ನಂದಿನಿ ಮೈಸೂರು
ನಿಯೋಜಿತ ದೇವಾಂಗ ಕುಟುಂಬಗಳ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ಮೈಸೂರಿನ ಅರವಿಂದ ಆಸ್ಪತ್ರೆ ಬಳಿ ಇರುವ ಸುಮುಖ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಪೂರ್ವ ಭಾವಿ ಸಭೆಗೆ ವೇದಿಕೆಯ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಸಮುದಾಯದ ಜನರು ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ವೇದಿಕೆ ಮೇಲೆ ತಮ್ಮ ತಮ್ಮ ಅಭಿಪ್ರಾಯ,ಸಲಹೆ ಹಂಚಿಕೊಂಡರು.
ಮುಖ್ಯ ಸಂಘಟಕ ಜಗದೀಶ್ ಮಾತನಾಡಿ ಮೈಸೂರು ಜಿಲ್ಲೆ ಮತ್ತು ನಗರ ಪ್ರದೇಶದ ದೇವಾಂಗ ಸಮುದಾಯದವರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ನಿರಂತರ ಕಾರ್ಯಕ್ರಮ ರೂಪಿಸಿ ಹಲವಾರು ಬಗೆಯ ಮಾಹಿತಿ,ಸೌಲಭ್ಯ ನೀಡಿ ಸಮಾಜದ ಮುನ್ನಡೆಗೆ ತರುವ ಪ್ರಯತ್ನವಾಗಿ ನಿಯೋಜಿತ ದೇವಾಂಗ ಕುಟುಂಬವನ್ನು ರಚಿಸುವ ಉದ್ದೇಶದಿಂದ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ನಿಯೋಜಿತ ದೇವಾಂಗ ಕುಟುಂಬ ವೇದಿಕೆಯ ಕೆಲವೊಂದು ಯೋಜನೆಗಳನ್ನು ವಿವರಿಸಿದರು.
ಪೂರ್ವಸಭಾ ಸಭೆಯಲ್ಲಿ ಶ್ರೀನಿವಾಸ್, ಎಂ.ಆರ್.ಗೋವಿಂದರಾಜ್,ಬಾಲರಾಜ್.ಎಂ.ವಿ,ಮಂಜುನಾಥ್,ರತ್ನಾಕರ್,ಕುಮಾರ,ಭಾಸ್ಕರ ಸೇರಿದಂತೆ ದೇವಾಂಗ ಸಮುದಾಯದ ಜನರು ಭಾಗಿಯಾಗಿದ್ದರು.