ಸರ್ಕಾರದ ಆಶ್ರಯ ಮನೆ ಕುರಿತ “ದೊಡ್ಡಟ್ಟಿ ಬೋರೇಗೌಡ” ಸಿನಿಮಾ ಹಾಡು ಬಿಡುಗಡೆ

ನಂದಿನಿ ಮೈಸೂರು

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ “ದೊಡ್ಡಟ್ಟಿ ಬೋರೇಗೌಡ’ ಸಿನಿಮಾದ ಪೋಸ್ಟರ್ ಬಿಡುಗಡೆ ಜೊತೆಗೆ ಚಿತ್ರದ ಹಾಡೊಂದು ಬಿಡುಗಡೆಗೊಂಡಿದೆ.

ಕನ್ನಡದಲ್ಲಿ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳು ಗೆಲ್ಲುತ್ತಿವೆ. ಆ ಸಾಲಿಗೆ ಸೇರಿರುವ ‘ದೊಡ್ಡಟ್ಟಿ ಬೋರೇಗೌಡ’ ಗ್ರಾಮೀಣ ಕಥೆಯ ಚಿತ್ರವಾಗಿದ್ದು ಗಮನ ಸೆಳೆಯುತ್ತಿದೆ. ಕೆಎಂ ರಘು ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. 

ರಾಜರಾಜೇಶ್ವರಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶಶಿಕುಮಾರ್ ಬಿ.ಸಿ ಮತ್ತು ಲೋಕೇಶ್ ಕೆ.ಎಂ ನಿರ್ಮಾಣದ
ಆಶ್ರಯ ಯೋಜನೆ ಕುರಿತ ‘ದೊಡ್ಡಟ್ಟಿ ಬೋರೇಗೌಡ’ ಸಿನಿಮಾದ ಪೋಸ್ಟರ್ ಅನ್ನು
ಸಾಹಿತಿ ಬನ್ನೂರು ರಾಜು ಅವರು ದೊಡ್ಡಹಟ್ಟಿ ಬೋರೇಗೌಡ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿ, ಈ ಚಲನಚಿತ್ರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಉತ್ತಮ ಬಹುಮಾನ ಗಳಿಸಿರುವುದು ಸಂತಸದ ಸಂಗತಿಯಾಗಿದೆ. ಚಲನಚಿತ್ರ ಮಾಧ್ಯಮವೇ ಒಂದು ಮಾಯಾಲೋಕವಾಗಿದ್ದು, ಇಲ್ಲಿ ಮನಸ್ಸು ಮಾಡಿದರೆ ಏನಾದರೂ ಸಾಧನೆ ಮಾಡಬಹುದೆಂಬುದಕ್ಕೆ ಈ ಚಲನಚಿತ್ರ ಸಾಕ್ಷಿಯಾಗಿದೆ.
ಸರ್ಕಾರ ಏನೇ ಸೌಲಭ್ಯ ನೀಡಿದರೂ ಅವು ಸಾಮಾನ್ಯರನ್ನು ಹೇಗೆ ತಲುಪುತ್ತವೆ ಎಂಬ ಸತ್ಯಕ್ಕೆ ಈ ಚಲನಚಿತ್ರ ಕನ್ನಡಿ ಹಿಡಿದಿದೆ ಎಂದರು.

ಬಳಿಕ, ಚಿತ್ರ ಬಿಡುಗಡೆಗೆ ನೆರವು ನೀಡಿರುವ ಅನ್ನಪೂರ್ಣ ವೆಂಕಟೇಶ್ ಮಾತನಾಡಿ, ಮನೆ ಕಟ್ಟಬೇಕೆಂಬುದು ಎಲ್ಲರ ಕನಸಾಗಿದೆ. ಎಂತಹ ಐಷಾರಾಮಿ ಹೊಟೇಲ್‌ಗಳಲ್ಲಿ ಇದ್ದರೂ ಸ್ವಂತ ಮನೆಯಲ್ಲಿ ಊಟ ಮಾಡಿದಾಗ ಸಿಗುವ ನೆಮ್ಮದಿ ಅಲ್ಲಿ ದೊರಕುವುದಿಲ್ಲ. ಹೀಗಾಗಿ ಉತ್ತಮ ಕಥಾ ವಸ್ತುವನ್ನು ಈ ಚಲನಚಿತ್ರ ಒಳಗೊಂಡಿರುವ ಕಾರಣ ತಾವು ನೆರವಿಗೆ ಬಂದುದಾಗಿ ತಿಳಿಸಿದರು.

ಈ ಹಿಂದೆ ‘ತರ್ಲೆ ವಿಲೇಜ್’ ಮತ್ತು ‘ಪರಸಂಗ’ ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಈಗ ಗ್ರಾಮೀಣ ಸೊಗಡಿನ ಆಧಾರದ ಮೇಲೆ ‘ದೊಡ್ಡಟ್ಟಿ ಬೋರೇಗೌಡ’ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಮನೆಯ ಸುತ್ತ ಹೆಣೆದ ಕಥೆ. ಹಳ್ಳಿಯ ಬಡವರಿಗೆ ಸರ್ಕಾರ ನೀಡುವ ಆಶ್ರಯ ಯೋಜನೆ ಮನೆ ಪಡೆಯಲು ಒಬ್ಬ ವ್ಯಕ್ತಿ ಹೇಗೆ ಕಷ್ಟಪಡುತ್ತಾನೆ ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ಇದು ಕಲಾತ್ಮಕ ಚಿತ್ರವಲ್ಲ. ವಾಣಿಜ್ಯ ಚಿತ್ರ. ನನ್ನ ಪ್ರಕಾರ ಕಮರ್ಷಿಯಲ್ ಚಿತ್ರಗಳೆಂದರೆ ಆರರಿಂದ ಅರವತ್ತು ವರ್ಷಗಳವರೆಗೆ ಎಲ್ಲರನ್ನೂ ಸೆಳೆಯುವ ಚಿತ್ರಗಳು. ಗ್ರಾಮೀಣ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಎಲ್ಲರೂ ಮೂರು ತಿಂಗಳು ತರಬೇತಿ ಪಡೆದು ಅವರೊಂದಿಗೆ ನಟಿಸಿದ್ದಾರೆ. ಎನ್ನುತ್ತಾರೆ ನಿರ್ದೇಶಕ ಕೆ.ಎಂ.ರಘು.

ಮೈಸೂರು ಸಮೀಪದ ಬೀರಹುಂಡಿ ಗ್ರಾಮದ ಒಂದು ಕಾಲದ ಶಿವಣ್ಣ ಬೀರಹುಂಡಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ‘ನಾನು ಮೈಸೂರು ಸಮೀಪದ ಬೀರಹುಂಡಿ ಗ್ರಾಮದವನು. ಗ್ರಾಮ ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ರಂಗಭೂಮಿಯಲ್ಲಿ ಅನುಭವವಿದೆ. ದೊಡ್ಡ ಪರದೆಯ ಮೇಲೆ ಮೊದಲ ಚಿತ್ರ. ಈ ಸಿನಿಮಾದಲ್ಲಿ ನಾನೇ ಬೋರೇಗೌಡನ ಪಾತ್ರ ಮಾಡಿದ್ದೇನೆ ಎಂದು ಶಿವಣ್ಣ ಬೀರಹುಂಡಿ ತಮ್ಮ ನಟನೆ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್,ನಾರಾಯಣಗೌಡ,ಅಭಿ ಸೇರಿದಂತೆ
ಮುಂತಾದವರು ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಗ್ರಾಮೀಣ ಸೊಗಡಿನ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

Leave a Reply

Your email address will not be published. Required fields are marked *