ಕಾಂಗ್ರೆಸ್ ಪಕ್ಷ 2023 ಕ್ಕೆ ಅಧಿಕಾರಕ್ಕೇರುವುದು ನಿಶ್ಚಿತ :ಎಂ ಕೆ ಸೋಮಶೇಖರ್

ಮೈಸೂರು:18 ಆಗಸ್ಟ್ 2021

ನ@ದಿನಿ

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ನ 500 ಕ್ಕೂಹೆಚ್ಚು ಯುವಕರು,ಮಹಿಳೆಯರು ಯುವ ಮುಖಂಡರಾದ ಚೇತನ್ (ಚೇತು),ಪುಟ್ಟು,ಮಾದಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

2 ವರ್ಷಗಳ ಬಿಜೆಪಿ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಸಿದ್ದರಾಮಯ್ಯನವರು, ಡಿ ಕೆ ಶಿವಕುಮಾರ್ ರವರ ಕಾರ್ಯದಕ್ಷತೆ,ಅಧಿಕಾರವಧಿಯಲ್ಲಿ ಕೈಗೊಂಡ ಕಾರ್ಯಕ್ರಮಗಳು,ರೂಪಿಸಿದ ಯೋಜನೆಗಳನ್ನು ಮೆಚ್ಚಿ ಪಕ್ಷಕ್ಕೆ ಕೈ ಹಿಡಿದಿದ್ದಾರೆ‌.

ಸ್ಥಳೀಯ ನಾಯಕರಾದ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ನಾಯಕತ್ವದಲ್ಲಿ ಯುವ ಮುಖಂಡ ಚೇತನ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.

