ಎಚ್.ಡಿ.ಕೋಟೆ :3 ಫೆಬ್ರವರಿ 2022
ನಂದಿನಿ ಮೈಸೂರು
ಐ ಡಿ ಎಫ್. ಸಿ .ಫಸ್ಟ್ ಭಾರತ್ ಸಂಸ್ಥೆಯ ವತಿಯಿಂದ ಎಚ್ ಡಿ ಕೋಟೆಯ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಡಿಜಿಟಲ್ ಬೋರ್ಡ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಇಂದು ಕಾಲೇಜಿಗೆ ಆಗಮಿಸಿದ
ಐ ,ಡಿ ,ಎಫ್ ,ಸಿ .ಫಸ್ಟ್ ಭರತ್ ಸಂಸ್ಥೆಯ ಬ್ರ್ಯಾಂಚ್ ಮ್ಯಾನೇಜರ್ ಕಾಂತರಾಜುರವರು
ಪ್ರಾಂಶುಪಾಲರಾದ ಸುದೀಪ್ ರವರಿಗೆ ಡಿಜಿಟಲ್ ಸ್ಮಾರ್ಟ್ ಬೋರ್ಡ್ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕೂಡ ಸ್ಮಾರ್ಟ್ ಆಗ್ತೀದೆ.ಆಗಾಗಿ
ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗೆ ಅನುಕೂಲವಾಗಲೆಂದು ಸಂಸ್ಥೆಯಿಂದ ಈ ಡಿಜಿಟಲ್ ಬೋರ್ಡ್ ಅನ್ನು ಸುಮಾರು 1ಲಕ್ಷದ ಮೂವತ್ತು ಸಾವಿರ ವೆಚ್ಚದ ಈ ಬೋರ್ಡನ್ನು ಕಾಲೇಜಿಗೆ ನೀಡುತ್ತಿದ್ದೇವೆ.ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಕಾಲೇಜಿಗೆ ಕೀರ್ತಿ ತರುವಂತೆ ತಿಳಿಸಿದರು.
ತದ ನಂತರ ಮ್ಯಾನೇಜರ್ ವೆಂಕಟೇಶ್ ರವರು ಮಾತನಾಡಿ ಸಂಘಗಳು ಬರೀ ಹಣವನ್ನು ನೀಡುವದಷ್ಟೇ ತಲ್ಲೀನರಾಗದೆ ಸಮಾಜಮುಖಿ ಕೆಲಸಗಳಿಗೆ ಪ್ರೇರೇಪಣೆ ಆಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಂತರಾಜ್ ,ಪುಟ್ಟಸ್ವಾಮಿ ,ಮ್ಯಾರಿ ,ಜಾನ್ ಪಾಲ್ ಅಶೋಕ್ ,ಚಂದ್ರಶೇಖರ್ G.ಇಮ್ರಾನ್ ಖಾನ್ ,ಕುಮಾರಸ್ವಾಮಿ ,ಯೋಗೇಂದ್ರ ಬಿಎಸ್ ,ವೇಲು ,ಶಶಿಕುಮಾರ್ ,ಗಿರೀಶ್ ,ಪ್ರಜ್ವಲ್,ಕೆಂಡಗಣ್ಣ ಸ್ವಾಮಿ ,ಸುನೀಲ್,ಶಿವು, ನಿರಂಜನ್ ಮಹೇಶ್
ಅರವಿಂದ್ ಇನ್ನಿತರರು ಹಾಜರಿದ್ದರು.