ಭಾರೀ ಮಳೆಗೆ ಹಳೇಹೆಗ್ಗುಡಿಲು ಗ್ರಾಮದ ಬಹುತೇಕ ಜಮೀನನಲ್ಲಿ ಬೆಳೆ ನಾಶ, ದುಃಖಿತರಾದ ಕಾಡಂಚಿನ ಜನ

ನಂದಿನಿ ಮೈಸೂರು

ಭಾರೀ ಮಳೆಗೆ ಹಳೇಹೆಗ್ಗುಡಿಲು ಗ್ರಾಮದ ಬಹುತೇಕ ಜಮೀನನಲ್ಲಿ ಬೆಳೆ ನಾಶ, ದುಃಖಿತರಾದ ಕಾಡಂಚಿನ ಜನ

ಸರಗೂರು: ನಿನ್ನ ರಾತ್ರಿ ಸುರಿದ ಭಾರೀ ಮಳೆಗೆ ಸರಗೂರು ಸಮೀಪದ ಹಳೇಹೆಗ್ಗುಡಿಲು, ಹಳೆಯೂರು, ದಡದಹಳ್ಳಿ ಸೇರಿದಂತೆ ಇನ್ನಿತರೆ ಕಾಡಂಚಿನ ಗ್ರಾಮದ ಬಹುತೇಕ ಜಮೀನುಗಳಲ್ಲಿ ಬೆಳೆ ನಾಶವಾಗಿದೆ. ಆಲಿಕಲ್ಲಿ ಸಹಿತ ಸುರಿದ ಮಳೆಯಿಂದಾಗಿ ಆಗತಾನೆ ಮೊಳಕೆಯೊಡೆದಿದ್ದ ಹತ್ತಿ,ಜೋಳ, ರಾಗಿ ಸೇರಿದಂತೆ ಇನ್ನಿತರೆ ಬೆಳೆಗಳು ನಾಶ ಆಗಿದ್ದು, ಮುಂದೆ ನಮ್ಮ ಗತಿ ಏನು ಎಂದು ರೈತರು ಚಿಂತಾಜನಕರಾಗಿದ್ದಾರೆ.

ಹಳೇಹೆಗ್ಗುಡಿಲು ಗ್ರಾಮದ ಚೆನ್ನಯ್ಯ, ನಿಂಗಯ್ಯ, ಮುತ್ತಯ್ಯ, ರಾಜೇಶ್‌, ರಾಜು, ಪುಟ್ಟಯ್ಯ, ಚಿಕ್ಕಣ್ಣ, ಕಾಂತರಾಜು, ರಾಮಯ್ಯ ಸೇರಿದಂತೆ ಇನ್ನಿತರೆ ರೈತರ ಜಮೀನುಗಳು ದೊಡ್ಡ ಕಾವಲಿಯಂತೆ ಮಾರ್ಪಟ್ಟಿದ್ದು, ಜಮೀನಿನಲ್ಲಿ ಇದ್ದ ಮರಗಳೆಲ್ಲಾ ಭಾರೀ ಮಳೆಗೆ ನೆಲಕಚ್ಚಿವೆ. ಈ ಮೊದಲು ಹತ್ತಿ ಹಾಗೂ ರಾಗಿ ಬೆಳೆದು ಹೇಗೋ ಜೀವನ ಮಾಡಿಕೊಂಡಿದ್ದ ಈ ಕಾಡಂಚಿನ ರೈತರು ಈ ವರ್ಷದಿಂದ ಜೋಳವನ್ನು ಸಹ ಬೆಳೆಯಲು ಮುಂದಾಗಿದ್ದರು.ಆದರೆ ಆರಂಭದಲ್ಲೇ ಮಳೆಯಾರ್ಭಟಕ್ಕೆ ರೈತರ ಕನಸು ನುಚ್ಚು ನೂರಾಗಿದೆ.

ಒಂದು ಕಡೆ ಆನೆ ಹಾಗೂ ಹಂದಿ ಹಾವಳಿ ಮತ್ತೊಂದು ಕಡೆ ಈ ರೀತಿಯ ಭಾರೀ ಮಳೆಯ ಹೊಡೆತ. ಈ ನಡುವೆ ಬದುಕುವುದೇ ನಮಗೆ ದುಸ್ತರವಾಗಿದೆ. ಸರ್ಕಾರ ನಮ್ಮಂತಹ ಕಾಡಂಚಿನ ರೈತರ ಸಮಸ್ಯೆಗಳಿಗೆ ಆದಷ್ಟು ಬೇಗ ಸ್ಪಂಧನೆ ನೀಡುವ ಮೂಲಕ ನಮಗೆ ಪರಿಹಾರ ನೀಡಬೇಕು. ಈ ಮೂಲಕ ನಮಗೆ ಬದುಕಲು ಅವಕಾಶ ನೀಡಬೇಕು. ಹಾಗೆಯೇ ಬೆಲೆ ಪರಿಹಾರವನ್ನು ಹೆಚ್ಚಿಗೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

Leave a Reply

Your email address will not be published. Required fields are marked *