ಮೈಸೂರು:23 ಆಗಸ್ಟ್ 2021
ನ@ದಿನಿ
ಸಮಯ ಸಂಜೆ 5:30 ರ ಹಾಸು ಪಾಸು ಚಿನ್ನಾಭರಣ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ದರೋಡೆ ಕೋರರು ಆಭರಣ ಕದ್ಯೋಯುವ ವೇಳೆ ಓರ್ವ ಅಮಾಯಕ ಯುವಕ ಬಲಿಯಾಗಿರುವ ಘಟನೆ ಮೈಸೂರಿನ ಜನರನ್ನ ಬೆಚ್ಚಿಬೀಳಿಸಿದೆ.
ವಿದ್ಯಾರಣ್ಯಪುರಂ ಅಮೃತ ಗೋಲ್ಡ್ ಪ್ಯಾಲೇಸ್‌ನಲ್ಲಿ ದರೋಡೆ ನಡೆದಿದೆ. ದರೋಡೆಕೋರರ ಗುಂಡಿನ ದಾಳಿಗೆ ದಡದಹಳ್ಳಿ ನಿವಾಸಿ ಚಂದ್ರು (೨೩) ಉಸಿರು ಚೆಲ್ಲಿದ್ದಾರೆ. ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರ ಗಾಯಗೊಂಡಿದ್ದಾರೆ.
ವಿದ್ಯಾರಣ್ಯಪುರಂ ಮುಖ್ಯರಸ್ತೆಯಲ್ಲಿರುವ ಅಮೃತ ಚಿನ್ನಾಭರಣ ಮಳಿಗೆಗೆ ಸೋಮವಾರ ಸಂಜೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದ್ದ ನಾಲ್ವರು ದರೋಡೆಕೋರರು ಮಾಲೀಕ ಧರ್ಮೇಂದ್ರನ ಕೈಕಾಲು ಕಟ್ಟಿ ಚೆನ್ನಾಗಿ ಥಳಿಸಿ ದರೋಡೆ ಮಾಡಿದ್ದಾರೆ. ಬೆಳ್ಳಿ ಬಿಟ್ಟು ಚಿನ್ನದ ಆಭರಗಳನ್ನು ದೋಚಿದ್ದಾರೆ.
ಚಿನ್ನಾಭರಣ ಅಂಗಡಿಯಿಂದ ಹೊರಬಂದು ದರೋಡೆಕೋರರು ಪರಾರಿಯಾಗಲು ಯತ್ನಿಸಿದ ವೇಳೆ ಯುವಕ ಅಡ್ಡ ಬಂದಿದ್ದಾನೆ ಆತನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನಗರ ಪೊಲೀಸರು ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಡಿಸಿಪಿ ಗೀತಾ ಪ್ರಸನ್ನ ಅವರ ನೇತೃತ್ವದಲ್ಲಿ ಪೊಲೀಸರು ಚಿನ್ನಾಭರಣ ಮಳಿಗೆ ಸುತ್ತ ತೀವ್ರ ಶೋಧ ನಡೆಸಿದರು.ಘಟನೆ ಕುರಿತು ಪೋಲಿಸ್ ಆಯುಕ್ತರಾದ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು.
ಸಿಸಿಟಿವಿ ಫೋಟೋ ಬಿಡುಗಡೆ ಮಾಡಿದ್ದು, ಆ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಯುವಕ ಚಂದ್ರು ಕಿವಿ ಚುಚ್ಚಿಸಿಕೊಂಡಿದ್ದನಂತೆ ಕಿವಿಗೆ ಒಂದು ಓಲೆ ಹಾಕೊಂಡ್ರೇ ಚನ್ನಾಗಿರುತ್ತೇ ಅಂತ ರಜಿತ್ ಜೊತೆ ಬಂದಿದ್ದಾನೆ.ದರೋಡೆ ಕೋರರು ಅಮಾಯಕ ಚಂದ್ರು ಮೇಲೆ ಗುಂಡಿನ ದಾಳಿ ನಡೆಸಿ ಓಡಿ ಹೋಗಿದ್ದಾರೆ.
ಮನೆಗೆ ಆಧಾರ ಸ್ಥಂಭವಾಗಿದ್ದ ಬದುಕಿ ಬಾಳಬೇಕಿದ್ದ ಚಂದ್ರುವನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.