ಕ್ಯಾಮೆಗೂ ಸೈ ಸ್ಪರ್ಧೇಗೂ ಸೈ ಎಂದು ಹಳ್ಳಿಕಾರ್ ಜೋಡಿ ಗಾಡಿ ಓಟದಲ್ಲಿ ಧೂಳೆಬ್ಬಿಸಿದ ರೈತರು

ನಂದಿನಿ ಮೈಸೂರು

ಬಿಸಿಲು ಮಳೆ ಎನ್ನದೇ ಹೊಲದಲ್ಲಿ ಕೆಲಸ ಮಾಡಿ ಸೂರ್ಯ ಮುಳುಗುವ ಹೊತ್ತಿಗೆ ಮನೆ ಕಡೆ ಮುಖ ಮಾಡುತ್ತಿದ್ದ ರೈತರು ಸಮಯ ಬಿಡುವು ಮಾಡಿಕೊಂಡು ಹಳ್ಳಿಕಾರ್ ಹಸು ಹಿಡಿದು ಮೂರು ದಿನಗಳ ಕಾಲ ಮೈದಾನದಲ್ಲಿ ಕ್ಯಾಮೆಗೂ ಸೈ ಸ್ಪರ್ಧೇಗೂ ಸೈ ಎಂದು ಧೂಳೆಬ್ಬಿಸಿದರು.

ಕಳೆದ 5 ವರ್ಷಗಳಿಂದ ಷಷ್ಠಿ ಹಬ್ಬ ಹಾಗೂ
ಸಿದ್ದಲಿಂಗಪುರ ಬಸವನ 1ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಯುವಶಕ್ತಿ ಪಡೆ ವತಿಯಿಂದ ಆಯೋಜಿಸಿದ್ದ ಒಂದು ಹಳ್ಳಿ ಕಾರ್ ಒಂದು ಗೂಳಿ ಜೋಡಿ ಗಾಡಿ ಓಟದ ಸ್ಪರ್ಧೆ ಆಯೋಜಿಸುತ್ತಾ ಬಂದಿದ್ದು 3 ದಿನಗಳ ಕಾಲ ನಡೆದ
ಒಂದು ಹಳ್ಳಿ ಕಾರ್ ಒಂದು ಗೂಳಿ ಜೋಡಿ ಗಾಡಿ ಓಟದ ಸ್ಪರ್ಧೆ,ಹಾಲು ಹಲ್ಲು ಮತ್ತು 2 ಹಲ್ಲು ಕರು ಜೋಡಿ ,ಚಕ್ಕಡಿ ಗಾಡಿ ಓಟದ ರೋಚಕ
ಸ್ಪರ್ಧೆ ನೋಡುಗರ ಗಮನ ಸೆಳೆಯಿತು.

ಸಿದ್ದಲಿಂಗಪುರದ ರೈತ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.ಎರಡನೇ ಬಹುಮಾನ ಸಬ್ಬನಕೆರೆ ಮತ್ತೆ ಹುಟ್ಟಿ ಬಾ ಸುನೀಲ್,3 ನೇ ಬಹುಮಾನ ನಾಗನಹಳ್ಳಿ,4ನೇ ಬಹುಮಾನ ಮೇಳಪುರಕ್ಕೆ ಲಭಿಸಿದೆ.

ಮೊದಲ ಬಾರಿಗೆ ಆಯೋಜಿಸಿದ್ದ ಚಕ್ಕಡಿ ಗಾಡಿ ಸ್ಪರ್ಧೆಯಲ್ಲಿ
120 ಜೋಡಿ ಭಾಗವಹಿಸಿದ್ದವು .
ಚಕ್ಕಡಿ ಗಾಡಿ ಚಾಂಪಿಯನ್ ಡ್ರೈವರ್ ಸಾಗರ ಬಾಬುರಾಯನಕೊಪ್ಪಲು,ಹಳ್ಳಿಕಾರ್ ಜೋಡಿ ಎತ್ತುಗಳ ಓಟ ಸ್ಪರ್ಧೆಯ ಡ್ರೈವರ್ ಮಿಠಾಯಿ ನವೀನ್ ಪಾಲಹಳ್ಳಿರವರಿಗೆ ಒಲಿದಿದೆ‌.

ವಿಜಯಶಾಲಿಗಳಿಗೆ ನಗದು ಬಹುಮಾನದ ಜೊತೆಗೆ ಟ್ರೋಫಿ ಕೂಡ ವಿತರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹದೇಶ್,ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಯುವಶಕ್ತಿ ಪಡೆ ಅಧ್ಯಕ್ಷ ಕಾರ್ತೀಕ್,
ಗ್ರಾಮ ಪಂಚಾಯತಿ ಸದಸ್ಯರಾದ ಶಿವು,
ಬಿಜೆಪಿ ಮುಖಂಡ ವಿವೇಕ್ ,
ಉಪಾಧ್ಯಕ್ಷ ಮಧು,ಅಭಿಲಾಶ್,ಕಿರಣ್,ಸುನೀಲ್,ವರುಣ್,ದರ್ಶನ್,ಗಗನ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *