ಆ.27 ರಂದು ದಸರಾ ಸಿಎಂ ಕಪ್ ಕ್ರೀಡಾಕೂಟ

ಪಿರಿಯಾಪಟ್ಟಣ:25 ಆಗಸ್ಟ್ 2022

ಸತೀಶ್ ಆರಾಧ್ಯ/ ನಂದಿನಿ ಮೈಸೂರು

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶ್ರೀ ಸೋಮೇಶ್ವರ ಕ್ರೀಡಾಸಂಸ್ಥೆ ಭೋಗನಹಳ್ಳಿ ಇವರ ಸಹಯೋಗದಲ್ಲಿ 2022-23 ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು ಆ.27 ರಂದು ಹರವೆ ಮಲ್ಲರಾಜಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕ್ರೀಡಾಸಂಸ್ಥೆಯ  ಸಂಘಟನಾ ಕಾರ್ಯದರ್ಶಿ ಶರತ್ ಅವರು ತಿಳಿಸಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆ.27 ರ ಬೆಳಿಗ್ಗೆ 9.30 ಗಂಟೆ ಒಳಗಾಗಿ ಕ್ರೀಡಾಕೂಟದ ಸ್ಥಳದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು, ಪುರುಷರು ಹಾಗೂ ಮಹಿಳೆಯರಿಗೆ 100, 200, 400, 800, 1500, 5000 ಮೀಟರ್ ಓಟ, ಉದ್ದ ಹಾಗು ಎತ್ತರ ಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಹಾಗು ಡಿಸ್ಕಸ್ ಎಸೆತ, ಹಾಗೂ ರಿಲೇ ಸ್ಪರ್ಧೆ ಇದೆ,  ಕ್ರೀಡಾಪಟುಗಳು ಒಂದು ತಂಡದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ, ರಾಜ್ಯದ ನಿವಾಸಿಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು, ರಕ್ಷಣಾ ಮತ್ತು ಅರೆ ರಕ್ಷಣಾ ಪಡೆಗೆ ಸೇರಿದವರು ಕ್ರೀಡೆಯಲ್ಲಿ ಭಾಗವಹಿಸುವಂತಿಲ್ಲ, ಒಂದು ತಾಲೂಕಿನಿಂದ ಸ್ಪರ್ಧಿಸಿದವರು ಮತ್ತೊಂದು ತಾಲ್ಲೂಕಿನಿಂದ ಸ್ಪರ್ಧಿಸಲು ಅವಕಾಶವಿಲ್ಲ, ಕ್ರೀಡಾಪಟುಗಳಿಗೆ ಯಾವುದೇ ಭತ್ಯೆ ಹಾಗೂ ಬಹುಮಾನ ವಿತರಿಸುವುದಿಲ್ಲ ಪ್ರಶಸ್ತಿ ಪತ್ರಗಳನ್ನು ಮಾತ್ರ ನೀಡಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *