ಮೈಸೂರು:12 ಮಾರ್ಚ್ 2022
ನಂದಿನಿ ಮೈಸೂರು
ಡಿಯರ್ ಸತ್ಯ ಸಿನಿಮಾ ವಿಭಿನ್ನ ಚಿತ್ರವಾಗಿದೆ ಸಿನಿ ಪ್ರೀಯರು ಚಿತ್ರವನ್ನ ಚಿತ್ರಮಂದಿರಕ್ಕೆ ಬಂದು ನೋಡಿ ಎಂದು ನಟ ಸಂತೋಷ್ ಆರ್ಯ ತಿಳಿಸಿದ್ರು.
ಮೈಸೂರಿನ ಸಂಗಮ್ ಚಿತ್ರ ಮಂದಿರಕ್ಕೆ ಭೇಟಿ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಂದು
ಸತ್ಯ ,ಅಂಜಲಿ,ಸಲೀಂ ಸಂಗಮ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದೇವೆ. ಬೆಳಗ್ಗೆ ಮಧ್ಯಾಹ್ನ ಎರಡು ಶೋ ಪ್ರದರ್ಶನಗೊಂಡಿದೆ.ಬೆಂಗಳೂರಿನಲ್ಲಿ ರೆಸ್ಪಾನ್ಸ್ ಚನ್ನಾಗಿದೆ.ಚಿತ್ರದ ಕ್ಲೈಮ್ಯಾಕ್ಸ್ ವಿಭಿನ್ನವಾಗಿದೆ. ಡಬಲ್ ಕ್ಲೈಮ್ಯಾಕ್ಸ್ ಇದೆ.ಶಂಕರ್ ನಾಗ್ ಅವರು ಮಾಡಿರೋ ಆಕ್ಸಿಡೆಂಟ್ ಸಿನಿಮಾ ನಂತರ ಅದೇ ತರ ಸಿನಿಮಾ ಮಾಡಿದ್ದೇವೆ ಅನ್ನೋ ಭಾವನೆ ಇದೆ. ಡಿಯರ್ ಸತ್ಯಗೆ ಸಪೋರ್ಟ್ ಮಾಡಿ .ಕನ್ನಡ ಚಿತ್ರಕ್ಕೆ ಥಿಯೇಟರ್ ಸಿಗುತ್ತಿಲ್ಲ.ಬೇರೆ ಭಾಷೆ ಸಿನಿಮಾಗಳು ಬರ್ತ್ತೀರೋದರಿಂದ ಅಧ್ಬುತ ಕನ್ನಡ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ.ದಯವಿಟ್ಟು ಕನ್ನಡ ಚಿತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.ಕನ್ನಡ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದರು.
ನಂತರ ನಟಿ ಅರ್ಚನಾ ಕೊಟ್ಟಿಗೆ ಮಾತನಾಡಿ ಡಿಯರ್ ಸತ್ಯ ನನ್ನ ಮೊದಲ ಕಮರ್ಷಿಯಲ್ ಚಿತ್ರ.ಈ ಚಿತ್ರದಲ್ಲಿ ಅಂಜಲಿ ಪಾತ್ರ ಮಾಡಿದ್ದೇನೆ.
ಮಾರ್ಚ್ 10 ರಂದು ತೆರೆಕಂಡ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರು.