ಬಂದಿದ್ದವರನ್ನ ಮತ್ತೆ ಬರಬೇಡಿ ಎಂದು 20 ಖೈದಿಗಳಿಗೆ ಬಿಳ್ಕೋಡುಗೆ ನೀಡಿದ ಮೈಸೂರು ಕೇಂದ್ರ ಕಾರಾಗೃಹ

ಮೈಸೂರು :15 ಆಗಸ್ಟ್ 2022

ನಂದಿನಿ ಮೈಸೂರು

ಯಾವುದೇ ಗೃಹ ಆಗಲಿ ಬಂದವರನ್ನ ಬನ್ನಿ ಎಂದು ಸ್ವಾಗತಿಸಿ ಸತ್ಕಾರ ಮಾಡುವುದುಂಟು. ಮತ್ತೆ ಬನ್ನಿ ಎಂದು ಹೇಳಿ ಕಳುಹಿಸಿಕೊಡ್ತೇವೆ ಆದರೇ ಇಲ್ಲಿಗೆ ಬಂದವರಿಗೆ ಯಾಕಾದರೂ ಇಲ್ಲಿ ಬಂದಿದ್ದೀರಾ ಮತ್ತೆ ಈ ಕಡೆ ಬರಬೇಡಿ ಎಂದು ಕಿವಿ ಮಾತು ಹೇಳಿಕಳುಹಿಸುತ್ತಾರೆ.ಯಾವುದು ಆ ಗೃಹ ಯಾವುದು ಅಂತೀರಾ ನಾವು ಹೇಳೋದಲ್ಲ ನೀವೇ ನೋಡಿ ಬಿಡಿ.

ಹೌದು
75 ನೇ ಸ್ವಾತಂತ್ರ್ಯ ದಿನ ಅಮೃತ ಮಹೋತ್ಸವದಂದು ಅಮೃತ ಕುಡಿದಷ್ಟು ಸಂತೋಷದಲ್ಲಿ ಬಾಗಿಲು ತೆರೆಯುತ್ತಿದ್ದಂತೆ
ಗಂಟು ಮೂಟೆ ಕಟ್ಟಿಕೊಂಡು ಹೊರಬರುತ್ತಿರುವ ಇವರೆಲ್ಲ ಅಲ್ಪಾವಧಿ ಶಿಕ್ಷೆ ಅನುಭವಿಸಿ ಹೊರಗೆ ಬಂದ ಸಾಜಾ ಖೈದಿಗಳು.

೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ದೇಶಾದ್ಯಂತ ಇಂದು ಅದ್ದೂರಿ ಸ್ವಾತಂತ್ರ್ಯೋತ್ಸವ ಜರುಗುತ್ತಿದೆ. ಈ ಸುಸಂದರ್ಭದಲ್ಲಿ ಸನ್ನಡತೆಯುಳ್ಳ ಅಲ್ಪಾವಧಿ ಸಜಾ ಬಂಧಿವಾಸಿಗಳಿಗೆ ಮೈಸೂರು ಕಾರಾಗೃಹದಲ್ಲಿ ಬಿಡುಗಡೆಯ ಭಾಗ್ಯ ದೊರೆಯಿತು.

ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸನ್ನಡೆತೆ ಆಧಾರದ ಮೇಲೆ ೨೦ ಜನ ಖೈದಿಗಳನ್ನು ಬಿಡುಗಡೆ ಮಾಡಿ ಪ್ರಮಾಣ ಪತ್ರ ನೀಡಿ ಮತ್ತೆ ಇಂತಹ ತಪ್ಪನ್ನು ಮಾಡದಿರೀ ಮತ್ತೆ ಇಲ್ಲಿಗೆ ಯಾರು ಬರಬೇಡಿ ಎಂದು ಅಧಿಕಾರಿಗಳು ಕಿವಿ ಮಾತು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದೇವರಾಜ್ ಭೂತೆ ಮಾತನಾಡಿ ಪ್ರತಿ ವರ್ಷದಂತೆ ಕೇಂದ್ರ ಕಾರಾಗೃಹಗಳಲ್ಲಿ ಸನ್ನಡತೆ ಆಧಾರದಲ್ಲಿ ಖೈದಿಗಳನ್ನು ಬಿಡುಗಡೆ ಮಾಡುವ ಪದ್ದತಿ ಇತ್ತು.ಆದರೇ ಈ ಬಾರಿ ಅಲ್ಪಾವಧಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ.ಇಲ್ಲಿಂದ ಹೋದವರು ಮತ್ತೆ ಯಾವುದೇ ಅಪರಾಧ ಮಾಡಬೇಡಿ ಉತ್ತಮ ಬದುಕು ಕಟ್ಟಿಕೊಳ್ಳಿ,ಉತ್ತಮ ನಾಗರೀಕರಾಗಿ ಜೀವನ ನಡೆಸಿ ಎಂದು ಸಲಹೆ ನೀಡಿದರು.

