ನಾನು ಕಾಂಗ್ರೆಸ್ ಪಕ್ಷದ ಶಾಶ್ವತ ಕಾವಲುಗಾರ – ಡಾ. ಬಿ.ಜೆ ವಿಜಯ್ ಕುಮಾರ್

 

ನಂದಿನಿ ಮೈಸೂರು

ನಾನು ಕಾಂಗ್ರೆಸ್ ಪಕ್ಷದ ಶಾಶ್ವತ ಕಾವಲುಗಾರ – ಡಾ. ಬಿಜೆವಿ

ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿ ಮೈಸೂರು ಲೋಕಸಭೆಗೆ ಎಂ ಲಕ್ಷ್ಮಣ್ ಹೆಸರನ್ನು ಅಂತಿಮಗೊಳಿಸಿದೆ. ಅದಕ್ಕಾಗಿ ನಾನು ವೈಯಕ್ತಿಕವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಡಾ.ಬಿಜೆ. ವಿಜಯಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಚುನಾವಣಾ ಸಮಿತಿ ಇಬ್ಬರ ಹೆಸರನ್ನ ಅಂತಿಮಗೊಳಿಸಿ, ಎಂ ಲಕ್ಷ್ಮಣ್ ಹಾಗೂ ಡಾ.ಬಿ ಜೆ ವಿಜಯ್ ಕುಮಾರ್ ಇವರನ್ನು AICC ಯ ರಾಷ್ಟ್ರೀಯ ಚುನಾವಣೆ ಸಮಿತಿಗೆ ಶಿಫಾರಸ್ಸು ಗೊಂಡಿದ್ದು. ಸುಮಾರು ಮೂರು ದಿನಗಳ ದೀರ್ಘಾವಧಿ ಚರ್ಚೆಯ ನಂತರ ಎಂ. ಲಕ್ಷ್ಮಣ್ ಅವರ ಹೆಸರನ್ನು ಅಂತಿಮಗೊಳಿಸಿದೆ.

ಹೈಕಮಾಂಡ್ ತೀರ್ಮಾನಕ್ಕೆ ತಲೆಬಾಗಿ ಲಕ್ಷ್ಮಣ್ ಅವರ ಗೆಲುವಿಗಾಗಿ ಸಾಮೂಹಿಕ ಹೋರಾಟ ನಮ್ಮ ಮುಂದಿನ ಗುರಿ. ನನಗೆ ಅಧಿಕಾರಕ್ಕಿಂತ ಪಕ್ಷವೇ ತಾಯಿ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿಮೋಚನಗಾಗಿ ಸ್ವಾತಂತ್ರ್ಯ ಚಳುವಳಿ. ಇಂದು ಸ್ವಾತಂತ್ರ್ಯ ಭಾರತವನ್ನು ಸಂವಿಧಾನದ ಆಶಯಗಳ ಅಡಿಯಲ್ಲಿ ಸುಭದ್ರ ಹಾಗೂ ಸಮಗ್ರ ಶಾಂತಿಯುತ ಭಾರತದ ನಿರ್ಮಾಣಕ್ಕಾಗಿ ಬಿಜೆಪಿ ವಿರುದ್ಧ ಭಾರತದ ಪ್ರತಿಯೊಬ್ಬ ಪ್ರಜೆ ಚುನಾವಣಾ ಸಂಗ್ರಾಮ ಆರಂಭಿಸುವ ನೈತಿಕ ಜವಾಬ್ದಾರಿ ನಮ್ಮಗಳ ಮೇಲಿದೆ. ಆದ್ದರಿಂದ ನಾನು ಕಾಂಗ್ರೆಸ್ ಪಕ್ಷದ ಶಾಶ್ವತ ಕಾವಲುಗಾರ ಎಂದಿದ್ದಾರೆ.

Leave a Reply

Your email address will not be published. Required fields are marked *