ಕೌಶಲ್ಯ ಕರ್ನಾಟಕದ ಬಲವರ್ಧನೆಯಲ್ಲಿ ಯುವಕರ ಪಾತ್ರ ಮಹತ್ವದ್ದು : ಡಾ. ನಾಗೇಂದ್ರ ಎಫ್ ಹೊನ್ನಳ್ಳಿ

ನಂದಿನಿ ಮೈಸೂರು

“ಕೌಶಲ್ಯ ಕರ್ನಾಟಕದ ಬಲವರ್ಧನೆಯಲ್ಲಿ ಯುವಕರ ಪಾತ್ರ ಮಹತ್ವದ್ದು : ಡಾ. ನಾಗೇಂದ್ರ ಎಫ್ ಹೊನ್ನಳ್ಳಿ

ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ, ಎನ್. ಆರ್. ಮೊಹಲ್ಲಾ ಮೈಸೂರು-07 ಇಲ್ಲಿ ವಿಶ್ವ ಬ್ಯಾಂಕ್ ಪ್ರಾಯೋಜಕ ಕೈಗಾಲಿಕಾ ಮೌಲ್ಯ ವರ್ಧನೆಗಾಗಿ ಕೌಶಲ್ಯಗಳನ್ನು ಬಲಪಡಿಸುವ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.

ನವದೆಹಲಿಯ ಟಿ.ಜಿ.ಟಿ ಅಧಿಕಾರಿಗಳು, ವಿಶ್ವ ಬ್ಯಾಂಕ್‌ನ ಸಮಾಲೋಚಕರು ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ನಿರ್ದೇಶಕರು ಹಾಗೂ ಮೈಸೂರು ವಿಭಾಗದ ಜಂಟಿ ನಿದೇಶಕರುಗಳನ್ನೊಳಗೊಂಡ ತಂಡ ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಎನ್. ಆರ್. ಮೊಹಲ್ಲಾ, ಮೈಸೂರು-07 1964ರಲ್ಲಿ ಪ್ರಾರಂಭಗೊಂಡಿದ್ದು ಮೈಸೂರು ಸುತ್ತಮುತ್ತಲಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಕರಿಗೆ ಕೌಶಲ್ಯ ತರಬೇತಿಯನ್ನು ಒದಗಿಸುತ್ತಾ ಬಂದಿರುತ್ತದೆ.

ಕೈಗಾಲಿಕಾ ಮೌಲ್ಯ ವರ್ಧನೆಗಾಗಿ ಕೌಶಲ್ಯಗಳನ್ನು ಬಲಪಡಿಸುವ ಯೋಜನೆಯಡಿಯಲ್ಲಿ ಒಟ್ಟು 1,96 ಲಕ್ಷಗಳ ಅನುದಾನದಡಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಕ್ರಿಯಾಯೋಜನೆಯನ್ನು ತಯಾರಿಸಿದ್ದು ಮೊದಲ ಹಂತದಲ್ಲಿ ಬಿಡುಗಡೆಯಾದ ಅನುದಾನ ರೂ. 78 ಲಕ್ಷಗಳಲ್ಲಿ ಶೇಕಡ 63 ಅನುದಾನ ಬಳಕೆ ಆಗಿರುತ್ತದೆ. ಉಳಿದ ಅನುದಾನವನ್ನು ನಿಗದಿತ ಅವಧಿಯಲ್ಲಿ ಬಳಕೆ ಮಾಡಿಕೊಂಡು 2ನೇ ಹಂತದ ಅನುದಾನ ಬಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಡಿ.ಟಿ.ಡಿ ಅಧಿಕಾರಿಗಳು ಸೂಚಿಸಿದರು.