ವಿವಿಧ ಅಪರಾಧ ಪ್ರಕರಣಗಳ ಹಿನ್ನೆಲೆ ಜೈಲು ಶಿಕ್ಷೆಗೆ ಗುರಿಯಾಗಿದ್ದ 20 ಜನ ಖೈದಿಗಳು ತಪ್ಪಿಗೆ ಪಶ್ಚಾತ್ತಾಪ ಪಟ್ಟು ಸನ್ನಡತೆಯಿಂದ ಇದ್ದರು.ಸರ್ಕಾರದ ನಿರ್ದೇಶನದ ಮೇರೆಗೆ ಸುಮಾರು ೨೦ ಮಂದಿ ಸಜಾ ಖೈದಿಗಳು ಬಿಡುಗಡೆಯಾಗಿದ್ದಾರೆ.ರಾಜ್ಯದಲ್ಲಿ ಇಂದು ಒಟ್ಟು 81 ಖೈದಿಗಳು‌ ಬಿಡುಗಡೆಯಾಗಿದ್ದಾರೆ.ಇವರೆಲ್ಲ
ಒಂದು ಅರ್ಥ ಪೂರ್ಣ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾದ್ದಾರೆ ಎಂದು ಕಾರಾಗೃಹದ ಅಧೀಕ್ಷಕಿಯಾದ ದಿವ್ಯಶ್ರೀ ಸಾಜಾ ಖೈದಿಗಳಿಗೆ ಬಿಳ್ಕೋಡುಗೆ ನೀಡಿದರು.

ಬಿಡುಗಡೆಯಾದ ಕೊಡಗು ಮೂಲದ ಹರೀಶ್ ಆತುರದಿಂದ ಕೋಪದಿಂದ ಮಾಡಿದ ತಪ್ಪಿಗೆ ಜೈಲು ಸೇರಿದೆ.ನಾನು ಮಾಡಿದ ತಪ್ಪಿನ ಅರಿವಾಗಿದೆ.ಸಮಾಜದಲ್ಲಿ ಯಾರು ಕಾನೂನು ಉಲ್ಲಂಘನೆಯಾಗುವಂತಹ ತಪ್ಪು ಮಾಡಿ ಜೈಲು ಸೇರಬೇಡಿ,ನಿಮ್ಮ ಕೋಪದ ಕೈಗೆ ಬುದ್ದಿ ಕೊಡಬೇಡಿ,ನಿಮ್ಮನ್ನೇ ನಂಬಿ ಬದುಕುತ್ತಿರುವ ನಿಮ್ಮ ತಂದೆ ತಾಯಿಗಳಿಗೆ, ನಿಮ್ಮ ಹೆಂಡತಿ ಮಕ್ಕಳಿಗೆ ದ್ರೋಹ ಮಾಡಬೇಡಿ ನಾನು ಮಾಡಿದ ತಪ್ಪುಗಳನ್ನು ಬೇರೆ ಯಾರು ಮಾಡಬೇಡಿ ಎಂದು ಇನ್ನು ಮುಂದೆ ಜನರಿಗೆ ಹೇಳುತ್ತೇನೆ.ಒಳ್ಳೆಯ ಮನುಷ್ಯನಾಗಿ ನಾಲ್ಕಾರು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ ಎಂದು ಕಾರಾಗೃಹದ ಅಧೀಕ್ಷಕಿಯಾದ ದಿವ್ಯಶ್ರೀ ರವರಿಗೆ ನಮಸ್ಕರಿಸಿ ತೆರಳುತ್ತಿದ್ದ ದೃಶ್ಯ ಕಂಡುಬಂತು.

Leave a Reply

Your email address will not be published. Required fields are marked *