ಮಹಿಳಾ ಕಾಲೇಜಿಗೆ ವಾಟರ್ ಫ್ಯೂರಿಫೈ ಕೊಡುಗೆಯಾಗಿ ನೀಡಿದ ಸುಜೀವ್ ಸಂಸ್ಥೆ

ಮೈಸೂರು:5 ಫೆಬ್ರವರಿ 2022

ನಂದಿನಿ ಮೈಸೂರು

ಮಹಿಳಾ ಕಾಲೇಜಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರಿನ ವಾಟರ್ ಫ್ಯೂರಿಫೈ
ಅನ್ನು ಸುಜೀವ್ ಸಂಸ್ಥೆ ಕೊಡುಗೆಯಾಗಿ ನೀಡಿದೆ.

ಮೈಸೂರಿನ ಅಗ್ರಹಾರದ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಆಗಮಿಸಿದ ಸುಜೀವ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಜಾರಾಂ ರವರು ವಿದ್ಯಾರ್ಥಿನಿಯರಿಗೆ ಶುದ್ಧ ಕುಡಿಯುವ ನೀರಿನ 200 ಲೀ. ವ್ಯವಸ್ಥೆಯುಳ್ಳ ವಾಟರ್ ಫ್ಯೂರಿಫೈ ಅನ್ನು ಉದ್ಘಾಟಿಸಿ ಕಾಲೇಜಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಅವರು
ಕೋವಿಡ್ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಸೋಮಶೇಖರ್ ರವರು
ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ರು.ಅದರಂತೆ ಸುಜೀವ್ ಸಂಸ್ಥೆಯಿಂದ 30 ಸಾವಿರ ಬೆಲೆ ಬಾಳುವ ವಾಟರ್ ಫ್ಯಾರಿಫೈ ಕೊಡುಗೆಯಾಗಿ ಮಾಡಿದ್ದೇವೆ. ನನ್ನದೊಂದು ಮನವಿ ಇದೆ.ದುಂದು ವೆಚ್ಚ ಮಾಡಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳುವುದರ ಬದಲು ಕಷ್ಟದಲ್ಲಿದ್ದವರಿಗೆ, ಶಾಲಾ ಕಾಲೇಜುಗಳಿಗೆ ಅಗತ್ಯವಿರುವ ಸೌಲಭ್ಯ ಒದಗಿಸಿದರೇ ಅದರಲ್ಲಿ ಸಿಗುವ ಖುಷಿಯೇ ಬೇರೆ.ಆದಷ್ಟು ಎಲ್ಲರೂ ಸಹಾಯ ಮಾಡಲು ಮುಂದಾಗಿ ಎಂದು ಮನವಿ ಮಾಡಿದರು.

ಮಕ್ಕಳ ಕಂಪ್ಯೂಟರ್ ತರಬೇತಿಗೂ ಸಂಸ್ಥೆಯಿಂದ ಯಾವ ರೀತಿ ಸಹಾಯಬೇಕೋ ಅದನ್ನ ಮಾಡಿಕೊಡುವುದಾಗಿ ರಾಜಾರಾಂ ಭರವಸೆ ನೀಡಿದರು.

-ರಾಜಾರಾಂ

ಕಾರ್ಯಕ್ರಮದಲ್ಲಿ ಸುನೀಲ್,ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್,ಪ್ರೌಢಶಾಲಾ ಮುಖ್ಯಸ್ಥ ಸುಬ್ಬರಾವ್, ಉಪನ್ಯಾಸಕಿ ಇಂದ್ರಾ ದೇವಿ,ಶಿಕ್ಷಕ ಹರ್ಷ, ಶಿಕ್ಷಕ ವೃಂದ ಹಾಗೂ ಮಕ್ಕಳು ಹಾಜರಿದ್ದರು.

Leave a Reply

Your email address will not be published. Required fields are marked *