ನಂದಿನಿ ಮೈಸೂರು
ವರುಣಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ಬಡವರಿಗೆ ಉಚಿತ ಹೋಳಿಗೆ ಊಟ ಬಡಿಸಲಾಯಿತು.
ಅಖಿಲ ಕರ್ನಾಟಕ ಸಿದ್ದರಾಮಯ್ಯನವರ ಅಭಿಮಾನಿಗಳ ಬ್ರಿಗ್ರೇಡ್ ವತಿಯಿಂದ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಬಂದ ಆಸ್ಪತ್ರೆಯ ಹೊರ ರೋಗಿಗಳು ಹಾಗೂ ಬಡವರಿಗೆ ಉಚಿತವಾಗಿ ಊಟದ ಜೊತೆಗೆ ಹೋಳಿಗೆ, ಬಾಳೆಹಣ್ಣು ಹಾಗೂ ಸಿಹಿ ವಿತರಿಸಿ ಯತೀಂದ್ರ ರವರ ಹುಟ್ಟು ಹಬ್ಬವನ್ನು ಅರ್ಧಪೂರ್ಣವಾಗಿ
ಆಚರಿಸಲಾಯಿತು.
500ಕ್ಕೂ ಜನರು ಬಂದು ಕೆಲವರು ಹೋಳಿಗೆ ಮಾತ್ರ ತೆಗೆದುಕೊಂಡು ಹೋದರೇ ಮತ್ತೆ ಕೆಲವರು ಊಟವನ್ನ ಸೇವಿಸಿದರು.ಕಾರ್ಯಕ್ರಮದಲ್ಲಿ ಬ್ರಿಗೇಡ್ ರಾಜ್ಯಾಧ್ಯಕ್ಷ ಹಿನಕಲ್ ಉದಯ್, ಉಪಾಧ್ಯಕ್ಷ ಮಹದೇವ್,ಕಾರ್ಯದರ್ಶಿ ಶಿವಣ್ಣ,ಸೇರಿದಂತೆ ನಿರ್ದೇಶಕರುಗಳು ಉಪಸ್ಥಿತಿರಿದ್ದರು.