ಪ್ರಗತಿ ಪರೀಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ನಿರ್ದೇಶಕರಾದ ಶ್ರೀ ಡಾ. ನಾಗೇಂದ್ರ ಎಫ್, ಹೊನ್ನಳ್ಳಿಯವರು ಮೈಸೂರು ಪ್ರದೇಶದ ವ್ಯಾಪ್ತಿಯಲ್ಲಿ ಸಿ.ಎನ್‌.ಸಿ ಹಬ್ ನಿರ್ಮಾಣ ಮಾಡುವ ಸದುದ್ದೇಶದಿಂದ ಪ್ರಸ್ತುತ ಜಾಲಿಯಲ್ಲಿರುವ ಕೈಗಾರಿಕಾ 4.0 ನಾರ್ಮ್ಗಗಳಡಿಯಲ್ಲಿ ಯುವಕರಿಗೆ ಕೌಶಲ್ಯಾಧಾರಿತ ತರಬೇತಿಯನ್ನು ಇನ್ನು ಹೆಚ್ಚು ಸಕ್ರಿಯವಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ಬಾಲಕಿಯರ ಪ್ರವೇಶ ಅಭಿಯಾನ ಹೆಚ್ಚಿಸಲು ಮತ್ತು ವೃತ್ತಿ ಕೌಶಲ್ಯ ತರಬೇತಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಸುತ್ತಮುತ್ತಲಿನ ಕೈಗಾರಿಕೆಗಳಲ್ಲಿ ಕಲಕೆಯೊಂದಿಗೆ ವೃತ್ತಿಯನ್ನು ಕೈಗೊಳ್ಳುವಂತೆ ಪ್ರೇರೇಪಿಸುವಂತೆ ಸಲಹೆ ನೀಡಿದರು. ಅಲ್ಲದೆ ದಾವಾ ಉದ್ಯೋಗ ಯೋಜನೆಯಡಿಯಲ್ಲಿ ಪ್ರಸ್ತುತ ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚು ಮನ್ನಣೆ ಪಡೆಯುತ್ತಿರುವ ಮೆಕ್ಯಾನಿಕ್ ಎಲೆಸ್ಟಿಕ್ ವೆಹಿಕಲ್, ಪಿ.ಎನ್.ಪಿ ಮತ್ತು ರೋಬೋಟಕ್ಸ್ ಕೋರ್ಸ್‌ಗಳನ್ನು ಪ್ರಾರಂಭಿಸಿದ್ದು ನಗರ ಮತ್ತು ಗ್ರಾಮೀಣ ಪ್ರದೇಶದ ಯುವಕರು ಈ ಅವಕಾಶವನ್ನು ಬಳಸಿಕೊಂಡು ವೃತ್ತಿ ಕೌಶಲ್ಯವನ್ನು ಪಡೆದುಕೊಳ್ಳುವಂತೆ ಕೋರಿದರು.

