ಮೈಸೂರು:3 ಫೆಬ್ರವರಿ 2022
ನಂದಿನಿ ಮೈಸೂರು
ಅಲ್ಪಸಂಖ್ಯಾತರ ಧ್ವನಿಯಾಗಿರುವ ಸಿಎಂ ಇಬ್ರಾಹಿಂ ರವರು ಕಾಂಗ್ರೆಸ್ ನಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.ಫೆ.14 ರಂದು ತಮ್ಮ ಅಂತಿಮ ನಿರ್ಧಾರ ತಿಳಿಸಲಿದ್ದಾರೆ.ಅವರ ಹಿಂದೆ ನಾವು ಇರುತ್ತೇವೆ ಎಂದು ಡಿಸಿಸಿ ಜನರಲ್ ಸೆಕ್ರೇಟ್ರಿ ಎ ಜೆ ಮುತಾಹಿರ್ ಪಾಷ ತಿಳಿಸಿದರು.
ಸಮಾಜ ಸೇವಕರಾದ ಶಾಹಿದ್ ರವರ ನೇತೃತ್ವದಲ್ಲಿ
ಮೈಸೂರಿಗೆ ಆಗಮಿಸಿದ ಸಿಎಂ ಇಬ್ರಾಹಿಂ ರವರನ್ನ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಇಬ್ರಾಹಿಂ ರವರು ಹಿರಿಯರು ಅಲ್ಪಸಂಖ್ಯಾತರು ಆದರೂ ಕಾಂಗ್ರೆಸ್ ಪಕ್ಷ ಒಂದು ಸ್ಥಾನ ನೀಡಲಿಲ್ಲ.ಪಕ್ಷದಲ್ಲಿ
ಕೆಲವು ಕಾರಣಗಳಿವೆ.ಆದ್ದರಿಂದ ಇಬ್ರಾಹಿಂ ರವರು ಪಕ್ಷ ಬಿಡುವ ನಿರ್ಧಾರ ಮಾಡಿದ್ದಾರೆ.ಅವರ ಮುಂದಿನ ನಡೆಗೆ ನಾವು ಹೆಜ್ಜೆ ಹಾಕಲಿದ್ದೇವೆ ಎಂದರು.