ನಂದಿನಿ ಮೈಸೂರು
ಇಂದಿನಿಂದ ಒಂದು ತಿಂಗಳ ಕಾಲ ಧರ್ನುಮಾಸ ಇರಲಿದ್ದು ಜನರು ಇಷ್ಟಾರ್ಥ ಸಿದ್ದಿಗಾಗಿ ಧರ್ನುಮಾಸ ಪೂಜೆ ಮಾಡುವುದು ವಾಡಿಕೆ.ಈ ಹಿನ್ನಲೆಯಲ್ಲಿ ವಿಜಯನಗರದ ಮೊದಲನೇ ಹಂತದಲ್ಲಿರುವ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೊದಲ ದಿನದ ಧರ್ನುಮಾಸ ವಿಶೇಷ ಪೂಜೆ ನೆರವೇರಿತು.
ದೇವಸ್ಥಾನದ ಸಂಸ್ಥಾಪಕರಾದ ಭಾಷ್ಯಂ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ಶ್ರೀನಿವಾಸ್ ರವರ ನೇತೃತ್ವದಲ್ಲಿ
ಶ್ರೀಯೋಗನರಸಿಂಹಸ್ವಾಮಿ ದೇವರ ಮೂರ್ತಿಗೆ ಬೆಳಗಿನಿಂದಲೂ ವಿಶೇಷ ಅಭಿಷೇಕ ಹಾಗೂ ಪೂಜಾ ವಿಧಿ ವಿಧಾನಗಳು ನೆರವೇರಿದವು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸ್ಥಳೀಯ ಜೆಡಿಎಸ್ ಮುಖಂಡರಾದ ಪುಟ್ಟರಾಜು ಮಾತನಾಡಿ ಕಳೆದ 10 11 ವರ್ಷಗಳಿಂದಲೂ ನಾವು ಶ್ರೀಯೋಗನರಸಿಂಹಸ್ವಾಮಿ ದೇವಸ್ಥಾನದ ಭಕ್ತರಾಗಿದ್ದೇವೆ.ನಾವು ಬೇಡಿದ್ದೆಲ್ಲವನ್ನು ದೇವರು ಕರುಣಿಸಿದ್ದಾರೆ. ಇಂದಿನಿಂದ ಧನುರ್ಮಾಸದ 1 ತಿಂಗಳಲ್ಲಿ ವಿಶೇಷ ಪೂಜೆ ಅಭಿಷೇಕ ಹೋಮ ಹವನಗಳು ನಡೆಯುತ್ತದೆ.ವಿಷೇಶವಾಗಿ ಹೊಸ ವರ್ಷದ ದಿನದಂದು ಎರಡು ಲಕ್ಷ ಲಾಡನ್ನು ಭಕ್ತರಿಗೆ ಹಂಚುತ್ತಾರೆ. ಆ ದೇವರಿಗೆ ನಾವು ಕೂಡ ಭಕ್ತರಾಗಿ ಸೇವೆ ಸಲ್ಲಿಸುತ್ತಿದ್ದೇವೆ.ಈ ದೇವಸ್ಥಾನ ಮತ್ತಷ್ಟು ಅಭಿವೃದ್ಧಿ ಆಗಲೀ ಎಂದು ನಾನು ಪ್ರಾರ್ಥಿಸುತ್ತೇನೆ ಎಂದರು.