ಈ ಸಂಧರ್ಭದಲ್ಲಿ ,ನಗರಾಧ್ಯಕ್ಷರಾದ ಆರ್ ಮೂರ್ತಿ,ಉಪಾಧ್ಯಕ್ಷರಾದ ಡಾ.ರಾಜಾರಾಂ,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಮಾಜಿ ಮಹಾಪೌರರಾದ ಆರೀಫ್ ಉಸೇನ್,ಕೆಪಿಸಿಸಿ ಸದಸ್ಯರಾದ ವೀಣಾ,ಭಾಸ್ಕರ್ ಗೌಡ,ಬ್ಲಾಕ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್,ಶ್ರೀಧರ್,ಕಾಂಗ್ರೆಸ್ ಮುಖಂಡರಾದ ಗೋಪಿನಾಥ್,ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷರಾದ ವಿನಯ್ ಕುಮಾರ್ ಜೆ,ಕಾರ್ಯದರ್ಶಿ ಡೈರಿ ವೆಂಕಟೇಶ್,ಐಟಿ ಸೆಲ್ ನಿರಾಲ್ ಶಾ,ಸುನೀಲ್ ನಾರಯಣ್,ಲೋಕೇಶ್ ಕುಮಾರ್ ಮಾದಾಪುರ,ರಂಜನ್,ಕಾಡನಹಳ್ಳಿ ಸ್ವಾಮಿ,ಪುನೀತ್ ಮಾರುತಿ,ಸೇವಾದಳ ಗಿರೀಶ್,ರೋಹಿತ್,ನಾಸೀರ್,ಕೆ ಬ್ಲಾಕ್ ಪಾಪು(ಸುರೇಶ್),ಲೀಲಾಪಂಪಾವತಿ,ಗುಣಶೇಖರ್,ಮಹೇಂದ್ರ,ಭವ್ಯ ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ಇಂದು ಇಲ್ಲಿ ಸೇರಿರುವ ಯುವಕರೆಲ್ಲರು ಕಾಂಗ್ರೆಸ್ ಸೇನಾನಿಗಳಾಗಿ ಬಂದಿದ್ದೀರಿ.ಅಂದು ಕಾಂಗ್ರೆಸ್ ಸ್ವಾತಾಂತ್ರ್ಯದ ಹೋರಾಟದಲ್ಲಿ ಯುವಪಡೆಯನ್ನು ಹೊಂದಿತ್ತು.ಆ ದಿಸೆಯಲ್ಲಿ ತಾವೆಲ್ಲರೂ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಮುಕ್ತ ಮನಸ್ಸಿನಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದೀರಿ.ಎಲ್ಲರೂ ಜಾತಿ ಧರ್ಮಗಳನ್ನು ಮರೆತು,ದ್ವೇಷ ಅಸೂಯೆಗಳನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಇತಿಹಾಸದುದ್ದಕ್ಕೂ ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗೋಣಾ.ಈ ದೇಶದಲ್ಲಿ 12% ಸಾಕ್ಷಾರಾತೆ ಇತ್ತು ಇಂದು 75% ಸಾಕ್ಷರತೆ ಬೆಳೆದು ನಿಂತಿದೆ ಅಂದರೆ ಕಾಂಗ್ರೆಸ್ ರೂಪಿಸಿದ ನೂರಾರು ಶಿಕ್ಷಣ ಸಂಸ್ಥೆಗಳು,ಐಐಟಿಗಳು,ತಂತ್ರಜ್ಞಾನ ಸಂಸ್ಥೆಗಳು ಮೂಲ ಕಾರಣ.ಇವತ್ತು ದಿನಬಳಕೆ,ಗೃಹ ಬಳಕೆ ವಸ್ತುಗಳು,ಪೆಟ್ರೋಲ್,ಡೀಸೇಲ್ ಬೆಲೆಗಳು ಗಗನ ಮುಟ್ಟುತ್ತಿವೆ.ಬಿಜೆಪಿ ಸರ್ಕಾರ ಕಣ್ಣುಮುಚ್ಚಿ ಕೂತಿವೆ.ಲಕ್ಷಾಂತರ ಜನ ವಿದ್ಯಾವಂತವರನ್ನು ಉದ್ಯೋಗಗಳನ್ನು ನೀಡದೆ ಬೀದಿಗೆ ತಳ್ಳಿವೆ.ಇನ್ನೂ ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲೂ ಅಸಹಾಯಕತೆ ತೋರಿ ಜನರನ್ನು ದಿಕ್ಕು ತಪ್ಪಿಸುತ್ತಿವೆ ಬಿಜೆಪಿ ಸರ್ಕಾರಗಳು.ಇಂತಹ ನೂರಾರು ಸಮಸ್ಯೆಗಳನ್ನು ಬಡ,ಮಧ್ಯಮ ವರ್ಗದ ಜನ ಅನುಭವಿಸುತ್ತಿದ್ದಾರೆ.ಆ ದೃಷ್ಠಿಯಲ್ಲಿ ಮತ್ತೊಮ್ಮೆ ಸ್ವಾಭಿಮಾನವಾಗಿ ಬದುಕಬೇಕಾದ ಸ್ವಾತಂತ್ರ್ಯಕ್ಕಾಗಿ ಹೋರಾಡ ಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.ಆ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಈ ರಾಜ್ಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣಾ.2023 ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವುದು ಶತಸಿದ್ದ.ನಿರಂತರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸೋಣ.ಇಂದು ಶ್ರಮವಹಿಸಿ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೆ ಆದರೆ ಭವಿಷ್ಯದಲ್ಲಿ ಎತ್ತರದ ಸ್ಥಾನಕ್ಕೆ ಬೆಳೆಯಬಹುದು,ಅಧಿಕಾರ ಅದಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ತಿಳಿಸಿದರು.ಒಳ್ಳೆಯ ಆಲೋಚನೆಗಳು,ಸೇವಾ ಮನೋಭಾವ ಎಲ್ಲವನ್ನು ಮೈಗೂಡಿಸಿಕೊಂಡು ಜನರ ಸೇವೆಯಲ್ಲಿ ತೊಡಗಿಸಿಕೊಂಡು ಸಂಘಟನೆಯ ಮೂಲಕ ತಾವೆಲ್ಲರೂ ಪಕ್ಷದ ಆಸ್ತಿಗಳಾಗಿ ಎಂದು ಕಿವಿ ಮಾತು ತಿಳಿಸಿದರು.

Leave a Reply

Your email address will not be published. Required fields are marked *