ನಂದಿನಿ ಮೈಸೂರು
ಚಾಮರಾಜ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 18 ರ ಮಂಜುನಾಥಪುರ ಪ್ರದೇಶದಲ್ಲಿ ಕಳೆದ 30-40 ವರ್ಷಗಳಿಂದ ವಾಸವಾಗಿರುವ ಒಟ್ಟು 272 ನಿವಾಸಿಗಳು ಅವರ ಮನೆಗಳಿಗೆ ಯಾವುದೇ ದಾಖಲೆ ಇಲ್ಲದೆ ಪರಿತಪಿಸುತ್ತಿದ್ದವರಿಗೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಸರ್ಕಾರದ ಮಟ್ಟದಲ್ಲಿ ಶಾಸಕರು ಅವಿರತವಾಗಿ ಶ್ರಮಿಸಿ ಹಕ್ಕು ಪತ್ರವನ್ನು ಕೊಡಿಸಲು ಸಪಾಲರಾಗಿ, ಇಂದು ಎಲ್ಲಾ ಕುಟುಂಬಗಳಿಗೆ ಅವರ ಬಡಾವಣೆಯಲ್ಲಿ ಹಕ್ಕು ಪತ್ರವನ್ನು ವಿತರಣೆ ಮಾಡಿದರು.
ಈ ಸಮಯದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಬೀ.ವಿ. ರವೀಂದ್ರ, ಚಿಕವೆಂಕಟು, EE Slum Board ಹರೀಶ್,. JE ಝಾನ್ಸಿ ರಾಯ್, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ ರಾಜು, ಆಶ್ರಯ ಸಮಿತಿ ಸದಸ್ಯ ಮಹೇಶ್, ಅನೂಜ್ ಸಾರಸ್ವತ, ಭಾ.ಜ.ಪ ಮುಖಂಡರುಗಳಾದ, ನಂಜಪ್ಪ, ಶ್ರೀನಿವಾಸ್ ಗೌಡ, ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ಹರೀಶ್, ಗೋವಿಂದ, ಗುರು, ರಮೇಶ್, ಕವಿತಾ, ನಾಗರತ್ನ, ಗಿರೀಶ್, ಮಂಜು, ರಾಮಸ್ವಾಮಿ, ಸುಬ್ರಮಣ್ಯ ಮುಂತಾದವರು ಹಾಜರಿದ್ದರು.