ನಂದಿನಿ ಮೈಸೂರು
ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಸಾಹುಕಾರಹುಂಡಿ ಸಿ.ಮಹದೇವು ಅವರನ್ನು ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಳಿಸಲಾಯಿತು ಎಂದು ದೇವರಾಜ್ ಕಾಟೂರು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಸಾಹುಕಾರಹುಂಡಿ ಸಿ.ಮಹದೇವು ಅವರು ಸಂಘದ ಅಭಿವೃದ್ಧಿಗೆ ಸ್ಪಂದಿಸದೆ ಇದ್ದುದ್ದರಿಂದ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಿಗೆ ಇವರ ಮೇಲೆ ವಿಶ್ವಾಸವಿಲ್ಲದ ಕಾರಣ ಅವರನ್ನು ವಜಾಗೊಳಿಸಬೇಕೆಂದು
ಸಂಘ ಕಾರ್ಯದರ್ಶಿಗಳ ಮೂಲಕ ಉಪ ನಿಬಂದಕರು ಸಹಕಾರ ಸಂಘ ಇವರಿಗೆ ಆಡಳಿತ ಮಂಡಳಿಯ ಸದಸ್ಯರು ಉಪಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಬೇಕೆಂದು ಪತ್ರ ನೀಡಿದ್ದ ಮೇರೆಗೆ ಉಪ ನಿಂಬಂದರು ,ಸಹಕಾರ ಸಂಘಗಳ ಹಿರಿಯ ನಿರೀಕ್ಷಕರಾದ ರಾಜು.ಬಿ ಅವರನ್ನು ನೇಮಕ ಮಾಡಿ 19-11-2022 ರಂದು ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ನೋಟೀಸ್ ನೀಡಿರುತ್ತಾರೆ.
ಅದರಂತೆ ಇಂದು ನಡೆದ ಸಭೆಯಲ್ಲಿ 10 ಜನ ನಿರ್ದೇಶಕರು ಹಾಜರಿದ್ದು ಎಲ್ಲಾ 10 ಜನ ನಿರ್ದೇಶಕರು ಗುಪ್ತ ಮತದಾನದ ಮೂಲಕ ಮತ ಚಲಾಯಿಸಿದರು.
ಮತ ಏಣಿಕೆ ನಡೆಸಲಾಗಿ ಸಂಘದ ಉಪಾಧ್ಯಕ್ಷರಾದ ಸಾಹುಕಾರಹುಂಡಿ ಮಹದೇವು ಇವರ ವಿರುದ್ದ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪರ 10 ಜನ ನಿರ್ದೇಶಕರು ಮತ ಚಲಾಯಿಸಿರುತ್ತಾರೆ.ನಿರ್ಣಯದ ವಿರುದ್ಧ ಯಾವೊಬ್ಬ ನಿರ್ದೇಶಕರು ಮತ ಚಲಾಯಿಸಿರುವುದಿಲ್ಲಾ
ನಿಯಮಾನುಸಾರ ಹಾಜರಿದ್ದ ನಿರ್ದೇಶಕರುಗಳ ಪೈಕಿ 2/3 ರಷ್ಟು ನಿರ್ದೇಶಕರುಗಳು ಸಂಘದ ಉಪಾಧ್ಯಕ್ಷರಾದ ಸಾಹುಕಾರಹುಂಡಿ ಸಿ.ಮಹದೇವು ಇವರ ವಿರುದ್ಧ ಮತ ಚಲಾಯಿಸಿರುವುದರಿಂದ ಸಂಘದ ಉಪಾಧ್ಯಕ್ಷರಾದ ಸಾಹುಕಾರಹುಂಡಿ ಸಿ.ಮಹದೇವು ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಪದಚ್ಯತಿ ಗೊಳಿಸಲಾಯಿತು ಎಂದು ಷೋಷಿಸಿದರು.
ಅವಿಶ್ವಾಸ ಪರವಾಗಿ ಮತಚಲಾಯಿಸಿದವರು ಸಂಘದ ಅಧ್ಯಕ್ಷರಾದ ದೇವರಾಜ್ ಟಿ.ಕಾಟೂರು*,ನಿರ್ದೇಶಕರುಗಳಾದ ಹಿನಕಲ್ ಗ್ರಾಮದವರಾದ ಸಿ.ಸ್ವಾಮಿ,ರಾಜಣ್ಣ.ಪಿ.ವಿಜಯಕುಮಾರ್ ,ಶಿವಕುಮಾರಸ್ವಾಮಿ,ಹೊಸರಾಮಹಳ್ಳಿ ನಾರಾಯಣ್*, ಸರಸ್ವತಿ ಪುಟ್ಟಣ್ಣ,ಪ್ರೋ.ನಂಜುಂಡಸ್ವಾಮಿ,ಎನ್.ಬೆಳ್ತೂರು ನಿಂಗರಾಜು,ಅಲನಹಳ್ಳಿ ಪ್ರಕಾಶ್ ಹಾಜರಿದ್ದರು.