ಎಚ್.ಡಿ.ಕೋಟೆ ತೋಟದ ಮನೆಯಲ್ಲಿ 50 ಲಕ್ಷ ಹಣ ಪತ್ತೆ

ನಂದಿನಿ ಮೈಸೂರು

*ಚುನಾವಣಾ ಅಧಿಕಾರಿಗಳಿಂದ ದಾಳಿ: 50 ಲಕ್ಷ ಹಣ ವಶ*

213-ಹೆಗ್ಗಡದೇವನಕೋಟೆ: ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ
ವಡ್ಡರಗುಡಿ ಹಾಡಿ ಸಮೀಪವಿರುವ ಡ್ರಿಪ್ ಸಿದ್ದನಾಯಕ ರವರಿಗೆ ಸೇರಿದ ತೋಟದಲ್ಲಿರುವ ಶೆಡ್ ಗೆ ದಾಳಿ ಮಾಡಿ ಶೆಡ್ ನಲ್ಲಿದ್ದ 50 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಹೆಗ್ಗಡದವನಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಶ್ರೀಮತಿ ಕುಮುದಾ ಶರತ್,
ಸಹಾಯಕ ಚುನಾವಣಾಧಿಕಾರಿಯಾದ ಪಿ.ಎಸ್. ಮಹೇಶ್ ,
ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್, ಲಕ್ಷ್ಮಿಕಾಂತ್,
ಪೊಲೀಸ್ ಉಪನಿರೀಕ್ಷಕ ರಾದ
ರಸುಲ್, ಶರವಣ, ರವಿಶಂಕರ್ ಹಾಗೂ ಇತರೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *