ಹುಣಸೂರು:13 ಜೂನ್ 2022
ನಂದಿನಿ ಮೈಸೂರು
“ನಕಲಿ ಚಿನ್ನದ ಕಾಸಿನ ಸರ ಕೊಟ್ಟು ಅಸಲಿ ಚಿನ್ನ & ದುಡ್ಡು ಎಗರಿಸಿದ್ದ ಖಧೀಮರ ಬಂಧನ”
ಹುಣಸೂರು ಪಟ್ಟಣ ಪೋಲೀಸರ ಕಾರ್ಯಾಚರಣೆ.
ದಿನಾಂಕ:12/05/2022 ರಂದು ಬೆಳಗ್ಗೆ 11:30 ಗಂಟೆ ಸಮಯದಲ್ಲಿ ಹುಣಸೂರು ತಾಲ್ಲೋಕಿನ ತಿಪ್ಪಲಾಪುರ ಗ್ರಾಮದ ನೊಂದ ಮಹಿಳೆಯೊಬ್ಬರು ಪಟ್ಟಣದ ಬಜಾರ್ ರಸ್ತೆಯಲ್ಲಿ ಮಾರ್ಕೆಟ್ ಗೆ ಹೋಗುತ್ತಿದ್ದಾಗ ಎದುರುಗೊಂಡ ಒಂದು ಹೆಂಗಸು ಹಾಗೂ ಒಬ್ಬ ಗಂಡಸು (ಇಬ್ಬರು ಆರೋಪಿಗಳು) ನೊಂದ ಮಹಿಳೆಯನ್ನು ಬಜಾರ್ ರಸ್ತೆಯ ಪಕ್ಕದದಲ್ಲಿದ್ದ ಖಾಲಿ ಜಾಗಕ್ಕೆ ಕರೆದುಕೊಂಡು ಹೋಗಿ ತಮ್ಮ ಬಳಿಯಿದ್ದ ಚಿನ್ನದಂತಿರುವ ನಕಲಿ ಚಿನ್ನದ ಕಾಸಿನ ಸರವನ್ನು ನೀಡಿ, ನೊಂದ ಮಹಿಳೆಯಿಂದ 10 ಗ್ರಾಂ ತೂಕವುಳ್ಳ ಅಸಲಿ ಚಿನ್ನದ ಓಲೆ & ಮಾಟಿಯನ್ನು ಬಿಚ್ಚಿಸಿಕೊಂಡು ಜೊತೆಗೆ ಆಸ್ಪತ್ರೆ ಖರ್ಚಿಗೆ ಹಣ ಸಾಲುವುದಿಲ್ಲವೆಂದು ನಂಬಿಸಿ ನೊಂದ ಮಹಿಳೆ ಬಳಿಯಿದ್ದ 5000 ರೂ ಹಣವನ್ನು ಪಡೆದುಕೊಂಡು ಮೋಸ ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಹುಣಸೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹುಣಸೂರು ಉಪ-ವಿಭಾಗದ DYSP ಶ್ರೀ ರವಿಪ್ರಸಾದ್ ಸಾಹೇಬರು, ಹುಣಸೂರು ಪಟ್ಟಣ ಪೊಲೀಸ್ ಠಾಣೆಯ P.I ಶ್ರೀ ಶ್ರೀನಿವಾಸ್.ಎಲ್ ರವರ ನೇತೃತ್ವದಲ್ಲಿ ಅಪರಾಧ ಪತ್ತೆ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದು, ಈ ದಿನ ದಿನಾಂಕ:13/06/2022 ರಂದು ದಾವಣಗೆರೆ ಮೂಲದ ಆನಂದ ಹಾಗೂ ಸುಶೀಲಮ್ಮ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ, ನೊಂದ ಮಹಿಳೆಯ ಬಾಬ್ತು ಚಿನ್ನದ ಓಲೆ & ಮಾಟಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಆನಂದನ ವಿರುದ್ಧ ಈ ಹಿಂದೆ ದಾವಣಗೆರೆ, ತುಮಕೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇಂಥಹುದೇ ಪ್ರಕರಣಗಳು ದಾಖಲಾಗಿರುತ್ತವೆ.
ಈ ಪತ್ತೆ ಕಾರ್ಯದಲ್ಲಿ ಹುಣಸೂರು ಪಟ್ಟಣ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿ ಪ್ರಸಾದ್, ಅಪರಾಧ ಪತ್ತೆದಳದ ಸಿಬ್ಬಂದಿಯವರಾದ ಪ್ರಭಾಕರ್, ಇರ್ಫಾನ್, ಎಎಸ್ಐ ಪುಟ್ಟನಾಯಕ, ಭರತೇಶ್, ವೆಂಕಟೇಶ್ ಪ್ರಸಾದ್, ಮಹಿಳಾ ಸಿಬ್ಬಂದಿ ಲಕ್ಷ್ಮಿ ಹಾಗೂ ಜಗದೀಶ್ ರವರುಗಳು ಭಾಗವಹಿಸಿದ್ದು, ಪತ್ತೆಕಾರ್ಯವನ್ನು ಮೈಸೂರು ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್.ಚೇತನ್ IPS ರವರು, ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಶಿವಕುಮಾರ್ ರವರು ಶ್ಲಾಘಿಸಿರುತ್ತಾರೆ.