ಪುಸ್ತಕಗಳ ಓದುವಿಕೆಯಿಂದ ನಾಗರಿಕ ಸುಶಿಕ್ಷಿತ ಸಮಾಜ ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ

ನಂದಿನಿ ಮನುಪ್ರಸಾದ್ ನಾಯಕ್

 

ಪುಸ್ತಕ ಸಂಸ್ಕೃತಿಯಿಂದ ನಾಗರಿಕ ಸುಶಿಕ್ಷಿತ ಸಮಾಜ ಸಾಧ್ಯವಿದೆ

ಪುಸ್ತಕಗಳ ಓದುವಿಕೆಯಿಂದ ನಾಗರಿಕ ಸುಶಿಕ್ಷಿತ ಸಮಾಜ ಸಾಧ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು‌.

ಮೈಸೂರು ತಾಲೂಕಿನ ಡಿ.ಸಾಲುಂಡಿ ಗ್ರಾಮದ ಡಾ.ಬೀರಪ್ಪ.ಹೆಚ್ ನೂತನವಾಗಿ ಉಚಿತವಾಗಿ ಮಾಡಿರುವಂತಹ ಡಾ.ಯತೀಂದ್ರ ಸಿದ್ದರಾಮಯ್ಯ ಜನತಾ ವಾಚನಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸಮಾಜಕ್ಕೆ ಅತ್ಯವಶ್ಯವಾಗಿ ಬೇಕಿರುವುದು ಗ್ರಂಥಾಲಯಗಳು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಓದಿನಲ್ಲಿಯೂ ಸಹ ನಿರತರಾಗಬೇಕು ಆಗ ನಿಮಗೆ ಪ್ರಾಪಂಚಿಕ ಜ್ಞಾನ ಹೆಚ್ಚುತ್ತದೆ.
ಬದುಕಿಗೆ ಬೇಕಾದ ಆತ್ಮಸ್ಥೈರ್ಯ,ಭರವಸೆ, ದೂರದೃಷ್ಟಿ ಎಲ್ಲವೂ ಪುಸ್ತಕಗಳಿಂದ ದೊರೆಯುತ್ತದೆ ಅದನ್ನು ನಾವು ಪಡೆದುಕೊಳ್ಳಬೇಕು ಎಂದರು.
ಓದುವುದರಿಂದ ಮನುಷ್ಯನಲ್ಲಿ ಸಂಚಲನವಾಗುತ್ತದೆ ಚುರುಕುತನ ಬರುತ್ತದೆ ಎಂದು ಹೇಳಿದರು‌.
ನವಮಾಧ್ಯಮ , ಸಾಮಾಜಿಕ ಜಾಲತಾಣಗಳು ಹೆಚ್ಚು ಜನರನ್ನು ಆವರಿಸಿದೆ ಆದರೆ ಪುಸ್ತಕಗಳೆಡೆಗೆ ನಾವೆಲ್ಲರು ಸಾಗಬೇಕಿದೆ ಎಂದು ಸಲಹೆ ನೀಡಿದರು.
ಉಚಿತವಾಗಿ ಗ್ರಂಥಾಲಯ ತೆರೆದು ಉತ್ತಮ ಕಾರ್ಯ ಮಾಡುತ್ತಿರುವ ಡಾ‌.ಬೀರಪ್ಪ ನಡೆ ಉತ್ತಮವಾದುದು ಇಂತಹ ಮಾದರಿ ಸಮಾಜಮುಖಿ ಕಾರ್ಯಗಳು ಹೆಚ್ಚುವಂತಾಗಲಿ ಎಂದರು.
ಸಮಾಜದ ಬಗೆಗೆ ಪ್ರತಿಯೊಬ್ಬರು ಕಾಳಜಿ ಬೆಳೆಸಿಕೊಂಡು ಮಾನವೀಯ ಮೌಲ್ಯಗಳನ್ನು ಪಸರಿಸಬೇಕು ಎಂದು ತಿಳಿಸಿದರು.

ಡಾ.ಬೀರಪ್ಪ.ಹೆಚ್ ಮಾತನಾಡಿ ಶೈಕ್ಷಣಿಕವಾಗಿ ಪಿಹೆಚ್ ಡಿ ಮಾಡಿರುವ ನನ್ನಿಂದ ಸ್ವಗ್ರಾಮಕ್ಕೆ ಏನಾದರೂ ಉತ್ತಮವಾದುದನ್ನು ಮಾಡಬೇಕೆಂದು
ಇಂದಿನ ರಾಜಕಾರಣದಲ್ಲಿ ಅತ್ಯಂತ ಪ್ರಬುದ್ಧತೆ, ಜ್ಞಾನದ ಮೌಲ್ಯ ಅರಿತು, ಸರಳತೆಯೊಂದಿಗೆ, ತತ್ವಾದರ್ಶಗಳಿಂದ ಸಾಗುತ್ತಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಈ ಉಚಿತ ಗ್ರಂಥಾಲಯ ಮಾಡಿರುವುದು ನನಗೆ ಸಂತಸವಿದೆ ಎಂದರು.
ಗ್ರಾಮದ ಯುವಕರು ನಗರ ಪ್ರದೇಶದಲ್ಲಿ ಗ್ರಂಥಾಲಯಗಳಿಗೆ ಮಾಸಿಕ ಹಣ ಪಾವತಿ ಮಾಡಿ ಓದಲು ಹೋಗುತ್ತಿದ್ದರು ಹೀಗಾಗಿ ಉಚಿತವಾಗಿ ಗ್ರಾಮದಲ್ಲಿಯೇ ಎಲ್ಲಾ ಸೌಕರ್ಯಗಳೊಂದಿಗೆ ಅನುಕೂಲವಾಗುವಂತೆ ಗ್ರಂಥಾಲಯ ಮಾಡಿದ್ದೇನೆ ಹಾಗೂ ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಸಹ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಕೇಶ್ ಪಾಪಣ್ಣ,ಕೆಂಚಪ್ಪ, ಹುಚ್ಚೇಗೌಡ,ಬಸಪ್ಪ,ಮರಪ್ಪ,ಚಂದ್ರು,ಶಿವರಾಜ್.ಬಿ, ರವಿಕುಮಾರ್, ಅಶ್ವಥ್ ನಾರಾಯಣ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *