ಕವಿತೆಗೆ ಭಾಷೆಯ ಅಂತರವಿಲ್ಲ : ಡಾ.ಎಚ್.ಸಿ ಮಹದೇವಪ್ಪ

ನಂದಿನಿ ಮೈಸೂರು

*ಕವಿತೆಗೆ ಭಾಷೆಯ ಅಂತರವಿಲ್ಲ : ಡಾ.ಎಚ್.ಸಿ ಮಹದೇವಪ್ಪ*

ಮೈಸೂರು : ಭಾಷೆ ಎನ್ನುವುದು ಒಂದು ಸಂಪರ್ಕ ಸೇತುವೆ. ಇದನ್ನು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನೋಡಲು ಸಾಧ್ಯವಿಲ್ಲ. ಸಾಹಿತ್ಯಕ್ಕೆ ಭಾಷೆಯ ಅಂತರವಿಲ್ಲ ಸಾಹಿತ್ಯದ ಅಂಶಗಳು ಯಾವ ಭಾಷೆಯಲ್ಲಿದ್ದರೂ ಅರ್ಥ ಒಂದೇ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ ಮಹದೇವಪ್ಪ ರವರು ಎಂದು ತಿಳಿಸಿದರು.

ಇಂದು ನಗರದ ಕ್ಲಾಸಿಕ್ ಕನ್ವೆನ್ಷನಲ್ ಹಾಲ್ ನಲ್ಲಿ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉರ್ದು ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು
ಭಾಷೆ ಎನ್ನುವುದು ನಮ್ಮ ಸಾಂಸ್ಕೃತಿಕ ಹಿನ್ನೆಲೆ ಮತ್ತು ಚರಿತ್ರೆಯನ್ನು ತಿಳಿಸುವಂತಹ ಒಂದು ಸಂಪರ್ಕ ಸಾಧನ. ಕವಿತೆ ಕವಿಗೂ ವ್ಯತ್ಯಾಸವಿಲ್ಲ. ಹಾಗೆಯೇ ರವಿ ಕಾಣದನ್ನು ಕವಿ ಕಂಡ ಎನ್ನುವ ಹಾಗೆ ಕವಿಯು ಯಾವ ಭಾಷೆಯನ್ನು ಬಳಸಿದರು ಆತನ ಸಾಹಿತ್ಯದ ಭಾವನೆ ಒಂದೇ ಆಗಿರುತ್ತದೆ. ಪ್ರಸ್ತುತವಾಗಿ ಜಾತಿ ಧರ್ಮಗಳ ವಿರುದ್ಧದ ಹೋರಾಟದಲ್ಲಿ ಸಮಾಜವು ಸಿಲುಕಿದೆ. ಇದನ್ನು ಸರಿದೂಗಿಸಿಕೊಂಡು ಹೋಗಲು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಾಧ್ಯವಾಗಿದೆ. ಪರಸ್ಪರ ಬೆರೆಯುವುದು ಮಾನವೀಯ ಮೌಲ್ಯಗಳನ್ನು ತಿಳಿದುಕೊಳ್ಳಲು ಮತ್ತು ಇತಿಹಾಸವನ್ನು ತಿಳಿಯಲು ಈ ರೀತಿಯ ಕವಿ ಗೋಷ್ಠಿಗಳನ್ನು ಹೆಚ್ಚು ಆಯೋಜಿಸಬೇಕು ಎಂದರು.

