ನೀಡಲಾಗಿದೆ. ನಮಗೆ ೨೦೨೩ರ ಚುನಾವಣೆ ಗುರಿ ಇದಿಯೇ ಹೊರತು ಉಪ ಚುನಾವಣೆ ಅಲ್ಲ ಎಂದರು.
ಉಪ ಚುನಾವಣೆಯಲ್ಲಿ
ಎರಡು ಪಕ್ಷದವರು ಹಣ ಚೆಲ್ಲುತ್ತಿದ್ದಾರೆ ಅಂತ ಅವರೆ ಆರೋಪ ಮಾಡಿಕೊಳ್ಳುತ್ತಿದ್ದಾರೆ.
ನಮ್ಮ ಪಕ್ಷದ ಮೇಲೆ ಯಾವುದೇ ಆರೋಪ ಇಲ್ಲ.
ಕೇವಲ ಅಲ್ಪಸಂಖ್ಯಾತರನ್ನು ನಿಲ್ಲಿಸಿದ್ದಾರೆ ಎಂಬ ಅನ್ನೋ ಆರೋಪ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ಅವರು ಜೆಡಿಎಸ್ ಫ್ಯಾಮಿಲಿ ಪಾರ್ಟಿ ಜೆಡಿಎಫ್ ಅಂತೀರಲ್ಲ.ವರಣಾದಲ್ಲಿ ನೀವು ಏನು ಮಾಡಿದ್ದಿರಿ,
ಬಾದಾಮಿಯಲ್ಲಿ ನೀವು ನಿಂತಾಗ ಚಾಮುಂಡೇಶ್ವರಿ ಯಾರಾದ್ರು ಮುಸಲ್ಮಾನರಿಗೆ ಬಿಟ್ಟು ಕೊಡಬಹುದಿತ್ತಲ್ಲ ಸ್ವಾಮಿ ಎಂದರು.