ನಂದಿನಿ ಮೈಸೂರು
ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು: ಕೆ ವಿ ರಾಜೇಂದ್ರ
ಮೈಸೂರು : ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪವು ಕಂಡು ಬಂದಲ್ಲಿ ಅಥವಾ ನೀತಿ ಸಂಹಿತೆಯನ್ನು ಉಲ್ಲಂಘಿಸುವತಹ ವಿಚಾರಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ. ರಾಜೇಂದ್ರ ಅವರು ತಿಳಿಸಿದರು
ಕೆ ಆರ್ ನಗರ ತಾಲ್ಲೂಕಿನ ಚುನಾವಣಾ ಸಂಬಂಧಿತ ಅಧಿಕಾರಿಗಳ ಸ್ಥಿರ ಕಣ್ಗಾವಲು ತಂಡ(SST) ಹಾಗೂ ಕ್ಷಿಪ್ರ ಕ್ರಿಯಾ ತಂಡ (FST)ಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡನಾಡಿದ ಅವರು ಚುನಾವಣಾ ನೀತಿ ಸಂಹಿತಿಯು ಜಾರಿಯಾಗಿರುವುದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಸಬೇಕು. ತಪಾಸಣೆ ಸಂಧರ್ಭದಲ್ಲಿ ಯಾವುದೇ ರೀತಿಯ ಅನುಮಾನಸ್ಪದ ಅಂಶಗಳು ಕಂಡು ಬಂದಲ್ಲಿ ತಕ್ಷಣ ಸ್ಥಳದಲ್ಲಿಯೇ ಕ್ರಮವನ್ನು ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ಗಳನ್ನು ಸ್ಥಾಪಿಲಾಗಿದೆ. ದಾಖಲೆಯಿಲ್ಲದ 50 ಸಾವಿಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ. ಚುನಾವಣಾ ಅಕ್ರಮಗಳು ಕಂಡುಬಂದರೆ ಸಿ.ವಿಜಿಲ್ ಆಪ್ ಮೂಲಕ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದೆ. ವೋಟರ್ ಹೆಲ್ಪ್ ಲೈನ್ ಆಪ್ 1950 ಹಾಗೂ 0821-2305656 ಗೆ ಕರೆಮಾಡಿ ಮತದಾರರ ಪಟ್ಟಿಗೆ ಸಂಬOಧಿಸಿದOತೆ ಅವಶ್ಯಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಕೆ ಎಂ ಗಾಯತ್ರಿ ಅವರು ಮಾತನಾಡಿ ಅವರು ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ರ ಸಂಬOಧ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಟಾಟಿಸ್ಟಿಕ್ ಸರ್ವೇಲೆನ್ಸ್ ತಂಡದ ಸದಸ್ಯರುಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ಮಾದರಿ ನೀತಿ ಸಂಹಿತೆ ಸಮಿತಿಯ ವತಿಯಿಂದ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೆಕ್ಟರ್ ಆಫೀಸರ್ಗಳು ಬೂತ್ ಲೆವೆಲ್ ಆಫೀಸರ್ಗಳೊಟ್ಟಿಗೆ ಸಂಪರ್ಕದಲ್ಲಿದ್ದು ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಪರಿಹರಿಸಬೇಕು ಎಂದು ತಿಳಿಸಿದರು.
ಪ್ರಾಚ್ಯ ವಸ್ತು ಸಂಗ್ರಹಾಲಯದ ಆಯುಕ್ತರಾದ ಶ್ರೀ ದೇವರಾಜ್ ಅವರು ಮಾತನಾಡಿ, ಚುನಾವಣೆ ಕರ್ತವ್ಯದಲ್ಲಿ ಯಾವುದೇ ಲೋಪಗಳು ಆಗಬಾರದು. ನಾವು ಮಾಡುವ ಕೆಲಸದಲ್ಲಿ ಅರಿವು ಇಲ್ಲದೆ ಇದ್ದಾಗ ಲೋಪಗಳು ಉಂಟಾಗುತ್ತವೆ. ಆದ್ದರಿಂದ ಈ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಅಸಂಖ್ಯಾತ ಬ್ಯಾನರ್ಗಳು, ಮೈಕ್ಗಳಲ್ಲಿ ಪ್ರಚಾರ ಹೆಚ್ಚಾಗಿ ಇರುತ್ತಿತ್ತು, ಆದರೆ ಈಗ ಎಲ್ಲವೂ ನಿಯಮ ಬದ್ಧವಾಗಿ ಅನುಮತಿ ಪಡೆದುಕೊಂಡು ಮಾಡಬೇಕು. ಎಫ್.ಎಸ್.ಟಿ ತಂಡದವರಿಗೆ ತಮ್ಮ ವ್ಯಾಪ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕೆ.ಆರ್. ನಗರ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಸುಪ್ರೀಯ ಬನಾಗರ್, ಕಬಿನಿ ಪ್ರಾಜೆಕ್ಟ್, ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಕೆ ಸತೀಶ್, ಸಹಾಯಕ ಯೋಜನಾಧಿಕಾರಿ ಸುಬ್ರಹ್ಮಣ್ಯ ಶರ್ಮ ಹಾಗೂ ತಾಲ್ಲೂಕು ಮಟ್ಟದ ಸಿಬ್ಬಂದಿಗಳು ಉಪಸ್ಥಿತರಿದ್ದರು.