ನಂದಿನಿ ಮೈಸೂರು
ಶಿವರಾತ್ರಿಶ್ವರ ನಗರದಲ್ಲಿರುವ ಅಪ್ನಾಘರ್ ಶಾಲೆಗೆ ಡೆಸ್ಕ್, ಡ್ರಮ್ ಸೆಟ್ ಮತ್ತು ಆರ್‌ಒ ಪ್ಲಾಂಟ್‌ಗಳ ವಿತರಣೆ ಮಾಡಲಾಯಿತು.
ನರಸಿಂಹರಾಜ ಕ್ಷೇತ್ರದಲ್ಲಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮ ಗೊಳಿಸಲು ಶಾಸಕರ ಅನುದಾನದಡಿಯಲ್ಲಿ ತನ್ವೀರ್ ಸೇಠ್ ರವರು ಡೆಸ್ಕ್ ಶಾಲೆಗೆ ಹಸ್ತಾಂತರಿಸಿದರು.
ನಂತರ ಶಾಲಾ ಮಕ್ಕಳ ಮೂಲ ಸೌಲಭ್ಯದಲ್ಲಿ ಒಂದಾದ
ಶೌಚಾಲಯಕ್ಕೆ ಇಂದು ಚಾಲನೆ ನೀಡಲಾಯಿತು.ನಿಜಾಮಿಯಾ ಶಾಲಾ ಸಂಕೀರ್ಣದಲ್ಲಿ ಟಾಯ್ಲೆಟ್ ಬ್ಲಾಕ್ ಅನ್ನು ಶಾಸಕ ತನ್ವೀರ್ ಸೇಠ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ,ಕಾಂಗ್ರೆಸ್ ಮುಖಂಡರಾದ ಸೈಯದ್ ಇಕ್ಬಾಲ್,ಶೌಕತ್ ಆಲಿ,ಮಂಜುನಾಥ್ ಸೇರಿದಂತೆ ಶಾಲೆಯ ಮಕ್ಕಳು,ಮುಖ್ಯೋಪಾಧ್ಯಾಯರು ಭಾಗಿಯಾಗಿದ್ದರು.