ನಂದಿನಿ ಮೈಸೂರು
ಕಾಲೇಜು ಆರಂಭವಾಗಿ ಸುಮಾರು ತಿಂಗಳ ಕಳೆದಿದೆ.ಇನ್ನೇರಡು ಮೂರು ತಿಂಗಳು ಕಳೆದರೇ ಕಾಲೇಜು ಮುಗಿದೇ ಹೋಗುತ್ತೆ.ಆದರೇ ಇಲ್ಲಿರುವ ವಿದ್ಯಾರ್ಥಿಗಳು ಡಿ.30 ಕ್ಕೆ ಪದವಿ ಪೂರ್ವ ಪ್ರವೇಶ ಪಡೆಯುತ್ತಿದ್ದಾರೆ.ಅರೇ ಅವರೆಲ್ಲಾ ಇಷ್ಟು ದಿನ ಯಾಕೆ ಪ್ರವೇಶ ಪಡೆದುಕೊಳ್ಳಲಿಲ್ಲ ಅಂತ ಯೋಚಿಸುತ್ತಿದ್ದೀರಾ ?ಅದಕ್ಕೂ ಒಂದು ಕಾರಣ ಇದೆ ಪದವಿ ಪೂರ್ವ ಪ್ರವೇಶಕ್ಕೆ ಥಿಯೇಟರ್ ಸಿಕ್ಕಿದ್ದೇ ಡಿ.30 ಕ್ಕೆ.
ಹೌದು ,ನವ ನಿರ್ದೇಶಕ ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ, “ಯೋಗರಾಜ್ ಸಿನಿಮಾಸ್’ ಹಾಗೂ “ರವಿ ಶಾಮನೂರ್ ಫಿಲಂಸ್’ ಬ್ಯಾನರ್ನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ “ಪದವಿ ಪೂರ್ವ’ ಸಿನಿಮಾ ಇದೇ ಡಿ.30 ಕ್ಕೆ ರಾಜ್ಯದಾದ್ಯಂತ ತೆರೆಕಾಣುತ್ತಿದೆ.
ಹೊಸ ಕಲಾವಿದರ ದಂಡೇ ಇರುವ ಈ ಸಿನಿಮಾಗೆ ಹರಿಪ್ರಸಾದ್ ಜಯಣ್ಣ ನಿರ್ದೇಶನ ಮಾಡಿದ್ದಾರೆ.1996 ರಲ್ಲಿ ಪಿಯುಸಿ ವಿದ್ಯಾರ್ಥಿಗಳ ಗೋಲ್ಡನ್ ಲೈಫ್,ಪ್ರೀತಿ,ಪ್ರೇಮ,ಫ್ರೆಂಡ್ ಶಿಫ್ ಬಗ್ಗೆ ಸಿನಿ ಪ್ರೀಯರಿಗೆ ಎಳೆ ಎಳೆಯಾಗಿ ಬಿಚ್ಚಿಡಲು ಡಿ.30 ರಂದು ಚಿತ್ರಮಂದಿರಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ.ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ.
‘ಪದವಿ ಪೂರ್ವ’ ಚಿತ್ರಕ್ಕಾಗಿ ಅರ್ಜುನ್ ಜನ್ಯ ಸಂಯೋಜಿಸಿರುವ ರಾಗಗಳಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದು, ಮಧು ತುಂಬಕೆರೆಯ ಸಂಕಲನ ಮಾಡಿದ್ದಾರೆ.
ಈಗಾಗಲೇ ಫ್ರೆಂಡ್ಶಿಪ್ ಗೀತೆಯೊಂದನ್ನು ಬಿಡುಗಡೆ ಮಾಡಿರುವ ಪದವಿ ಪೂರ್ವ ಚಿತ್ರತಂಡ ಪ್ರೇಕ್ಷಕರ ಮನಗೆದ್ದಿದೆ.
ಮತ್ತೊಂದು ವಿಷ್ಯ ಏನೆಂದರೇ
ಪದವಿ ಪೂರ್ವ
ಯುವ ಪ್ರತಿಭೆ ಪೃಥ್ವಿ ಶಾಮನೂರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಗರಡಿ ಚಿತ್ರದಲ್ಲಿ ದರ್ಶನ್ ರವರ ಬಾಲ್ಯ ಪಾತ್ರದಲ್ಲಿ ನಟಿಸಿ ತೆರೆ ಮೇಲೆ ಬರಲು ಸಿದ್ದರಾಗಿದ್ದಾರೆ.