ಭೀಮನಕೊಲ್ಲಿ – ಗಮನ ಸೆಳೆದ ದಸರಾ ಮಾದರಿಯ ವಸ್ತು ಪ್ರದರ್ಶನ.
ಇಂದು ಎಚ್.ಡಿ.ಕೋಟೆ ತಾಲೋಕಿನ ಭೀಮನಕೊಲ್ಲಿ ಮೈದಾನದಲ್ಲಿ ನಡೆದ ಜಿಲ್ಲಾಧಿಕಾರಿ ನೆಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸರ್ಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ಪರಿಚಯಿಸು ಸಲುವಾಗಿ 38 ಇಲಾಖೆಗಳಿಂದ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.
ಕರ್ನಾಟಕ ಸರ್ಕಾರದ ಕಂದಾಯ ಸಚಿವರ ಆರ್. ಅಶೋಕ್ ಮಳಿಗೆಗೆ ಚಾಲನೆ ನೀಡಿದರು. 38 ಇಲಾಖೆಗಳ ಸ್ಟಾಲ್ ಗಳನ್ನು ವೀಕ್ಷೀಸಿದರು.
ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನೋಡುಗರನ್ನ ಕೈಬಿಸಿ ಕರೆಯುವಂತಿತ್ತು.ಇದೇ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು,ಜಿಲ್ಲಾಧಿಕಾರಿ ರಾಜೇಂದ್ರ,ಎಸ್. ಪಿ ಚೇತನ್ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.
ವಸ್ತು ಪ್ರದರ್ಶನ ನೋಡಲು ಮುಂಜಾನೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜನರು ಜಮಹಿಸಿದರು.