ಸಾಹಿತ್ಯಕ್ಕೆ ಸಮಾಜದ ಸಮಸ್ಯೆಗಳ ಕುರಿತು ಹಾಗೂ ಸ್ನೇಹ ಸೌಹಾರ್ದ, ಬಾತೃತ್ವ ಮನೋಭಾವದ ಸಂದೇಶವನ್ನು ಇಡೀ ಸಮುದಾಯಕ್ಕೆ ಈ ಕವಿಗೋಷ್ಠಿಯ ಮೂಲಕ ತಿಳಿಯುವಂತಾಗಲಿ. ದಸರೆಯ ಉತ್ಸವ ಯಾವುದೇ ಧರ್ಮಕ್ಕೆ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಜನರಲ್ಲಿರುವ ಪ್ರತಿಭೆ, ಆಸಕ್ತಿ ಅನುಭವ, ಇವುಗಳನ್ನು ಗುರುತಿಸಿ ಬೆಳಕಿಗೆ ತರುವಂತಹ ಕೆಲಸವನ್ನು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮುದಾಯಗಳ ನಡುವೆ ಸಹೋದರತ್ವ ಮನೋಭಾವ ಸಾಂಸ್ಕೃತಿಕತೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಈ ಕವಿಗೋಷ್ಠಿ ಮಾಡಲಿ ಎಂದ ಅವರು ಘೋಷ್ಠಿಗೆ ಆಗಮಿಸಿರುವ ಎಲ್ಲಾ ಕವಿಗಳಿಗೂ ಶುಭಾಶಯ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ರವರು ಮಾತನಾಡಿ ಮೈಸೂರು ರಾಜರು ಕಲೆ ಮತ್ತು ಸಾಹಿತ್ಯಕ್ಕೆ ನೀಡುತ್ತಿದ್ದ ಕೊಡುಗೆಯನ್ನು ಈಗಿನ ದಸರಾ ಮಹೋತ್ಸವದಲ್ಲೂ ಕೂಡ ನಿರ್ವಹಿಸಿಕೊಂಡು ಬಂದಿದ್ದೇವೆ. ದಸರಾದ ಕವಿಗೋಷ್ಠಿಯಲ್ಲಿ ಉರ್ದು ಕವಿಗೋಷ್ಠಿ ವಿಭಿನ್ನ ಕಾರ್ಯಕ್ರಮವಾಗಿದೆ. ಹೆಚ್ ಸಿ ಮಹದೇವಪ್ಪ ರವರು
ಉರ್ದು ಭಾಷೆಗೆ ಉತ್ತಮ ಪ್ರಾಮುಖ್ಯತೆ ನೀಡುತ್ತಿದ್ದು ಇದರ ಕುರಿತಂತೆ ಈ ಹಿಂದೆಯೂ ಕೂಡ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಈ ಕವಿ ಗೋಷ್ಠಿಗೆ ವಿವಿಧ ರಾಜ್ಯಗಳಿಂದ ಖ್ಯಾತ ಕವಿಗಳು ಆಗಮಿಸಿದ್ದು ಈ ಗೋಷ್ಠಿಯು ವಿಶಿಷ್ಟವಾದ ಮತ್ತು ವಿನೂತನವಾದ ಕಾರ್ಯಕ್ರಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಕೆವಿ ರಾಜೇಂದ್ರ, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಡಾ.ದಾಸೇಗೌಡ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಎಸ್ ವಿಜಯ್ ಕುಮಾರಿ ಕರಿಕಲ್ , ಪ್ರೊಫೆಸರ್ ಮುಲ್ಜಾಫರ್ ಅಜಾದಿ , ಬಾಲಿವುಡ್ ನಟರಾದ ರಜಾ ಮುರಾದ್, ಕಸಪಾ ಅಧ್ಯಕ್ಷ ಮಡ್ಡಿಕೇರಿ ಗೋಪಾಲ್, ಖ್ಯಾತ ಉರ್ದು ಕವಿಗಳಾದ ಬ್ರಾರ್ ಖಾಶೀಫ್,‌ ಜಮೀಲ್ ಅಸ್ಕರ್,ಸುಹೇಲ್ ಬೇಗ್ ಸೇರಿದಂತೆ ಗಣ್ಯತೀ ಗಣ್ಯರು ಹಾಜರಿದ್ದರು.

Leave a Reply

Your email address will not be published. Required fields are marked *