ನಂದಿನಿ ಮೈಸೂರು
*ಮಾನಸ ಗಂಗೋತ್ರಿ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಾದ*
ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ
ನಗರದ ಜೆ ಪಿ ಪ್ಯಾಲೇಸ್ ನಲ್ಲಿ ಸುಮಾರು
200 ಕ್ಕೂ ಹೆಚ್ಚು ಮಾನಸ ಗಂಗೋತ್ರಿಯ ಆಯ್ದ ವಿದ್ಯಾರ್ಥಿ ಸಮೂಹದ ಜತೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡು 4 ತಿಂಗಳು ಬರುತ್ತಿದೆ ನಿಮ್ಮೆಲ್ಲರ ಸಹಕಾರ ಹಾಗೂ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಪರ ಪ್ರಚಾರ ಮಾಡಿ ಸುಮಾರು 135 ಸ್ಥಾನ ಕೊಟ್ಟು ಸುಭದ್ರ ಸರ್ಕಾರ ನೀಡಿದ್ದೀರಾ ಈ ಚುನಾವಣೆಯಲ್ಲಿ ಕೋಮುಶಕ್ತಿ ಹಾಗೂ ಪ್ರಜಾಪ್ರಭುತ್ವ ನಡುವೆ ಚುನಾವಣೆ ನಡೆದು ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಿದೆ
ಕೋಮುವಾದ ಈ ದೇಶಕ್ಕೆ ಯೋಗ್ಯವಾಗಿಲ್ಲ ಇದು ಸಂವಿಧಾನಕ್ಕೆ ವಿರುದ್ಧ ವಾಗಿದೆ ಸಂವಿಧಾನ ಆಶಯಗಳು ಸಹಿಷ್ಣುತೆ ಸಹಬಾಳ್ವೆ ಜೊತೆ ಸಮಾನತೆ ಜ್ಯಾತ್ಯಾತೀತ ತತ್ವ ಸಿದ್ದಂತ ಒಳಗೊಂಡಿದೆ ಇದಕ್ಕೆ ವಿರುದ್ಧವಾಗಿ ಇರುವವರು ಕೋಮುವಾದ ಶಕ್ತಿಗಳು ಸಂವಿಧಾನ ಉಳಿದರೆ ಮಾತ್ರ ನಾವು ಹಾಗೂ ದೇಶ ಉಳಿಯಲು ಸಾಧ್ಯ ಅಗಾಗಿ ಸಂವಿಧಾನ ಬದ್ಧರಾಗಿ ಇರುವವರೊಂದಿಗೆ ಅಧಿಕಾರ ಸಿಕ್ಕರೆ ದೇಶ ಅಭಿವೃದ್ಧಿ ಹೊಂದುತ್ತದೆ
ನಮ್ಮ ಸರ್ಕಾರಈ ವರ್ಷದಿಂದಲೇ 5 ಗ್ಯಾರಂಟಿಗಳನ್ನು ಅನುಷ್ಠಾನ ಗೊಳಿಸುತ್ತಿದೆ ಇದರಿಂದ ಎಲ್ಲ ಸಮುದಾಯದ ಬಡಜನರಿಗೆ ಅನುಕೂಲವಾಗಲಿದೆ
ಮಾನಸ ಗಂಗೋತ್ರಿ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಗಳು ಹಾಗೂ ಸಾಮಾಜದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಈ ಎಲ್ಲ ಸಮಸ್ಯೆ ಗಳಿಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಮಾನಸ ಗಂಗೋತ್ರಿ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿ ತಮ್ಮ ವಿಶ್ವವಿದ್ಯಾಲಯದ ಸಮಸ್ಯೆ ಗಳು ಹಾಗೂ ಮುಂದಿನ ಸಮಾಜದ ಬೆಳವಣಿ ಬಗ್ಗೆ ಮುಕ್ತ ಚರ್ಚೆ ನಡೆಸಿದರು ಹಾಗೂ ವಿದ್ಯಾರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾನಸ ಗಂಗೋತ್ರಿ ಯುವ ಮುಖಂಡ ಮಹೇಶ್ ಸೋಸಲೆ, ಸಚಿವ ಕೆ ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ರವಿಶಂಕರ್, ಜಿ. ಡಿ ಹರೀಶ್ ಗೌಡ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಉಪಸ್ಥಿತರಿದ್ದರು.