ಸಂಬಳಕ್ಕಾಗಿ ಅರಣ್ಯ ಇಲಾಖೆ ದಿನಗೂಲಿ ನೌಕರರಿಂದ ಅಹೋರಾತ್ರಿ ಧರಣೆ

ಹುಣಸೂರು:11 ಮಾರ್ಚ್ 2022

ದಾ ರಾ ಮಹೇಶ್

ಹಗಲು ರಾತ್ರಿ ಎನ್ನದೆ ತಮ್ಮ ಜೀವದ ಹಂಗನ್ನು ತೊರೆದು ಕಾಡನ್ನು ಸಂರಕ್ಷಣೆ ಮಾಡುತ್ತಿರುವ ಅರಣ್ಯ ವೀಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೆ ಸಂಕಷ್ಟ ಸ್ಥಿತಿಯಲ್ಲಿದ್ದಾರೆ.ಎಂದು ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್ ಎಸ್ ನಾಗರಾಜ್ ಆರೋಪಿಸಿದ್ದಾರೆ ಅವರು ಹುಣಸೂರಿನ ಡಿಸಿಎಫ್ ಕಛೇರಿ ಮುಂದೆ ದಿನಗೂಲಿ ನೌಕರರ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಮಂದಿ ಹೊರ ಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಅರಣ್ಯ ವೀಕ್ಷಕರು, ಕಚೇರಿ ಸಿಬ್ಬಂದಿ, ಚಾಲಕರು ಸಹ ಇದರಲ್ಲಿ ಸೇರಿದ್ದಾರೆ. 2021ರ ನವೆಂಬರ್ ತಿಂಗಳಿನಿಂದ ಇಲಾಖೆ ವತಿಯಿಂದ ವೇತನವನ್ನು ನೀಡಿಲ್ಲ. . ಪರಿಣಾಮ ಅರಣ್ಯ ವೀಕ್ಷಕರು ಬದುಕು ನಡೆಸುವುದೇ ಕಷ್ಟಕರವಾಗಿದೆ.

ಫೆಬ್ರವರಿ-ಮಾರ್ಚ್ ತಿಂಗಳ ಬೇಸಿಗೆ ಬಂತೆಂದರೆ ನಾಗರಹೊಳೆ ಅಭಯಾರಣ್ಯದಲ್ಲಿ. ಬೇಸಿಗೆ ಕಾಲವಾದ್ದರಿಂದ ಅರಣ್ಯ ವೀಕ್ಷಕರು ಕಾಡನ್ನು ಕಾಡ್ಗಿಚ್ಚಿನಿಂದ ಸಂರಕ್ಷಿಸಲು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಕಾಡಿನಲ್ಲಿ ಬೆಂಕಿ ರೇಖೆ ಮಾಡಲು ಅರಣ್ಯ ವೀಕ್ಷಕರು ಇರಲೇಬೇಕು. ಇವರುಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಇವರು ಕಾಡನ್ನು ಕಾಯುತ್ತಾರೆ.
ಆದರೆ, ಇಂತಹ ಅರಣ್ಯ ವೀಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳವೇ ಆಗಿಲ್ಲ. ಅರಣ್ಯ ವೀಕ್ಷಕರು ಇತರರಂತೆ ಸಂಬಳವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಸಂಬಳ ನೀಡದೆ ಸತಾಯಿಸುತ್ತಿರುವ ಯಾಕೆ ? ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.ಎಂದರು
ಜಿಲ್ಲಾಧ್ಯಕ್ಷ ನಟೇಶ್ ಮಾತನಾಡಿ ನಾಗರಹೊಳೆ ಅಭಯಾರಣ್ಯ ಪ್ರವಾಸಿಗರ ನೆಚ್ಚಿನ ತಾಣ. ನಿತ್ಯ ನೂರಾರು ಮಂದಿ ಇವೆರಡು ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ರಾಜ್ತದ ಮೂಲೆ ಮೂಲೆ ಸೇರಿದಂತೆ ಇತರೆ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ಪ್ರವಾಸಿಗರಿಗೆ ನಿತ್ಯ ಸಫಾರಿ ಇರುವುದರಿಂದ ಆದಾಯಕ್ಕೂ ಕೊರತೆ ಇಲ್ಲ. ಆದರೂ ಅರಣ್ಯವನ್ನೇ ಜೀವನ ಎಂದು ಭಾವಿಸಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಅರಣ್ಯ ವೀಕ್ಷಕರಿಗೆ ಸಂಬಳ ಕೊಡಲು ಇಲಾಖೆಯಲ್ಲಿ ಹಣ ಇಲ್ಲವೇ ಎಂಬುವುದು ಮಾತ್ರ ನಿಗೂಡ ಪ್ರಶ್ನೆಯಾಗಿದೆ.

ಕಳೆದ ನಾಲ್ಕು ತಿಂಗಳಿಂದ ಸಂಬಳ ವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಅಂಗಡಿಗೆ ಸಾಲ ಕಟ್ಟದೇ ನಿತ್ಯಬಳಕೆಯ ದಿನಸಿ ಪದಾರ್ಥಗಳು ಕೊಡುತ್ತಿಲ್ಲ ನಮ್ಮ ಕೈ ಯಲ್ಲಿ ಹಣ ವೂ ಕೂಡ ಇಲ್ಲ.ಇದರಿಂದ ನಮಗೆ ಜೀವನ ನಡೆಸುವುದು ಕಷ್ಟವಾಗಿದೆ.
.ಎಲ್ಲಾ ಕಡೆಯಿಂದ ಬಂದ 200ಕ್ಕೂ ಹೆಚ್ಚು ದಿನಗೂಲಿ ನೌಕರರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಒಟ್ಟು 200ಕ್ಕೂ ಹೆಚ್ಚು ಜನ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದಿಂದ ಹಣ ಬಿಡುಗಡೆಯಾಗಲು ಪಿಎಸ್‍ಎಂಎಸ್ ಸಿಸ್ಟಂನ ತಾಂತ್ರಿಕ ತೊಂದರೆ ಇದಕ್ಕೆ ಕಾರಣವಾಗಿದ್ದು
ಇದರಂದ ನೌಕರರಿಗೆ ಸಂಬಳವಾಗಿಲ್ಲ.ನಾಳೆ ಒಂದು ತಿಂಗಳ ಸಂಬಳ ನೀಡುತ್ತೇವೆ ಹಾಗೂ
ಒಂದು ವಾರದೊಳಗೆ ಉಳಿಕೆ ಸಂಬಳ ನೀಡಲು ಕ್ರಮವಹಿಸಲಾಗುವುದು.

ಡಿ. ಮಹೇಶ್ ಕುಮಾರ್
ನಾಗರಹೊಳೆ ಹುಲಿಯೋಜನೆ ನಿರ್ದೇಶಕ. ಹುಣಸೂರು

Leave a Reply

Your email address will not be published. Required fields are marked *