ಮೈಸೂರು : 22 ಜೂನ್ 2022
ನಂದಿನಿ ಮೈಸೂರು
ಮೈಸೂರು ಜಿಲ್ಲೆಯ ನಂಜನಗೂಡಿನ ತಾಂಡ್ಯದಲ್ಲಿ ಈ ಕ್ಲೀನ್ ಫಿಕ್ಸ್ ಇಂಡಿಯಾ ಉತ್ಪಾದನಾ ಘಟಕ ಉದ್ಘಾಟನೆಗೊಂಡಿತು.
ಭಾರತದಲ್ಲಿನ ಸ್ವಿಟ್ಟರ್‌ಲೆಂಡ್‌ನ ರಾಯಭಾರಿ ಡಾ.ರಾಲ್ಡ್ ಹೆಕ್ಟರ್ ಹಾಗೂ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಟೇಪ್ ಕತ್ತರಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಯದುವೀರ್ ರವರು ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ
ರೊಬೋಟಿಕ್ ನೈರ್ಮಲ್ಯ ಮತ್ತು ಸ್ವಚ್ಛತಾ ಯಂತ್ರಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಕ್ಲೀನ್‌ಫಿಕ್ಸ್ ರೀನಿಗಂಗ್ ಸಿಸ್ಟಮ್ಸ್ ಎಜಿ ಮೈಸೂರು ಮೂಲದ ಸ್ವಚ್ಛತಾ ಪರಿಹಾರಗಳ ಉತ್ಪಾದನಾ ಸಂಸ್ಥೆಯಾಗಿರುವ ಶೆವರನ್ ಲ್ಯಾಬರೇಟರೀಸ್ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇದರಂತೆ ಮೈಸೂರಿನಲ್ಲಿ ಕ್ಲೀನ್ ಫಿಕ್ಸ್ ಶೆವರನ್ ಉತ್ಪಾದನಾ ಘಟಕವನ್ನು ಆರಂಭಿಸಿದೆ ಈ ಘಟಕದಲ್ಲಿ ಹೈ-ಎಂಡ್ ಕ್ಲೀನಿಂಗ್ ಮಶಿನ್‌ಗಳು ಮತ್ತು ಇನ್ನಿತರ ಪರಿಕರಗಳನ್ನು ಉತ್ಪಾದನೆ ಮಾಡಲಿದೆ.
ಸ್ವಿಸ್ ತಂತ್ರಜ್ಞಾನವನ್ನು ಬಳಸಿಕೊಂಡು ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತದೆ.ಉತ್ತಮ ಯಂತ್ರಗಳು ಕಾರ್ಯನಿರ್ವಹಿಸಲಿವೆ.ಇಂತಹ ಕೈಗಾರಿಕೆಗಳು ಹೆಚ್ಚು ಹೆಚ್ಚು ನಿರ್ಮಾಣವಾದರೇ ಯುವಕ ಯುವತಿಯರಿಗೆ ಉದ್ಯೋಗ ಸಿಗಲಿದೆ.ಈ ಸಂಸ್ಥೆಗೆ ಶುಭಹಾರೈಸುತ್ತೇನೆ ಎಂದರು.