2ವರ್ಷಗಳ ನಂತರ ರಾಜಮಾರ್ಗದಲ್ಲಿ ವಾಕಿಂಗ್ ಹೊರಟ ಗಜಪಡೆ

ಮೈಸೂರು:14 ಆಗಸ್ಟ್ 2022

ನಂದಿನಿ ಮೈಸೂರು

ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಹಿನ್ನಲೆ ಇಂದಿನಿಂದ ದಸರಾ ಗಜಪಡೆ ತಾಲೀಮು ಆರಂಭ ಆಗಿದೆ.

ಮೈಸೂರು ಅರಮನೆ ಆವರಣದಿಂದ ಬನ್ನಿಮಂಟಪದ ವರೆಗೂ ಪ್ರತಿ ದಿನ ಬೆಳಗ್ಗೆ – ಸಂಜೆ ತಾಲೀಮು ನಡೆಸುವುದು ವಾಡಿಕೆ.ಅಂತೆಯೇ ಇಂದು ತಾಲೀಮು ಆರಂಭಕ್ಕೂ ಮುನ್ನ
ಅರಮನೆ ಅವರಣದಲ್ಕಿ ಅನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಕೋರೋನಾ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಆನೆಗಳು ಅರಮನೆ ಆವರಣದಲ್ಲಿಯೇ ತಾಲೀಮು ನಡೆಸಲಾಗಿತ್ತು.ಎರಡು ವರ್ಷಗಳ ನಂತರ ಮತ್ತೆ ಎಂದಿನಂತೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಗಜಪಡೆಗಳು ವಾಯುವಿಹಾರಕ್ಕೆ ತೆರಳುತ್ತಿದೆ.ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆಯಿಂದ ಹೊರಟು ಕೆಆರ್ ಸರ್ಕಲ್ ,ಸಯ್ಯಾಜಿರಾವ್ ರಸ್ತೆ,ಆಯುರ್ವೇದಿಕ್ ಸರ್ಕಲ್ ,ಬಂಬೂಬಜಾರ್ ರಸ್ತೆ ಮೂಲಕ ಬನ್ನಿ ಮಂಟಪ ತಲುಪುತ್ತದೆ.ಮತ್ತೆ ಬನ್ನಿ ಮಂಟಪದಿಂದ ಅರಮನೆಗೆ ವಾಪಾಸ್ ಆಗಲಿವೆ.

ಅರಣ್ಯ ಅಧಿಕಾರಿ ಕರಿಕಾಳನ್ ಮಾತನಾಡಿ ದಸರಾ ಮಹೋತ್ಸವ ಹಿನ್ನಲೆ ಆನೆಗಳಿಗೆ ಇಂದಿನಿಂದ ತಾಲೀಮು ಪ್ರಾರಂಭ ಮಾಡಲಾಗಿದೆ.
ಆನೆಗಳಿಗೆ ತೂಕ ಮಾಡಿಸಲಾಗಿದೆ.
ಎಲ್ಲ ಅನೆಗಳು ಅರೋಗ್ಯವಾಗಿದೆ.ಒಂದು ವಿಶೇಷವೆನೆಂದರೇ
ನಗರ ವಾತಾವರಣಕ್ಕೆ ಆನೆಗಳು ಹೊಂದಿಕೊಂಡಿದೆ.
ಒಂದು ವಾರದ ನಂತರ ಬಾರ ಹೊರುವ ತಾಲೀಮು ಪ್ರಾರಂಭ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *