ನಂದಿನಿ ಮೈಸೂರು
*ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ, ಜಂಬೂ ಸವಾರಿ ದಸರಾ ಆನೆಗಳಿಗೆ ವಿಶೇಷ ಪೂಜೆ*
*ಮಳೆಯ ನಡುವೆಯೂ ಗಜಪಡೆಗೆ ಪೂಜೆ*
*ಸೆಪ್ಟೆಂಬರ್ 25 ರಂದು ಎರಡನೇ ಹಂತದ 5 ಆನೆಗಳು ಅರಮನೆಗೆ*
*ಉಡುಪಿ ಪೇಜಾವರ ಪೀಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ವಿಶೇಷ ಪೂಜೆ*
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ ಒಂದು ಕಡೆಯಾದರೇ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಮೊದಲ ತಂಡದ 9 ಆನೆಗಳು ಹಾಗೂ ಅರಮನೆಯ 2 ಆನೆಗಳಿಗೆ ಮೈಸೂರು ಅರಣ್ಯ ಇಲಾಖೆಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಪೇಜಾವರ ಪೀಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.ಕಬ್ಬು,ಬೆಲ್ಲ,ಬಾಳೆಹಣ್ಣು, ತಿಂಡಿ ತಿನಿಸುಗಳನ್ನು ಆನೆಗೆ ನೀಡಿ ಗಜಾನನಿಗೆ ಪೂಜೆ ಸಲ್ಲಿಸಿದರು.ಪೂಜೆ ವೇಳೆ ಧಾರಾಕಾರ ಮಳೆ ಸುರಿಯಿತು.
ಡಿಸಿಎಫ್ ಸೌರಭ್ ಕುಮಾರ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿ ದಿನದಂದ್ದು ದಸರಾ 9 ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.ಪೂಜೆಯ ಸಮಯದಲ್ಲಿ ಮಳೆ ಬಂದಿದೆ ಇದು ಶುಭ ಸಂಕೇತ ಎಂದು ಭಾವಿಸಬಹುದು. ಎಲ್ಲಾ ಆನೆಗಳು ಆರೋಗ್ಯವಾಗಿದೆ. ಈಗಾಗಲೇ ಆನೆಗಳಿಗೆ ತಾಲೀಮು ಆರಂಭವಾಗಿದ್ದು ಉತ್ತಮ ಸ್ಪಂದನೆ ಕೂಡ ಇದೆ.ಸೆಪ್ಟೆಂಬರ್ 25 ರಂದು ಎರಡನೇ ತಂಡದ 5 ಆನೆಗಳು ಅರಮನೆಗೆ ಅಗಮಿಸಲಿದೆ ಇದರಲ್ಲಿ 3 ಹೊಸ ಆನೆಗಳು ಮೊದಲ ಬಾರಿಗೆ ಮೈಸೂರಿಗೆ ಬರುತ್ತಿದೆ ಎಂದು ಮಾಹಿತಿ ನೀಡಿದರು.
ಉಡುಪಿ ಪೇಜಾವರ ಪೀಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಮಾತನಾಡಿ ಈ ಬಾರಿಯ ಚಾಮುಂಡೇಶ್ವರಿ ದಸರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಬೇಕು ಪೂರ್ವಭಾವಿಯಾಗಿ ಇಂದು ಗೌರಿ ಗಣೇಶ ಚತುರ್ಥಿ ಒಂದೇ ದಿನ ಬಂದಿದ್ದು ಅರಮನೆ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.