ಗುಜರಾತಿನಲ್ಲಿ 54 ಅಡಿ ಎತ್ತರದ ಹನುಮಾನ್ ಮೂರ್ತಿಯನ್ನು ಉದ್ಘಾಟಿಸಿದ ಅಮಿತ್ ಶಾ

*ಗುಜರಾತಿನಲ್ಲಿ 54 ಅಡಿ ಎತ್ತರದ ಹನುಮಾನ್ ಮೂರ್ತಿಯನ್ನು ಉದ್ಘಾಟಿಸಿದ ಅಮಿತ್ ಶಾ*

ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಗೃಹಮಂತ್ರಿ ಅಮಿತ್ ಶಾರವರು ಗುಜರಾತಿನ ಬೋಟಾಡ್ ಜಿಲ್ಲೆಯ ಸಾರಂಗಪುರ ದೇವಸ್ಥಾನದಲ್ಲಿ 54 ಅಡಿ ಎತ್ತರದ ಭವ್ಯ ಹನುಮಾನ್ ಮೂರ್ತಿಯನ್ನು ಉದ್ಘಾಟಿಸಿದರು.

 

ತಮ್ಮ ಟ್ವೀಟ್ ಸರಣಿಗಳಲ್ಲಿ ಗೃಹಮಂತ್ರಿಗಳು ‘ಪಂಚ ಧಾತುಗಳಿಂದ ಮಾಡಲ್ಪಟ್ಟ ಈ ಭವ್ಯ ಮೂರ್ತಿ ಭಾರತೀಯ ವಾಸ್ತು ಶಿಲ್ಪ ಮತ್ತು ಕಲೆಯ ಒಂದು ಅದ್ಭುತ ಉದಾಹರಣೆ. ಈ ಮೂರ್ತಿ ಮುಂದಿನ ದಿನಗಳಲ್ಲಿ ಭಕ್ತರಿಗೆ ಒಂದು ಶ್ರದ್ದೆಯ ಕೇಂದ್ರವಾಗಲಿದೆ’ ಎಂದು ಹೇಳಿದ್ದಾರೆ.

“ಇಂದು ಕೇಸರಿನಂದನನ ಭವ್ಯ ಮಂದಿರಗಳಲ್ಲಿ ಒಂದಾದ ಗುಜರಾತಿನ ಸಾಲಂಗಪುರಧಾಮದಲ್ಲಿ ಮಹಾರಾಜಾಧಿರಾಜ ಆಂಜನೇಯನ ದರ್ಶನ ಪಡೆದು, ಜಗತ್ಪ್ರಸಿದ್ಧ ಶ್ರೀ ಕಷ್ಟಭಂಜನದೇವನ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಭಕ್ತರು ಬಜರಂಗಬಲಿಯ ಕಷ್ಟಭಂಜನ ರೂಪವನ್ನು ಬಹು ಶ್ರದ್ಧೆಯಿಂದ ಆರಾಧಿಸುತ್ತಾರೆ. ಸರ್ವರ ಕಲ್ಯಾಣಕ್ಕಾಗಿ ದೇವನನ್ನು ಪ್ರಾರ್ಥಿಸಿದೆ.” ಎಂದು ಶಾ ಟ್ವೀಟ್ ಮಾಡಿದ್ದಾರೆ.

ಶಾರವರು ಗುರುವಾರ ಸಾಲಂಗಪುರದಲ್ಲಿ 55 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಕಷ್ಟಭಂಜನದೇವ ಭೋಜನಾಲಯವನ್ನು ಕೂಡ ಉದ್ಘಾಟಿಸಿದರು. 25 ಯಾತ್ರಾ ಸ್ಥಳಗಳ ಮಣ್ಣಿನಿಂದ ನಿರ್ಮಾಣವಾದ ಈ ಹೈಟೆಕ್ ಕಿಚನ್ನಲ್ಲಿ ಒಂದು ಗಂಟೆಯಲ್ಲಿ 20,000 ಭಕ್ತಾದಿಗಳಿಗೆ ಆಹಾರ ತಯಾರಿಸಬಹುದು. ‘ಇದೊಂದು ಶ್ರೀ ಕಷ್ಟಭಂಜನ ದೇವಸ್ಥಾನದ ಮಹತ್ವದ ಸಾರ್ವಜನಿಕ ಸೇವೆಯಾಗಿದೆ’ ಎಂದು ತಮ್ಮ ಟ್ವೀಟ್ನಲ್ಲಿ ಶಾರವರು ಹೇಳಿದರು.

Leave a Reply

Your email address will not be published. Required fields are marked *