ನಂದಿನಿ ಮೈಸೂರು
ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಎನ್ ಆರ್ ಮೊಹಲ್ಲಾದಲ್ಲಿರುವ ಶಾಲಿಮಾರ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಧುಸೂಧನ್ ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ತಾಲೂಕು ಆರೋಗ್ಯ ಅಧಿಕಾರಿಗಳಾದ ರಾಜೇಶ್ವರಿ, ಸಮಾಜ ಸೇವಕಿ ಮಾಲಿನಿ ಆರ್ ಪಾಲಾಕ್ಷ ,
ಮಾಧ್ಯಮ ಪತ್ರಕರ್ತೆ ಕು. ನಂದಿನಿ ನಾಯಕ್,ಪೊಲೀಸ್ ಕಾನ್ಸ್ಟೇಬಲ್ ರಾದ ಜರಿಣ್ ತಾಜ್ , ಅಂಗನವಾಡಿ ಶಿಕ್ಷಕಿಯರಾದ ಜುಬೇಧ ಕಾರ್ತೂನ್, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವಾಜಿದಾ ಬಾನು, ಆಶಾ ಕಾರ್ಯಕರ್ತೆಯಾದ ಮಹಾಲಕ್ಷ್ಮಿ ಸಮಾಜ ಸೇವಕಿಯರಾದ ಶಾಲಿನಿ ಆಶಾರಾಣಿ ,ಕರಾಟೆ ಪಟು ಸರಸ್ವತಿ ಟೈಲರಿಂಗ್ ತರಬೇತಿ ಶಿಕ್ಷಕಿಯಾದ ಬರ್ಕತ್ ಉಣ್ಣಿಸ
ರವರನ್ನು ಸನ್ಮಾನಿಸಲಾಯಿತು.
ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಯೋಜನಾಧಿಕಾರಿಯಾದ ಮಲ್ಲಿಕಾರ್ಜುನ ಸ್ವಾಮಿ,ಮಹದೇವಸ್ವಾಮಿ,
ಸಂಸ್ಥೆಯ ಕ್ಷೇತ್ರ ಸಂಯೋಜ ಹಾಗೂ ಸಮುದಾಯ ಸಂಘಟಕಿಯರು ಮತ್ತು ಸಿಬ್ಬಂದಿ ವರ್ಗ ಪೋಷಕ ವರ್ಗದವರು ಭಾಗವಹಿಸಿದ್ದರು.