ಮುಂದುವರೆದು, ಇ.ಸಿ.ಐ ಗಳು ಪ್ರವೇಶ ಪಡೆಯಲು ಕೇವಲ 1 OO/- ಗಳ ಪ್ರವಂಶ ಶುಲ್ಕವಿದ್ದು, ಯಾವುದೇ ಗರಿಷ್ಠ ಇಲ್ಲದಿರುವುದರಿಂದ ನಾವು ಕಾರಣರಾದ ಉವಕ ವ್ಯಾಸಂಗವನ್ನು ಮುಂದುವರೆಸಲು ಸಾಧ್ಯವಾಗಿರುವ ಯುವ ಬುದ್ದರು ಅಶ ಹಮ ವೆಚ್ಚದಲ್ಲಿ ಉನ್ನತ ಗುಣಮಟ್ಟದ ವೃತ್ತಿ ಕೌಶಲ್ಯಗಳನ್ನು ನಡೆಸುತ್ತಿರುವ ಐ.ಟಿ.ಐ. ರವರ ಪಡೆದುಕೊಂಡ ಕೌಶಲ್ಯಾಭರಿತರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳ್ಳುವಂತೆ ಕರೆಕೊಟ್ಟರು ಏ.0.60 ರಲ್ಲಿ ವೃತ್ತಿ ಕೌಶಲ್ಯ ಪಡೆದಿರುವ ವಿದ್ಯಾರ್ಥಿಗಳು ದೇಶದ ಬಹುದೊಡ್ಡ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಚಂದ್ರಯಾನ-3 ಯೋಜನೆಯಲ್ಲಿ ನಮ್ಮ 5, ಜನ ಐ ಟಿ ಐ ನುರಿತ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಪ್ರಗತಿ ಪರೀಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮೈಸೂರು ವಿಭಾಗದ ಜಂಟಿ ನಿರ್ದೇಶಕರಾದ ಶ್ರೀಮತಿ ಮಂಜುಳ.ಎಸ್. ರವರು ಸದರಿ ಸಂಸ್ಥೆಯಲ್ಲಿ ಅನುಷ್ಠಾನಗೊಳಸುತ್ತಿರುವ ವಿವಿಧ ವೃತ್ತಿಗಳಾದ 14 ರಿಂದ 17 ವೃತ್ತಿಗಳಿಗೆ ಅನ್ವಯಿಸುವಂತೆ ಕೈಗಾರಿಕಾ ಮೌಲ್ಯವರ್ಧನೆಗಾಗಿ ಕೌಶಲ್ಯಗಳನ್ನು ಬಲಪಡಿಸುವ ಯೋಜನೆಯಡಿಯಲ್ಲಿ ತರಬೇತಿ ಪಡೆಯುತ್ತಿರುವ ತರಬೇತಿದಾರರಿಗೆ On Job Training ನೀಡಿ ಆ ತರಬೇತಿದಾರರು ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸ್ಪರ್ದಾತ್ಮಕ ಯುಗದಲ್ಲಿ ವಿವಿಧ ಕೈಗಾರಿಕೋದ್ಯಮಗಳಲ್ಲಿ ತಮ್ಮದೆ ಆದ ಕೌಶಲ್ಯ ನೈಮಣ್ಯತೆಯನ್ನು ನೀಡಲು ಅವಕಾಶ

ಪ್ರಗತಿ ಪರೀಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ಹಲೀಶ್ವರಪ್ಪ.ಬಿ ಇ., ರವರು ಮೈಸೂರು ಪ್ರಾಂತ್ಯದಲ್ಲಿ CNC Technological Hub ನ್ನು ಅಭಿವೃದ್ಧಿಗೊಸಿ ಕೈಗಾರಿಕಾ ಮತ್ತು ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಅವಶ್ಯಕತೆಯಿರುವ ಸಿ.ಎನ್.ಸಿ ಕೌಶಲ್ಯವನ್ನು ವೃದ್ಧಿಗೊಳಿಸಿ ತರಬೇತಿದಾರರನ್ನು ಕೈಗಾರಿಕಾ 4.0 ಹಂತಕ್ಕೆ ತರಬೇತಿಗೊಳಸಲು ಉದ್ದೇಶಿಸಲಾಗಿದೆ. ಹಾಗಾಗಿ, ಇದರ ಉಪಯೋಗವನ್ನ ಸ್ಥಳೀಯ ಕೈಗಾರಿಕಾ ಸಿಬ್ಬಂದಿಗಳು ಹಾಗೂ ತಾಂತ್ರಿಕ, ಶೈಕ್ಷಣಿಕ ಸಂಸ್ಥೆಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಕೋರಿದರು.

ಪ್ರಗತಿ ಪರೀಶೀಲನಾ ಸಭೆಯಲ್ಲಿ ಆಯುಕ್ತಾಲಯದ ಜಂಟಿ ನಿರ್ದೇಶಕರಾದ ಶ್ರೀ ಬಿ ಎಲ್ ಚಂದ್ರಶೇಖರ್, ಉಪನಿರ್ದೇಶಕರಾದ ಶ್ರೀ ರಾಜನಾಯಕ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀಮತಿ ಮೀನಾಕ್ಷಿ ಜಿ ಎಸ್ ರವರು ಹಾಜರಿದ್ದರು.

 

Leave a Reply

Your email address will not be published. Required fields are marked *