ಮೈಸೂರು:19 ಫೆಬ್ರವರಿ 2022
ನಂದಿನಿ ಮೈಸೂರು
ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪನವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೆವೆಂಬ ಹೇಳಿಕೆ ನೀಡಿರುವುದು ಖಂಡನೀಯ ಹಾಗೂ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರ ಕೆ.ಮಹೇಶ್ ತಿಳಿಸಿದರು.
ಹಿಂಧೂತ್ವವನ್ನು ಪ್ರತಿಪಾದಿಸುವ ಬಿಜೆಪಿ ಸಹ ಹಿಂದುತ್ವದ ‘ ವಸುದೈವ ಕುಟುಂಬಕಂ’ ಎಂಬ ನಮ್ಮ ದೇಶದ ತತ್ವವನ್ನು ಅರಿಯಬೇಕಿದೆ. ನಮ್ಮ ದೇಶ ವಿಶ್ವ ಮನ್ನಣೆಗಳಿಸಿರುವುದೇ ಬಹುತ್ವದ ಆಧಾರದ ಮೇಲೆ ಹೀಗಾಗಿ ಬಹುತ್ವದ ವೈವಿದ್ಯತೆಯಲ್ಲಿ ಏಕತೆಯೇ ನಮ್ಮ ದೇಶದ ಸಂವಿಧಾನದ ಬಹುಮುಖ್ಯ ಆಶಯವಾಗಿದೆ. ಹೀಗಾಗಿ ಅಂತಹ ಸಂವಿಧಾನದ ಮೂಲಕವೇ ಆಯ್ಕೆಯಾಗಿ ಸಚಿವ ಸ್ಥಾನ ಅಲಂಕರಿಸಿ ಇಂತಹ ಹೇಳಿಕೆ ನೀಡಿರುವುದು ಆಸ್ಥಾನಕ್ಕೂ ಚ್ಯುತಿಯುಂಟು ಮಾಡಿದ್ದಾರೆ. ಹೀಗಾಗಿ ಸಂವಿಧಾನ ಹಾಗೂ ಸಚಿವ ಸ್ಥಾನದ ಗೌರವ ಕಾಪಾಡುವ ನಿಟ್ಟಿನಲ್ಲಿಯೂ ಕೂಡಲೇ ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಚುನಾವಣೆ ಮೂಲಕ ವೇ ಜನತೆ ನಿಮ್ಮ ಸಂವಿಧಾನ ವಿರೋಧಿ ನಡೆಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಈ ಮೂಲಕ ಎಚ್ಚರಿಕೆ ನೀಡಬಯಸುತ್ತೇನೆ ಎಂದರು.