ಎಚ್.ಡಿ.ಕೋಟೆ:14 ಜನವರಿ 2022
ನಂದಿನಿ
ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಮಾಡಿ ಪೂಜಿಸಿ ಸಂಭ್ರಮಿಸುವ ಹಬ್ಬ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಬಂದೇ ಬಿಟ್ಟಿದೆ.
ನಾಳಿನ ಸಂಕ್ರಾಂತಿ ಹಬ್ಬಕ್ಕೆ ಒಂದು ದಿನದ ಮುನ್ನವೇ ಶಾಸಕರ ಪತ್ನಿ ಜನರಿಗೆ ಸಿಹಿಯಾದ ಕಬ್ಬು, ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದ್ದಾರೆ.
ಹೌದು
ಎಚ್ ಡಿ ಕೋಟೆಯ ಶಾಸಕರಾದ ಅನಿಲ್ ಚಿಕ್ಕಮಾದು ರವರ ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ಕುಟುಂಬದವರು ಒಗ್ಗೂಡಿ
ವರದರಾಜಸ್ವಾಮಿ ದೇವಸ್ಥಾನ ದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ,ಕಬ್ಬು ಬೆಲ್ಲ ,ಎಳ್ಳು ನೀಡಿ ,ತಾಲ್ಲೂಕಿನ ಜನರ ಬಾಯಿ ಸಿಹಿ ಮಾಡಿದರು..
ಶಾಸಕರ ಪತ್ನಿಯಾದ ಸೌಮ್ಯ ಅನಿಲ್ ಚಿಕ್ಕಮಾದು ರವರು ಮಾತನಾಡಿ ,ಸಾಂಕ್ರಾಮಿಕ ರೋಗ ಹರಡುತ್ತಿದೆ ,ದೇವರು ಎಲ್ಲರ ಆರೋಗ್ಯವನ್ನು ಸುರಕ್ಷಿತವಾಗಿಡಲಿ ಎಂದರು.ಮುಂದುವರೆದು ಮಾತನಾಡಿದ ಅವರು ಶಾಸಕರು ಐತಿಹಾಸಿಕ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ ಕಾರಣ ಆರೋಗ್ಯ ಸ್ವಲ್ಪ ಹದಗೆಟ್ಟಿದ್ದು ,ಶಾಸಕರು ತಮ್ಮೆಲ್ಲರಿಗೂ ಶುಭಾಶಯ
ತಿಳಿಸಿದ್ದಾರೆ ಎಂದರು
ಸೌಮ್ಯ ಅನಿಲ್ ಚಿಕ್ಕಮಾದು ರವರ ಜೊತೆ ಶಾಸಕರ ತಾಯಿಯಾದ ನಾಗಮ್ಮಾ ,
ಪುರಸಭೆಯ ಸದಸ್ಯರುಗಳಾದ ,ಎಚ್ ಸಿ ನರಸಿಂಹಮೂರ್ತಿ ,ಮಧುಕುಮಾರ್ ,ಗೀತಾ ಗಿರಿಗೌಡ ,ಶಾಂತಮ್ಮ ,ಸುಹಾಸಿನಿ ,ಇನ್ನಿತರ ರಾಜಕೀಯ ಮುಖಂಡರುಗಳು ಭಾಗವಹಿಸಿದ್ದರು.
ಒಟ್ಟಾರೆ ತಾಲೂಕಿನ ಜನರನ್ನ ತಮ್ಮ ಕುಟುಂಬದವರಂತೆ ಭಾವಿಸಿ ಮಗಳ ಜೊತೆ ಸೌಮ್ಯ ಅನಿಲ್ ಚಿಕ್ಕಮಾದುರವರು ಎಳ್ಳು ಬೀರಿದ್ದು ವಿಶೇಷವಾಗಿತ್ತು.
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು