ವದಂತಿಗಳಿಗೆ ಕಿವಿಕೊಡದೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಮನೆ ಕದ ತಟ್ಟಿದ ಅಧಿಕಾರಿಗಳು

 

ಸರಗೂರು:23 ಸೆಪ್ಟೆಂಬರ್ 2021

ನ@ದಿನಿ

ವದಂತಿಗಳಿಗೆ ಕಿವಿಕೊಟ್ಟ ಹಾಡಿ ಜನರು ಕೋವಿಡ್ ಲಸಿಕಾ ನಿರಾಹಕರಣೆ ಮಾಡುತ್ತಿದ್ದ ಹಿನ್ನಲೆಯಲ್ಲಿ ಪ್ರತಿಯೊಬ್ಬ 18 ವರ್ಷ ಮೇಲ್ಪಟ್ಟ ನಾಗರಿಕರು ತಪ್ಪದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು, ಯಾವುದೇ ವದಂತಿಗಳಿಗೆ ಕಿವಿಕೊಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನೆ ಮನೆಗಳ ಹತ್ತಿರ ಅಧಿಕಾರಿಗಳು ಭೇಟಿ ನೀಡಿ ಮನಹೊಲಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಬಿ. ಮಟಕೆರೆ ವ್ಯಾಪ್ತಿಯ ಕೇಬ್ಬೆಪುರ A. ಕೇಬ್ಬೆಪುರ B. ಮತ್ತು ನಾಡಾಡಿ ಹಾಡಿ ಗ್ರಾಮಗಳಲ್ಲಿ ನಡೆಯುವ , *ಲಸಿಕಾ ಮೇಳ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೆಲುವರಾಜು,ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ರವಿಕುಮಾರ್ ರವರು ಗ್ರಾಮಗಳಲ್ಲಿ ಭೇಟಿ ನೀಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸ್ಥಳದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಲಸಿಕೆ ಹಾಕಿಸಿಕೊಳ್ಳದೆ ಬಾಕಿ ಉಳಿದಿರುವ ಸಾರ್ವಜನಿಕರಿಗೆ ಲಸಿಕೆ ಹಾಕಿಸಿ ಇತರರಿಗೆ ಮಾದರಿಯಾಗಿ ಮತ್ತೊಬ್ಬರು ಧೈರ್ಯವಾಗಿ ಕೋವಿಡ್ ಲಸಿಕೆಯನ್ನು ಪಡೆಯುವಂತೆ ಸಾರ್ವಜನಿಕರಿಗೆ ತಿಳಿಸಿದ್ದರು.

ತಪ್ಪದೆ ಮಾಸ್ಕ್ ಧರಿಸಬೇಕು ಎಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಖಂಡರಿಗೆ ತಮ್ಮ ತಮ್ಮ ಗ್ರಾಮ ಹಾಗೂ ಹಾಡಿಗಳಲ್ಲಿ ಯಾವುದೇ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೋವಿಡ್ ಕಾರ್ಯ ಪಡೆಯ ಸದ್ಯಸರಾದ ಉಮೇಶ್, ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಧಿಕಾರಿಗಳಾದ ಡಾ. ಚಂದ್ರಶೇಖರ, PHCO ಅನಿತಾ ರವರು,ಅರೋಗ್ಯ ಇಲಾಖೆಯ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಿವೇಕಾನಂದ ಆಸ್ಪತ್ರೆಯ ಸಿಬ್ಬಂದಿಗಳು ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *