ಫೆ.25 ರಂದು ಮತ್ತೆ ಹಾಡಿತು ಕೋಗಿಲೆ ಗೀತ ನಮನ ಕಾರ್ಯಕ್ರಮ

ಮೈಸೂರು:23 ಫೆಬ್ರವರಿ 2022

ನಂದಿನಿ ಮೈಸೂರು

ಲತಾ ಮಂಗೇಶ್ವರ್‌ , ಎಸ್‌.ಪಿ . ಬಾಲಸುಬ್ರಹ್ಮಣ್ಯಂ ಮತ್ತು ಡಾ . ವಿಷ್ಣುವರ್ಧನ್ ಹಾಗೂ ಕಲಾ ತಪಸ್ವಿ ರಾಜೇಶ್‌ರವರಿಗೆ ಮತ್ತೆ ಹಾಡಿತು ಕೋಗಿಲೆ ಗೀತನಮನ ಕಾರ್ಯಕ್ರಮ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಪಾತಿ ಫೌಂಡೇಶನ್ ವತಿಯಿಂದ ಫೆ. 25 ರಂದು ಸಂಜೆ 5 ಗಂಟೆಗೆ ಜೆ.ಎಲ್.ಬಿ ರಸ್ತೆ ಬಳಿಯಿರುವ ಶ್ರೀ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮತ್ತೆ ಹಾಡಿತು ಕೋಗಿಲೆ ಸಂಗೀತ ಕಾರ್ಯಕ್ರಮದ ಜರುಗಲಿದೆ.
ಶಾಸಕರಾದ ಎಲ್ . ನಾಗೇಂದ್ರ , ಚಲನಚಿತ್ರನಟರಾದ ಮಂಡ್ಯ ರಮೇಶ್ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್.ವಿ. ರಾಜೀವ್ , ಮೈಸೂರು ಮಹಾಪೌರರಾದ ಸುನಂದಾ ಪಾಲನೇತ್ರ , ವೆಂಗಿಪುರ ಮಠದ ಇಳ್ಳೆ ಆಳ್ವಾರ್ ಸ್ವಾಮೀಜಿ , ಹಿರಿಯ ಸಮಾಜ ಸೇವಕರಾದ ಕೆ . ರಘುರಾಂ ವಾಜಪೇಯಿ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಎಸ್ . ಪಿ . ಬಿ . ಮತ್ತು ಲತಾ ಮಂಗೇಶ್ವರ್‌ರವರು ಹಾಡಿರುವ ಮತ್ತು ಡಾ. ವಿಷ್ಣುವರ್ಧನ್ ಹಾಗೂ ರಾಜೇಶ್‌ರವರು ನಟಿಸಿರುವ ಚಿತ್ರದ ಹಾಡುಗಳನ್ನು ಚಂದನ ಶ್ರೀನಿವಾಸ್‌ರವರ ತಂಡದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ . ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ.ಸಂಗೀತ ಕಾರ್ಯಕ್ರಮದ ಮೂಲಕ 60 ಕ್ಕೂ ಹೆಚ್ಚು ವಿಶೇಷಚೇತನ ಮಕ್ಕಳಿಗೆ ಸಹಾಯಧನ ನೀಡಲಾಗುವುದು ಎಂದು ಚಲನಚಿತ್ರ ನಿರ್ದೇಶಕರು – ನಿರ್ಮಾಪಕರಾದ ಎಂ.ಡಿ. ಪಾರ್ಥಸಾರಥಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರೀ, ಗೋಲ್ಡ್ ಸುರೇಶ್,ಪ್ರವೀಣ್,ಹರೀಶ್ ನಾಯ್ಡು ಹಾಜರಿದ್ದರು.

Leave a Reply

Your email address will not be published. Required fields are marked *