ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾಯಕ ಸಮುದಾಯದವರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ ಒತ್ತಾಯಿಸಿದರು.
ಮೈಸೂರು ವಿಭಾಗದಲ್ಲಿ ಸುಮಾರು 14 ರಿಂದ 15ಲಕ್ಷ ಜನಸಂಖ್ಯೆ ಇದ್ದು ಪ್ರಸ್ತುತ ಒಬ್ಬರೇ ಶಾಸಕರಿರುತ್ತಾರೆ. ನಮ್ಮ ಸಮುದಾಯವು ಮೈಸೂರು ವಿಭಾಗದಲ್ಲಿ 7 ರಿಂದ 8 ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಇದೆ. ಈ ಹಿಂದೆ 4 ಜನ ಶಾಸಕರು ಆಯ್ಕೆಯಾಗುತ್ತಿದ್ದರು. ಆದರೆ ಈಗ ಕೇವಲ ಒಂದು ಸ್ಥಾನಕ್ಕೆ ಬಂದು ನಿಂತಿದೆ ಇದು ನಮ್ಮ ಸಮುದಾಯಕ್ಕಾಗಿರುವ ರಾಜಕೀಯ ಅನ್ಯಾಯ. ಆದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸ್ಪರ್ಧಿಸಲು ನಾಯಕ ಸಮುದಾಯಕ್ಕೆ ಅವಕಾಶ ನೀಡುವುದರ ಮೂಲಕ ರಾಜಕೀಯ ನೆಲೆಯನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡುತ್ತೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಸಿದ್ದಯ್ಯ, ಜನಾಂಗದ ಮುಖಂಡರಾದ ಸಿದ್ದರಾಜು, ಮಂಜುನಾಥ್,ಪುಟ್ಟರಾಜು,ನಾಗರಾಜು ರಮ್ಮನಹಳ್ಳಿ ಹಾಜರಿದ್ದರು.